ಈ ರಾಶಿಯವರಿಗಿಂದು ಮೋಜು ಮಸ್ತಿಯ ಆಲೋಚನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬಸ್ಥರೊಂದಿಗೆ ಯಾತ್ರೆ. ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣಿಸಲಿದೆ. ತಾಯಿಯಿಂದ ಸಹಾಯ ದೊರೆಯುವುದು. ಶುಭಸಂಖ್ಯೆ: 8

ವೃಷಭ: ಅಸಹಾಯಕತೆಯಿಂದ ಮನೆಯವರಿಗೆ ತೊಂದರೆ. ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯದ ನಿರೀಕ್ಷೆ. ಶುಭಸಂಖ್ಯೆ: 5

ಮಿಥುನ: ನೂತನ ವ್ಯಾಪಾರಕ್ಕೆ ನಿರ್ಧರಿಸುವಿರಿ. ಐಷಾರಾಮಿ ಜೀವನ. ಆರ್ಥಿಕ ನಷ್ಟಗಳು. ದುಶ್ಚಟಗಳಿಂದ ತೊಂದರೆಯಾಗಲಿದೆ. ಶುಭಸಂಖ್ಯೆ: 1

ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಉತ್ತಮ ಹೆಸರುಗಳಿಸುವ ಪ್ರಯತ್ನ. ಸಂತೋಷದಿಂದ ಕಾಲ ಕಳೆಯುವ ನಿರ್ಧಾರ. ಶುಭಸಂಖ್ಯೆ: 1

ಸಿಂಹ: ಉದ್ಯೋಗದಲ್ಲಿ ವಿಘ್ನಗಳು ಮತ್ತು ನಷ್ಟ. ಮೋಜು ಮಸ್ತಿಯ ಆಲೋಚನೆ. ಉದ್ಯೋಗಿಗಳಿಗೆ ಅನಾರೋಗ್ಯ ಸಂಭವ. ಶುಭಸಂಖ್ಯೆ: 6

ಕನ್ಯಾ: ಪ್ರಯಾಣದಿಂದ ಅನುಕೂಲ ಮತ್ತು ಲಾಭ, ಆಧ್ಯಾತ್ಮಿಕ ಚಿಂತನೆ, ಪವಿತ್ರಸ್ಥಳ ದರ್ಶನ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ. ಶುಭಸಂಖ್ಯೆ: 3

ತುಲಾ: ಸಾರ್ವಜನಿಕ ಜೀವನದಲ್ಲಿ ಅಡೆತಡೆ, ಒತ್ತಡಗಳು. ಜೀವನ ಮುನ್ನಡೆಸುವ ಚಿಂತೆ, ಅಪಘಾತ ಸಾಧ್ಯತೆ. ಮಾತಿನಿಂದ ತೊಂದರೆ. ಶುಭಸಂಖ್ಯೆ: 3

ವೃಶ್ಚಿಕ: ಮಕ್ಕಳ ನಡವಳಿಕೆಯಿಂದ ತೊಂದರೆಯಾಗಬಹುದು. ವೈವಾಹಿಕ ಜೀವನದ ಚಿಂತೆ. ಪ್ರೀತಿ-ಪ್ರೇಮದಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 7

ಧನುಸ್ಸು: ಸಾಲಬಾಧೆ ಕಾಡಲಿದೆ. ಶತ್ರು ಕಾಟ. ಕೆಲಸಗಾರರ ಜತೆ ಮನಸ್ತಾಪ ಮಾಡಿಕೊಳ್ಳುವಿರಿ. ಅವಮಾನಕ್ಕೆ ಗುರಿಯಾಗುವಿರಿ. ಶುಭಸಂಖ್ಯೆ: 4

ಮಕರ: ಶೃಂಗಾರ ಸಾಧನೆಗಳಿಗೆ ಖರ್ಚು. ವಿವೇಚನೆ ಕಳೆದುಕೊಳ್ಳುವಿರಿ, ಸಹನೆಯಿಂದಿರಿ. ಮೋಜು ಮಸ್ತಿಯಿಂದ ತೊಂದರೆಗಳು. ಶುಭಸಂಖ್ಯೆ: 2

ಕುಂಭ: ಸ್ಥಿರಾಸ್ತಿ ಸಾಲದ ಚಿಂತೆ. ಮನೆಯಲ್ಲಿ ಧಾರ್ವಿುಕ ಆಚರಣೆಗಳು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3

ಮೀನ: ಉದ್ಯೋಗದ ಹುಡುಕಾಟ. ವಿದ್ಯಾಭ್ಯಾಸದಲ್ಲಿ ಸಮಸ್ಯೆಯಾದೀತು. ಅಧಿಕಾರಿಗಳಿಂದ ಸಮಸ್ಯೆ. ಪಾಲುದಾರರ ಸೇರ್ಪಡೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net