ಈ ರಾಶಿಯವರ ಪ್ರಯತ್ನಗಳು ಇಂದು ಯಶಸ್ವಿಯಾಗಲಿವೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಈ ದಿನ ಅನವಶ್ಯಕ ಖರ್ಚುವೆಚ್ಚಗಳು ಎದುರಾಗಬಹುದು. ಅಪರಿಚಿತರೊಂದಿಗೆವ್ಯವಹಾರ ಮಾಡುವಾಗ ಮೋಸ ಸಾಧ್ಯತೆ. ಶುಭಸಂಖ್ಯೆ: 6

ವೃಷಭ: ವೃತ್ತಿಯಲ್ಲಿನ ಚಿಂತೆ ಬಿಟ್ಟುಬಿಡಿ. ಒಳ್ಳೆಯ ಘಟನೆಗಳು ನಡೆಯಲಿವೆ. ವಿಮಶಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 1

ಮಿಥುನ: ಆಸ್ತಿ ವಿಚಾರದಲ್ಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ಅಭಿವೃದ್ಧಿ, ನಿಮ್ಮಲ್ಲಿನ ಸಂಪತ್ತು ವೃದ್ಧಿಯಾಗುತ್ತದೆ. ಶುಭಸಂಖ್ಯೆ: 9

ಕಟಕ: ಕಿರಿಯ ಸದಸ್ಯರ ಉದ್ಯೋಗದಲ್ಲಿ ಅಸ್ಥಿರತೆ. ಕಚೇರಿಯಲ್ಲಿ ಕೆಲವು ಬದಲಾವಣೆ. ಉದ್ದಿಮೆದಾರರು , ವ್ಯಾಪಾರಿಗಳಿಗೆ ಶುಭ ದಿನ. ಶುಭಸಂಖ್ಯೆ: 5

ಸಿಂಹ: ಆದಾಯ ಹೆಚ್ಚಾಗುತ್ತದೆ, ವೆಚ್ಚವನ್ನು ನಿಯಂತ್ರಿಸಿ. ನಿಮ್ಮ ಸಕಾರಾತ್ಮಕ ಮನಸ್ಥಿತಿಯಿಂದಾಗಿ ವಿಶೇಷ ಬದಲಾವಣೆ ಘಟಿಸಲಿದೆ. ಶುಭಸಂಖ್ಯೆ: 2

ಕನ್ಯಾ: ಹಿರಿಯ ಅಧಿಕಾರಿಗಳು ನಿಮ್ಮ ಸಹನೆಯನ್ನು ಪರೀಕ್ಷಿಸಲಿದ್ದಾರೆ. ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 8

ತುಲಾ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕಾರ್ಯಗಳಿಗೆ ಇಂದು ಚಾಲನೆ. ನಿಮ್ಮ ವಿರೋಧಿಗಳಿಗೆ ಸೋಲು. ಶುಭಸಂಖ್ಯೆ: 4

ವೃಶ್ಚಿಕ: ಮನೆಯಲ್ಲಿ ವಾದ-ವಿವಾದಗಳು ಎದುರಾಗಬಹುದು. ಸಂಗಾತಿಯಿಂದ ಬೆಂಬಲ. ಅನಿರೀಕ್ಷಿತ ಧನ ಲಾಭದ ಯೋಗವಿದೆ. ಶುಭ ಸಂಖ್ಯೆ: 3

ಧನುಸ್ಸು: ಪರಿಶ್ರಮದ ಪ್ರತಿಫಲವನ್ನು ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ಖರೀದಿಯಲ್ಲಿ ಎಚ್ಚರ. ಸವಾಲಿನ ದಿನ. ಶುಭಸಂಖ್ಯೆ: 2

ಮಕರ: ಧನಲಾಭದ ಯೋಗವಿದೆ. ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಹಿರಿಯರ ಆರೋಗ್ಯದ ವಿಚಾರವಾಗಿ ತಳಮಳ. ಶುಭಸಂಖ್ಯೆ: 9

ಕುಂಭ: ಖಾಸಗಿ ಉದ್ಯೋಗಿಗಳಿಗೆ ಉತ್ತಮ ದಿನ. ಖರ್ಚು ಹೆಚ್ಚಾಗಬಹುದು. ಉದಾಸೀನದಿಂದ ಸಮಸ್ಯೆ. ಆರೋಗ್ಯದಲ್ಲಿ ಜಾಗ್ರತೆ. ಶುಭಸಂಖ್ಯೆ:1

ಮೀನ: ಉದ್ಯೋಗದಲ್ಲಿ ಒತ್ತಡ. ಖರ್ಚನ್ನು ನಿಯಂತ್ರಿಸಲು ಕಷ್ಟವಾಗಬಹುದು. ಸ್ನೇಹಿತರ ಬೆಂಬಲ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net