

ಮೇಷ: ಬಂಧು-ಮಿತ್ರರಿಂದ ಯಾವ ಸಹಾಯವನ್ನೂ ಅಪೇಕ್ಷಿಸದೆ ಇರುವುದು ಉತ್ತಮ. ವ್ಯರ್ಥ ಧನಹಾನಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 1
ವೃಷಭ: ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಕೈಕೊಂಡ ಕೆಲಸದಲ್ಲಿ ಯಶ. ಹಿತಕರ ವಿದ್ಯಮಾನಗಳು ನಡೆಯುತ್ತವೆ. ಶುಭಸಂಖ್ಯೆ: 9
ಮಿಥುನ: ಕಡಿಮೆ ಲಾಭ ಅಧಿಕ ಖರ್ಚು. ಸಾಲಗಾರರಿಂದ ಕಿರಿಕಿರಿ ಅನುಭವಿಸಬೇಕಾದೀತು. ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಶುಭಸಂಖ್ಯೆ: 3
ಕಟಕ: ಸಾರ್ವಜನಿಕ ಜೀವನದಲ್ಲಿ ಅಪವಾದಗಳು. ಧನಸಂಗ್ರಹ ಸಾಧ್ಯತೆ ಕಡಿಮೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಶುಭಸಂಖ್ಯೆ: 2
ಸಿಂಹ: ಹೆಂಡತಿ-ಮಕ್ಕಳೊಂದಿಗೆ ಮನಸ್ತಾಪ. ಸ್ಪರ್ಧಾಳುಗಳಿಗೆ ಅಪಯಶಸ್ಸು. ಅವಿವಾಹಿತರಿಗೆ ವಿವಾಹದ ಪ್ರಯತ್ನದಲ್ಲಿ ಜಯ. ಶುಭಸಂಖ್ಯೆ: 5
ಕನ್ಯಾ: ವ್ಯಾಪಾರ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಆರೋಗ್ಯ, ಉತ್ಸಾಹ, ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು. ಶುಭಸಂಖ್ಯೆ: 8
ತುಲಾ: ವಿರೋಧಿಗಳಿಗೆ ನಿಮ್ಮ ಕಾರ್ಯವೈಖರಿಯಿಂದಲೇ ಉತ್ತರ. ಭೂ ವ್ಯವಹಾರದಲ್ಲಿ ಎಲ್ಲ ಆಯಾಮಗಳನ್ನು ಪರಿಶೀಲಿಸಿ. ಶುಭಸಂಖ್ಯೆ: 7
ವೃಶ್ಚಿಕ: ಮನಸ್ಸಿಗೆ ನೋವಾಗುವ ಘಟನೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಅವಕಾಶ. ಶುಭಸಂಖ್ಯೆ: 6
ಧನುಸ್ಸು: ತೃತೀಯದ ಗುರುವಿನಿಂದ ಆಸ್ತಿ ವಿವಾದ ಇತ್ಯರ್ಥ. ಆರೋಗ್ಯದಲ್ಲಿ ಎಚ್ಚರ. ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ಧನಲಾಭ. ಶುಭಸಂಖ್ಯೆ: 5
ಮಕರ: ವ್ಯಾಪಾರಸ್ಥರಿಗೆ ನಿರೀಕ್ಷಿತ ಪ್ರಗತಿ ಇಲ್ಲ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ಧಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ. ಶುಭಸಂಖ್ಯೆ: 4
ಕುಂಭ: ಕುಟುಂಬದವರು ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸಹೋದ್ಯೋಗಿಗಳಿಂದ ಆತ್ಮವಿಶ್ವಾಸಕ್ಕೆ ಪೆಟ್ಟು. ಶುಭಸಂಖ್ಯೆ: 3
ಮೀನ: ದ್ವಾದಶ ಗುರುವಿನಿಂದ ಎಲ್ಲ ಕೆಲಸಗಳಲ್ಲಿ ತೊಂದರೆ. ಗುರು ಹಿರಿಯರ ಮಾರ್ಗದರ್ಶನ ಅಗತ್ಯ. ಅನಿರೀಕ್ಷಿತ ನಷ್ಟ. ಶುಭಸಂಖ್ಯೆ: 2