ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ಅಧಿಕ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳ ಜತೆ ಬಾಂಧವ್ಯ ವೃದ್ಧಿ. ನಿಮ್ಮ ಕಾರ್ಯಕ್ಕೆ ಹಿರಿಯರ ಹಾರೈಕೆ. ಶುಭಸಂಖ್ಯೆ: 9

ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಋಣಾತ್ಮಕ ಚಿಂತನೆಯಿಂದ ಹೊರಬನ್ನಿ. ಹಳೇ ಸ್ನೇಹಿತನ ಭೆೇಟಿ. ಶುಭಸಂಖ್ಯೆ: 2

ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಬಹುದು. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ. ಸಹನೆಯಿಂದ ನಿಭಾಯಿಸಿ. ಶುಭಸಂಖ್ಯೆ: 8

ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 6

ಸಿಂಹ: ಅನವಶ್ಯಕವಾಗಿ ತಿರುಗಾಟ ಮಾಡಬೇಕಾದೀತು. ಸ್ವಂತ ಗ್ರಾಮಕ್ಕೆ ಭೇಟಿ. ವಾದಕರಿಗೆ ವಿಶೇಷ ಲಾಭ. ಭೂ ವಿವಾದದ ತೀರ್ಪು. ಶುಭಸಂಖ್ಯೆ: 7

ಕನ್ಯಾ: ಅನಿರೀಕ್ಷಿತ ಧನಲಾಭ. ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 9

ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಸಂಗಾತಿಯೊಂದಿಗೆ ವಿರಸ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 3

ವೃಶ್ಚಿಕ: ಮನೆ ಬದಲಾವಣೆಯ ಸಾಧ್ಯತೆ. ಭೂವಿವಾದದ ತೀರ್ಪ. ನಿರಾಸೆ. ಕುಟುಂಬದೊಂದಿಗೆ ಸಮಾಲೋಚನೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:1

ಧನುಸ್ಸು: ಕೆಲವೊಂದು ಘಟನೆಗಳು ನಿಮ್ಮ ಅಸಹನೆಗೆ ಕಾರಣ ಆಗಬಹುದು. ಸಾರ್ವಜನಿಕವಾಗಿ ಅವಮಾನ. ಸ್ನೇಹಿತನಿಂದ ಸಮಾಧಾನ. ಶುಭಸಂಖ್ಯೆ: 8

ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಅಸಮಾಧಾನ. ಸ್ತ್ರೀಯ ರಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 3

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಪುರಸ್ಕಾರ. ಪತ್ನಿಯೊಂದಿಗೆ ಧಾರ್ವಿುಕ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 6

ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸವಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ವಂಚನೆ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net