ನಿತ್ಯಭವಿಷ್ಯ| ಈ ರಾಶಿಯವರು ಇಂದು ಸಂಗಾತಿಯ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು..

nity
Published on

ಮೇಷ: ಸಂಗಾತಿಯ ಸಲಹೆ ಅಮೂಲ್ಯವಾದುದು, ತೆಗೆದುಕೊಳ್ಳಿ. ಅನಿರೀಕ್ಷಿತ ಅತಿಥಿಗಳ ಆಗಮನ. ಮನೆಯಲ್ಲಿ ಸಂತೋಷ ಕೂಟ. ಶುಭಸಂಖ್ಯೆ: 5

ವೃಷಭ: ಹಿತಶತ್ರುಗಳ ಉಪಟಳ ಅತಿಯೆನಿಸೀತು, ಸಹೋದರರಿಂದ ಸಹಾಯ ದೊರೆಯುವುದು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 3

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸದ ಸುದ್ದಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 2

ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ದೊರೆಯಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7

ಸಿಂಹ: ಅಕ್ಕ ತಂಗಿಯರ ಬಾಂಧವ್ಯವನ್ನು ನಿಮ್ಮ ಹಟದಿಂದ ಹಾಳು ಮಾಡಿಕೊಳ್ಳುವುದು ತರವಲ್ಲ. ಅತಿಥಿಗಳನ್ನು ಸತ್ಕರಿಸಿ. ಶುಭಸಂಖ್ಯೆ: 9

ಕನ್ಯಾ: ಕುಟುಂಬದಲ್ಲಿ ಸಂಭ್ರಮ ಸಡಗರ. ಹಣದ ಸಮಸ್ಯೆ ಉಂಟಾಗಬಹುದು. ದಿನಾಂತ್ಯದಲ್ಲಿ ಧನಾಗಮವಾಗಿ ಸಮಾಧಾನ . ಶುಭಸಂಖ್ಯೆ: 6

ತುಲಾ: ನಿಮ್ಮ ಬಹುದಿನದ ಸಮಸ್ಯೆಗೆ ಸ್ನೇಹಿತರಿಂದ ಸೂಕ್ತ ಪರಿಹಾರ ಒದಗಿಬರಲಿದೆ. ಕಲಾವಿದರಿಗೆ ವಿಶೇಷ ದಿನ ಕಾದಿದೆ. ಶುಭಸಂಖ್ಯೆ:3

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. ಶುಭಸಂಖ್ಯೆ: 8

ಧನಸ್ಸು: ಮಾತಿನ ಬಗ್ಗೆ ನಿಗಾ ಇದ್ದಷ್ಟೂ ಒಳ್ಳೆಯದು. ಹಿತಶತ್ರುಗಳಿಂದ ಅಪಪ್ರಚಾರ. ಬೇಸರ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5

ಮಕರ: ಹಣದ ಅಪವ್ಯಯ ಸಾಧ್ಯತೆ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು. ಅಭ್ಯಾಗತರ ಆಗಮನ. ಸಂತಸ. ಶುಭಸಂಖ್ಯೆ: 2

ಕುಂಭ: ಕೋಪ ಒಳ್ಳೆಯದಲ್ಲ, ನಿಯಂತ್ರಿಸಿಕೊಳ್ಳಿ. ವ್ಯೆದ್ಯರ ಸಲಹೆ ಅಮೂಲ್ಯವಾದುದು, ತಪ್ಪದೆ ಪಾಲಿಸಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಮೀನ : ಅವಸರದ ನಿರ್ಧಾರ ಕೈಗೊಳ್ಳುವ ಮೊದಲು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮನದಿಂದ ಸಂತಸ ಇಮ್ಮಡಿಯಾದೀತು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net