ನಿತ್ಯಭವಿಷ್ಯ|ಈ ರಾಶಿಯವರು ಇಂದು ಅನಗತ್ಯ ವಾದ ವಿವಾದಗಳಿಗೆ ಸಿಲುಕಲಿದ್ದಾರೆ..

Nitya-Bhavishya-vvani-1-2-1-1
Published on

ಮೇಷ: ಧೈರ್ಯವೇ ನಿಮ್ಮ ಪ್ರಮುಖ ಆಯುಧವಾಗಿರಲಿ. ಕುಲದೇವರ ಕೃಪೆಯಿಂದ ಯಾವುದೇ ವಿಘ್ನಗಳೂ ಬರಲಾರವು. ನೆಮ್ಮದಿಯಾಗಿರಿ. ಶುಭಸಂಖ್ಯೆ: 7

ವೃಷಭ: ಬಾಳಸಂಗಾತಿಯ ಬಳಿ ಏನನ್ನೂ ಮುಚ್ಚಿಡಬೇಡಿ. ಇದರಿಂದ ಹಿಂದಿನ ನಾನಾ ಬಗೆಯ ಕಿರಿಕಿರಿಗಳೆಲ್ಲ ಸಂಪೂರ್ಣ ಮಾಯವಾಗಲಿವೆ. ಶುಭಸಂಖ್ಯೆ: 4

ಮಿಥುನ: ದಾರಿಯಲ್ಲಿ ಹೋಗುವಂತಹ ಸಮಸ್ಯೆಯನ್ನು ಗಂಟುಹಾಕಿಕೊಳ್ಳಬೇಡಿ. ನೀವು ನಿಮ್ಮ ಪಾಡಿಗೆ ಸುಮ್ಮನಿದ್ದರೆ ನಿರಾಳತೆ ಲಭ್ಯ. ಶುಭಸಂಖ್ಯೆ: 1

ಕಟಕ: ಮಕ್ಕಳ ಬಗೆಗೆ ಎಷ್ಟೇ ಪ್ರೀತಿ ಇದ್ದರೂ ಅದನ್ನು ತೋರಿಸುವುದು ಕೂಡ ಮುಖ್ಯ. ಇದರಿಂದ ಜೀವನಾನುಭವ ವೃದ್ಧಿಸಲಿದೆ. ಶುಭಸಂಖ್ಯೆ: 6

ಸಿಂಹ: ಜಗತ್ತೇ ತಲೆಯ ಮೇಲೆ ಬಿದ್ದಂತೆ ಚಡಪಡಿಸುವ ವರ್ತನೆ ತೋರಿಸುವುದೇನೂ ಬೇಡ. ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡದಿರಿ. ಶುಭಸಂಖ್ಯೆ: 2

ಕನ್ಯಾ: ಅನಗತ್ಯವಾದ ವಾಗ್ವಾದಗಳಿಗೆ ಸಿಲುಕುವಂತಹ ಸಾಧ್ಯತೆಗಳು ಅಧಿಕವಾಗಿವೆ. ನಿಮ್ಮನ್ನು ನೀವೇ ನಿಯಂತ್ರಿಸಿಕೊಂಡರೆ ಉತ್ತಮ. ಶುಭಸಂಖ್ಯೆ: 5

ತುಲಾ: ಸುತ್ತುವರಿದಿರುವ ವ್ಯಾಜ್ಯಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಮೃದುವಾದ ಮಾತುಗಳಿಂದಲೇ ಎಲ್ಲರ ಮನಸ್ಸನ್ನೂ ಜಯಿಸಿ. ಶುಭಸಂಖ್ಯೆ: 9

ವೃಶ್ಚಿಕ: ಸಹೋದ್ಯೋಗಿಗಳ ಜತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆತ್ಮವಿಮರ್ಶೆಯಿಂದ ಸಮಸ್ಯೆಗಳಿಗೆ ಮುಕ್ತಿ ಸಾಧ್ಯ. ಶುಭಸಂಖ್ಯೆ: 3

ಧನಸ್ಸು: ಸದ್ಯಕ್ಕೆ ಹೊಸದಾದ ವಿರೋಧಿಗಳನ್ನು ಸೃಷ್ಟಿ ಮಾಡಿಕೊಳ್ಳದಿರುವುದೇ ಕ್ಷೇಮಕರ. ಯಾರನ್ನೂ ವಿಮಶಿಸುವುದಕ್ಕೆ ಹೋಗದಿರಿ. ಶುಭಸಂಖ್ಯೆ: 8

ಮಕರ: ಒತ್ತಡಗಳು ಎಲ್ಲರಿಗೂ ನಿತ್ಯ ಇದ್ದೇ ಇರುತ್ತವೆ. ನಿರ್ವಿಘ್ನದಾಯಕ ಗಣೇಶನನ್ನು ಪ್ರಾರ್ಥಿಸಿ. ಉದ್ವೇಗ ನಿಯಂತ್ರಣ ಸಾಧ್ಯ. ಶುಭಸಂಖ್ಯೆ: 1

ಕುಂಭ:  ನಿಮ್ಮ ಯಶಸ್ಸನ್ನು ಕಂಡು ಕೆಲವರು ಟೀಕೆ ಮಾಡಬಹುದು. ಅಂಥವರ ಎದುರು ಉದ್ವಿಗ್ನತೆ ಹೊಂದದಿರಿ. ತಾಳ್ಮೆ ಇದ್ದಿರಲಿ. ಶುಭಸಂಖ್ಯೆ: 4

ಮೀನ : ಯಾರಿಗೆ ಯಾರೂ ಇಲ್ಲ ಎಂಬ ನಿತ್ಯ ಸತ್ಯವು ಅನುಭವಕ್ಕೂ ಬರುತ್ತದೆ. ಎಲ್ಲ ಜನರ ಜತೆಗೂ ಚೆನ್ನಾಗಿದ್ದರೆ ಸಫಲರಾಗುವಿರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net