ಈ ರಾಶಿಯವರಿಗೆ ಇಂದು ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದ ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಹಣದ ಅಡಚಣೆ ಉಂಟಾದೀತು. ಶುಭಸಂಖ್ಯೆ: 3

ವೃಷಭ: ವ್ಯಾಪಾರಸ್ಥರಿಗೆ ಕೆಲಸಗಾರರಿಂದ ಕಿರಿಕಿರಿ. ವೃಥಾ ಖರ್ಚು. ಸಕಾಲಕ್ಕೆ ಆತ್ಮೀಯ ಸ್ನೇಹಿತನ ಮಾರ್ಗದರ್ಶನ ದೊರೆಯಲಿದೆ. ಶುಭಸಂಖ್ಯೆ: 9

ಮಿಥುನ: ಕೆಲಸಗಳಲ್ಲಿ ವಿಘ್ನ. ಕುಟುಂಬದ ಹಲವು ದಿನಗಳ ವಿವಾದಕ್ಕೆ ರ್ತಾಕ ಅಂತ್ಯ. ಅನವಶ್ಯಕ ಖರ್ಚು. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 6

ಕಟಕ: ಕಲಾವಿದರಿಗೆ ಅಲ್ಪ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ ಬಂದು ಮನೆಯಲ್ಲಿ ಸಡಗರ. ಶುಭಸಂಖ್ಯೆ: 4

ಸಿಂಹ: ಶುಭಕಾರ್ಯ ಯತ್ನ ವಿಫಲ. ಮಕ್ಕಳ ಬಗ್ಗೆ ಅಂಧ ಪ್ರೀತಿಯನ್ನು ತೋರಿಸಬೇಡಿ. ತಾಯಿಯ ಮಾತನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 3

ಕನ್ಯಾ: ನಿಮ್ಮ ಪ್ರತಿಭೆಗೆ ತಕ್ಕ ಗೌರವ ದೊರೆತು ಸಮಾಧಾನ. ಕೃಷಿಕರಿಗೆ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ ಕಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 2

ತುಲಾ: ನಂಬಿದವರಿಂದಲೇ ವಂಚನೆ. ಆಸ್ತಿ ವಿವಾದದಲ್ಲಿ ಸಮಾಧಾನಕರ ಬೆಳವಣಿಗೆ. ಮನೆಯಲ್ಲಿ ಮಂಗಳ ಕಾರ್ಯಕ್ಕೆ ನಿರ್ಧಾರ. ಶುಭಸಂಖ್ಯೆ: 4

ವೃಶ್ಚಿಕ: ಪತ್ನಿಯೊಂದಿಗೆ ಧರ್ಮಕಾರ್ಯ ಆಚರಣೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ: 6

ಧನುಸ್ಸು: ಕಾರ್ಯಸಾಧನೆಗಾಗಿ ತಿರುಗಾಟ. ಅನವಶ್ಯಕ ಮಾತುಗಳನ್ನು ಹೇಳಬೇಕಾಗಬಹುದು. ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು. ಶುಭಸಂಖ್ಯೆ: 7

ಮಕರ: ದುಷ್ಟ ಜನರ ಸಹವಾಸದಿಂದ ಕುಟುಂಬದಲ್ಲಿ ಸಮಸ್ಯೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ. ಪತ್ನಿಗೆ ಅನಾರೋಗ್ಯ. ಶುಭ ಸಂಖ್ಯೆ 6

ಕುಂಭ: ಅನವಶ್ಯಕವಾಗಿ ಕುಟುಂಬದಲ್ಲಿ ಕಲಹ. ಕೃಷಿಯಲ್ಲಿ ಅಲ್ಪ ಲಾಭ. ಹಿತೈಷಿಗಳಿಂದ ಕಿರುಕುಳ. ಭೂ ವ್ಯವಹಾರಗಳಲ್ಲಿ ಅಡಚಣೆ. ಶುಭಸಂಖ್ಯೆ: 5

ಮೀನ: ಖಾಸಗಿ ಉದ್ಯೋಗಿಗಳಿಗೆ ಪ್ರಗತಿ. ಸಾರ್ವಜನಿಕವಾಗಿ ಬದಲಾವಣೆ. ಧನಲಾಭ. ಕುಟುಂಬದಲ್ಲಿ ಸಂತೋಷದ ವಾತಾವರಣ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net