ಈ ರಾಶಿಯವರು ಇಂದು ಅವಸರದ ನಿರ್ಣಯ ಕೈಗೊಳ್ಳಬೇಡಿ...

Nitya-Bhavishya-vvani-1-2-1
Published on

ಮೇಷ: ಪ್ರತಿಭಾವಂತರಾದ ನೀವು ಕ್ರಿಯಾಶೀಲ ಹವ್ಯಾಸಗಳನ್ನು ನಿರ್ಲಕ್ಷಿಸದಿರಿ. ಪ್ರಭಾವಿ ಜನರಿಂದ ಅವಕಾಶಗಳು ಲಭ್ಯ. ಶುಭಸಂಖ್ಯೆ: 1

ವೃಷಭ: ಸಮೀಪದ ಸ್ಥಳಗಳಿಗೆ ಪ್ರವಾಸ ಮಾಡುವ ಅವಕಾಶಗಳಿವೆ. ಇದರಿಂದ ಒಳ್ಳೆಯ ಬಾಂಧವ್ಯಗಳೂ ಉಂಟಾಗಲಿವೆ. ಶುಭಸಂಖ್ಯೆ: 2

ಮಿಥುನ: ಆಹಾರೋದ್ಯಮದಲ್ಲಿ ಉನ್ನತಿಯನ್ನು ಹೊಂದಲು ಬಯಸುವವರಿಗೆ ಒಳ್ಳೆಯ ಅವಕಾಶಗಳು ತೆರೆದುಕೊಳ್ಳಲಿವೆ. ಶುಭಸಂಖ್ಯೆ: 9

ಕಟಕ: ಬಂಡಾಯದ ಪ್ರದರ್ಶನವನ್ನು ಮಾಡುವಷ್ಟೇ ನಿರಾಶೆ ಉಂಟಾಗಬಹುದು. ಆದರೆ ತಾಳ್ಮೆಗೂ ಅವಕಾಶ ಇದ್ದೇ ಇರಲಿ. ಶುಭಸಂಖ್ಯೆ: 8

ಸಿಂಹ: ಅವಸರದ ನಿರ್ಣಯಗಳಿಂದ ತಪ್ಪಾದ ಹಾದಿಯಲ್ಲಿ ಸಾಗುವ ಅನಿವಾರ್ಯ ಸಂದರ್ಭ ಬಂದೀತು. ಜಾಣ್ಮೆಯಿರಲಿ. ಶುಭಸಂಖ್ಯೆ: 3

ಕನ್ಯಾ: ಗೌರವವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಬಾಳಸಂಗಾತಿಯ ಬೆಂಬಲದಿಂದ ಬಾಳಿನಲ್ಲಿ ಉತ್ಕರ್ಷವಿದೆ. ಶುಭಸಂಖ್ಯೆ: 7

ತುಲಾ: ಒತ್ತಡದಿಂದಾಗಿ ಕರ್ತವ್ಯದಲ್ಲಿ ಅಡೆತಡೆಗಳು ಬರಬಹುದು. ಆದರೂ ಚೆನ್ನಾಗಿ ನಿರ್ವಹಿಸಿದರೆ ಪದೋನ್ನತಿ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ವೃಶ್ಚಿಕ: ವಿಚಿತ್ರ ಗೊಂದಲಗಳಲ್ಲಿ ಸಿಕ್ಕಿಬೀಳುವಂತಹ ಸಾಧ್ಯತೆ ಇದೆ. ಸಾರ್ವಜನಿಕವಾಗಿ ಮುಜುಗರ ಆಗದಂತೆ ಎಚ್ಚರವಿರಲಿ. ಶುಭಸಂಖ್ಯೆ: 4

ಧನಸ್ಸು: ಮೇಲಧಿಕಾರಿಗಳನ್ನು ಎದುರಿಸುವ ಕ್ಲಿಷ್ಟಕರ ಸಂದರ್ಭ ಬರಬಹುದು. ಕೌಶಲದಿಂದಲೇ ಅವರನ್ನು ಎದುರಿಸಿ. ಶುಭಸಂಖ್ಯೆ: 6

ಮಕರ: ಹಿತಶತ್ರುಗಳಿಂದ ಅಪಾಯವಾಗುವುದು ಹೆಚ್ಚು. ಅವರ ಬಗ್ಗೆ ಸಿಟ್ಟಾಗದೆ ನಿರ್ಲಕ್ಷಿಸುವುದೇ ಸದ್ಯದ ಮಟ್ಟಿಗೆ ಯೋಗ್ಯವಾಗಿದೆ. ಶುಭಸಂಖ್ಯೆ: 1

ಕುಂಭ: ಕಚೇರಿಯಲ್ಲಿ ಸಮಯಾವಧಾನ ತೋರುವಿರಿ. ಮುಖ್ಯಸ್ಥರಿಂದ ಆದರಪೂರ್ಣ ಪ್ರಶಂಸೆಗಳು ಕೂಡ ಲಭ್ಯವಾಗಲಿವೆ. ಶುಭಸಂಖ್ಯೆ: 2

ಮೀನ: ಅನೇಕ ರೀತಿಯ ಕೊರತೆಗಳು ಎದುರಾಗಬಹುದು. ಸ್ನೇಹಿತರ ನೆರವಿನಿಂದ ಸರಿದೂಗಿಸುವಂತಹ ಅವಕಾಶವೂ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net