

ಮೇಷ: ಮನೆಗೆ ವಿಶೇಷ ಅತಿಥಿಗಳು ಆಗಮಿಸುವರು. ಸಹೋದರಿಯರಿಂದ ಸಲಹೆ ದೊರೆಯಲಿದೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7
ವೃಷಭ: ಹಿತಶತ್ರುಗಳಿಂದ ತೊಂದರೆ ಉಂಟಾದೀತು. ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ. ಮಾತಿನ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 6
ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಅನವಶ್ಯಕ ವಾಗ್ವಾದಗಳಿಗೆ ಆಸ್ಪದ ಕೊಡಬೇಡಿ. ಸಮಾಧಾನಚಿತ್ತದಿಂದಿರಿ. ಶುಭಸಂಖ್ಯೆ: 8
ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4
ಸಿಂಹ: ನೂತನ ವಾಹನ ಖರೀದಿಯ ಬಗ್ಗೆ ಯೋಚನೆ. ಆತ್ಮೀಯರ ಸಮಾಗಮದಿಂದ ಸಂತಸದ ವಾತಾವರಣ. ವಿಹಾರ. ಶುಭಸಂಖ್ಯೆ: 3
ಕನ್ಯಾ: ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆ ಹೆಚ್ಚು. ಆಸ್ತಿ ವಿಚಾರದಲ್ಲಿ ತಾಳ್ಮೆ ವಹಿಸಿ. ಕೋಪ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 4
ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಸಂತೋಷಕೂಟ. ಶುಭಸಂಖ್ಯೆ: 2
ವೃಶ್ಚಿಕ: ಬಹುದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆತು ನಿರಾಳ. ಹಿರಿಯರ ಆಶೀರ್ವಾದ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7
ಧನಸ್ಸು: ರಾಶ್ಯಾಧಿಪತಿಯ ನೀಚತ್ವದಿಂದ ಕೆಲಸಗಳಲ್ಲಿ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6
ಮಕರ: ಮಾನಸಿಕ ಅಶಾಂತಿ. ಆರೋಗ್ಯ ಹದಗೆಟ್ಟೀತು. ವೈದ್ಯರ ಸಲಹೆಯನ್ನು ಚಾಚೂತಪ್ಪದೆ ಪಾಲಿಸಿ. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 3
ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ತಾಳಿ. ಹಿತಶತ್ರುಗಳು ಯಾವತ್ತಿಗೂ ಅಪಾಯಕಾರಿಗಳೇ. ಅವರ ಬಗ್ಗೆ ಅನುಕಂಪ ಬೇಡ. ಶುಭಸಂಖ್ಯೆ: 7
ಮೀನ : ಅನಿರೀಕ್ಷಿತ ಧನಲಾಭವಾಗಿ ಸಂತಸ. ಸ್ನೇಹಿತರಿಂದ ಪ್ರಶಂಸೆಯ ಸುರಿಮಳೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8