

ಮೇಷ: ಆಸ್ತಿವಿವಾದಗಳು ಕುಟುಂಬದ ಅಸ್ಥಿರತೆಗೆ ಕಾರಣ ಆಗಬಹುದು. ನಿಮ್ಮ ಕಠಿಣ ನಿರ್ಧಾರ ದಿಂದ ಮೇಲಧಿಕಾರಿಗಳಿಗೆ ತೃಪ್ತಿ. ಶುಭಸಂಖ್ಯೆ: 3
ವೃಷಭ: ಆತ್ಮವಿಶ್ವಾಸದಿಂದ ಕೊಟ್ಟ ಕೆಲಸ ನಿರ್ವಹಿಸಿ. ಜಯ ನಿಮ್ಮದೇ. ಸಾಮಾಜಿಕ ಕೆಲಸಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿ. ಶುಭಸಂಖ್ಯೆ: 8
ಮಿಥುನ: ಅನವಶ್ಯಕ ಚಟುವಟಿಕೆಗಳಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿ. ಶುಭಸಂಖ್ಯೆ: 5
ಕಟಕ: ವ್ಯಾಪಾರ - ವ್ಯವಹಾರಕ್ಕೆ ಸಂಬಂಧಪಟ್ಟು ಅಂತಿಮನಿರ್ಧಾರ ತೆಗೆದುಕೊಳ್ಳುವ ದಿನ. ಪ್ರೇಮಿಗಳಿಗೆ ಶುಭದಿನ. ಅನಾರೋಗ್ಯ. ಶುಭಸಂಖ್ಯೆ: 6
ಸಿಂಹ: ಅನಾರೋಗ್ಯ ಬಾಧಿಸಬಹುದು. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಬಂಧ ವೃದ್ಧಿ. ಶುಭಸಂಖ್ಯೆ: 7
ಕನ್ಯಾ: ಖಾಸಗಿ ಕ್ಷೇತ್ರದಲ್ಲಿ ಲಾಭ ಸಾಧ್ಯತೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ವೃತ್ತಿಪರ ಜೀವನದಲ್ಲಿ ಪ್ರಗತಿ. ಶುಭಸುದ್ದಿ. ಶುಭಸಂಖ್ಯೆ: 4
ತುಲಾ: ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಉದ್ದಿಮೆದಾರರಿಗೆ ಆರ್ಥಿಕ ಪ್ರಗತಿ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2
ವೃಶ್ಚಿಕ: ವ್ಯಾಪಾರದಲ್ಲಿ ಹೊಸ ಪಾಲುದಾರರ ಪ್ರವೇಶ. ನ್ಯಾಯಾಲಯದ ಪ್ರಕರಣದಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 9
ಧನುಸ್ಸು: ಕಚೇರಿಯಲ್ಲಿ ವಿವಾದಗಳು ಸೃಷ್ಟಿಯಾಗಬಹುದು. ಮೇಲಧಿಕಾರಿಗಳಿಂದ ನಿರ್ಲಕ್ಷ್ಯ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 8
ಮಕರ: ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಸಾಮಾಜಿಕ ಪ್ರಶಂಸೆಗೆ ಪಾತ್ರರಾಗುವಿರಿ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಶುಭಸಂಖ್ಯೆ: 6
ಕುಂಭ: ಜೀವನಸಂಗಾತಿಯಿಂದ ಬೆಂಬಲ. ಮಾನಸಿಕ ಗೊಂದಲಕ್ಕೆ ಗುರಿಯಾಗುವಿರಿ. ನಿಮ್ಮ ದೌರ್ಬಲ್ಯಗಳನ್ನು ಪ್ರದರ್ಶಿಸಬೇಡಿ. ಶುಭಸಂಖ್ಯೆ: 1
ಮೀನ: ವ್ಯಾಪಾರಸ್ಥರಿಗೆ ಉತ್ತಮ ಫಲಿತಾಂಶದ ದಿನ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಘಟನೆ. ಶುಭಸಂಖ್ಯೆ: 8