

ಮೇಷ: ಸ್ನೇಹಿತರಿಂದ ಯಾವ ಸಹಾಯವನ್ನೂ ಅಪೇಕ್ಷಿಸದೆ ಆತ್ಮಾಭಿಮಾನದಿಂದ ಇರಿ. ವ್ಯರ್ಥ ಧನಹಾನಿ. ದಿನಾಂತ್ಯದಲ್ಲಿ ಬಂಧುಗಳ ಆಗಮನ. ಶುಭ ಸಂಖ್ಯೆ 6
ವೃಷಭ: ಮನೆಯಲ್ಲಿ ಆಹ್ಲಾದಕರ ವಾತಾವರಣ. ಕೈಕೊಂಡ ಕೆಲಸದಲ್ಲಿ ಕಾರ್ಯಸಿದ್ಧಿ. ಹಿತಕರ ವಿದ್ಯಮಾನಗಳು ನಡೆಯುತ್ತವೆ. ಶುಭ ಸಂಖ್ಯೆ 8
ಮಿಥುನ: ಸಾಲಗಾರರಿಂದ ಕಿರಿಕಿರಿ. ನಿಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇದು ಸಕಾಲ. ಅವ್ಯಕ್ತ ಭೀತಿ ಉಂಟಾಗುತ್ತದೆ. ಶುಭ ಸಂಖ್ಯೆ 9
ಕಟಕ: ಮಾಡದ ತಪ್ಪಿಗೆ ಅಪವಾದಗಳು ಬರುತ್ತವೆ. ಕಾರ್ಯಸಾಧನೆಯ ಸಾಧ್ಯತೆ ಕಡಿಮೆ. ಆರೋಗ್ಯದಲ್ಲಿ ಚೇತರಿಕೆ. ಶುಭ ಸಂಖ್ಯೆ 1
ಸಿಂಹ: ಹೆಂಡತಿ-ಮಕ್ಕಳೊಂದಿಗೆ ಮನಸ್ತಾಪ. ಸ್ಪರ್ಧಾಳು ಗಳಿಗೆ ಅಂತಿಮ ಹಂತದಲ್ಲಿ ಸೋಲು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಿದ್ಧಿ. ಶುಭ ಸಂಖ್ಯೆ 3
ಕನ್ಯಾ: ವ್ಯಾಪಾರ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ವಿಶೇಷ ಅಧಿಕಾರ ಪ್ರಾಪ್ತಿ. ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು. ಶುಭ ಸಂಖ್ಯೆ 7
ತುಲಾ: ಟೀಕಾಕಾರರಿಗೆ ನಿಮ್ಮ ಕಾರ್ಯವೈಖರಿಯಿಂದ ಉತ್ತರ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಧನ ನಷ್ಟ. ಶುಭ ಸಂಖ್ಯೆ 2
ವೃಶ್ಚಿಕ: ಮನಸ್ಸಿಗೆ ನೋವುಂಟು ಮಾಡುವ ಘಟನೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಶುಭ ಸಂಖ್ಯೆ 8
ಧನುಸ್ಸು: ತೃತೀಯದ ಗುರುವಿನಿಂದ ಆಸ್ತಿ ವಿವಾದ ಇತ್ಯರ್ಥ. ಆರೋಗ್ಯ ಬಿಗಡಾಯಿಸಬಹುದು. ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ವಿಶೇಷ ಧನಲಾಭ. ಶುಭ ಸಂಖ್ಯೆ 1
ಮಕರ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಬೆಳವಣಿಗೆ. ಸರಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ಧಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ. ಶುಭ ಸಂಖ್ಯೆ 4
ಕುಂಭ: ಸಹೋದ್ಯೋಗಿಗಳು ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸಂಗಾತಿಯಿಂದ ಆತ್ಮವಿಶ್ವಾಸಕ್ಕೆ ಪೆಟ್ಟು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭ ಸಂಖ್ಯೆ 7
ಮೀನ: ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲತೆ ಕಾಡಬಹುದು. ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಅನಿರೀಕ್ಷಿತ ಧನ ನಷ್ಟ ಆಗಬಹುದು. ಶುಭ ಸಂಖ್ಯೆ 5