

ಮೇಷ: ಕಬ್ಬಿಣ ತಯಾರಕರಿಗೆ ಲಾಭ. ಪುಸ್ತಕ ವ್ಯಾಪಾರದಲ್ಲಿ ಮಂದಗತಿ. ಮಾತು ಆಡುವಾಗ ವಿವೇಚನೆಯನ್ನು ಬಳಸುವುದು ಕ್ಷೇಮ. ಶುಭಸಂಖ್ಯೆ: 5
ವೃಷಭ: ಮಕ್ಕಳಿಂದ ಅಗೌರವ ಎದುರಾದೀತು. ಕೃಷಿಕರಿಗೆ ಹಿನ್ನಡೆಯಾಗಲಿದೆ. ಸಹೋದರರಿಂದ ನಿರೀಕ್ಷಿತ ಸಹಾಯ ದೊರೆಯುವುದು. ಶುಭಸಂಖ್ಯೆ: 9
ಮಿಥುನ: ಹಲ್ಲು ನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಗಣ್ಯರ ಭೇಟಿಯಿಂದ ಸಂತಸ. ವ್ಯಾಯಾಮದ ಕಡೆ ಹೆಚ್ಚು ಗಮನಹರಿಸಿ. ಶುಭಸಂಖ್ಯೆ: 2
ಕಟಕ: ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು ನಿಮ್ಮದಾಗಲಿದೆ. ಪದವೀಧರರಿಗೆ ನೌಕರಿ ಯೋಗ. ಬಾಕಿ ಹಣ ಕೈಸೇರಿ ಸಮಾಧಾನ. ಶುಭಸಂಖ್ಯೆ: 7
ಸಿಂಹ: ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಕಾದಿದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ರೇಷ್ಮೆ ವ್ಯಾಪಾರಿಗಳಿಗೆ ಒಳ್ಳೆಯ ದಿನ. ಶುಭಸಂಖ್ಯೆ: 3
ಕನ್ಯಾ: ಉನ್ನತಾಧಿಕಾರಿಗಳ ವರ್ಗಾವಣೆ ಸಾಧ್ಯತೆ. ಧಾರ್ವಿುಕ ಕಾರ್ಯಗಳನ್ನು ಮಾಡುವಿರಿ. ಆಸ್ತಿ ದೊರೆಯುವ ಸಂಭವವಿದೆ. ಶುಭಸಂಖ್ಯೆ: 6
ತುಲಾ: ಕೌಟುಂಬಿಕ ಸಮಸ್ಯೆಗಳಲ್ಲಿ ಎಚ್ಚರಿಕೆಯಿರಲಿ. ಸಣ್ಣ ವಿಷಯಗಳು ದೊಡ್ಡದಾಗುತ್ತವೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ. ಅಧಿಕ ಶ್ರಮದಿಂದ ಜಯ ನಿಮ್ಮತ್ತ ಒಲಿಯುವುದು. ಸಾಲ ಬಾಧೆೆಯಿಂದ ಮುಕ್ತಿ ದೊರೆತು ಸಮಾಧಾನ. ಶುಭಸಂಖ್ಯೆ: 8
ಧನುಸ್ಸು: ಕೆಲಸಗಳನ್ನು ವೇಗವಾಗಿ ಮುಗಿಸಲಿದ್ದೀರಿ. ಬಿಡುವಿಲ್ಲದ ಕೆಲಸದಿಂದಾಗಿ ಶ್ರಮ, ಧ್ಯಾನ ಮಾಡಿ. ತೆರಿಗೆ ತಜ್ಞರಿಗೆ ಹೆಚ್ಚು ಆದಾಯ. ಶುಭಸಂಖ್ಯೆ:1
ಮಕರ: ಸಂತೋಷದಿಂದ ಈ ದಿನ ಕಳೆಯುತ್ತೀರಿ. ವಿದ್ಯಾರ್ಥಿ ಗಳಿಗೆ ಯಶಸ್ಸು ದೊರೆಯುವುದು. ಕೆಲಸಗಳಲ್ಲಿ ಹೆಚ್ಚಿನ ಶ್ರಮ ಅಗತ್ಯವಾಗಿದೆ. ಶುಭಸಂಖ್ಯೆ: 9
ಕುಂಭ: ಉಪನ್ಯಾಸಕರಿಗೆ ಸುಸಮಯ. ಸಾಲ ಮರುಪಾವತಿಯಿಂದ ನೆಮ್ಮದಿ. ಆಹಾರ ಪದಾರ್ಥಗಳ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 5
ಮೀನ: ವಾಹನ ಮಾರಾಟದಲ್ಲಿ ಅಭಿವೃದ್ಧಿ ಕಾಣಲಿದೆ. ಕೃಷಿ ವಿಸ್ತರಣೆಯ ಚಿಂತನೆ ಮಾಡುವಿರಿ. ಸ್ಥಿರಾಸ್ತಿ ಲಭ್ಯವಾಗುವ ಯೋಗ. ಶುಭಸಂಖ್ಯೆ: 6