

ಮೇಷ: ನಿಮ್ಮ ಸಮಾಜ ಸೇವೆಯು ಮನ್ನಣೆಗೆ ಪಾತ್ರವಾಗುತ್ತದೆ. ಅನಿರೀಕ್ಷಿತ ಬದಲಾವಣೆ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 5
ವೃಷಭ: ಶ್ರಮಕ್ಕೆ ಪ್ರತಿಫಲ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಸರ್ಕಾರಿ ಕೆಲಸದಲ್ಲಿ ನಿರೀಕ್ಷಿತ ಫಲ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 4
ಮಿಥುನ: ವಿದೇಶ ಪ್ರವಾಸಕ್ಕೆ ತೆರಳುವ ಸಂಭವ. ಕೃಷಿಕರಿಗೆ ನಷ್ಟ ಉಂಟಾಗುವ ಸಾಧ್ಯತೆ, ಹುಷಾರು. ವಿವಾಹಿತರಿಗೆ ವಿವಾಹಸಿದ್ಧಿ. ಶುಭಸಂಖ್ಯೆ: 1
ಕಟಕ: ಸಗಟು ವ್ಯವಹಾರದಲ್ಲಿ ಧನ ನಷ್ಟವಾಗುವ ಅಪಾಯವಿದೆ. ಅನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿ. ಅಧಿಕಾರ ಪ್ರಾಪ್ತಿಯಲ್ಲಿ ಅಡೆತಡೆ. ಶುಭಸಂಖ್ಯೆ: 5
ಸಿಂಹ: ಮಾನಸಿಕವಾಗಿ ಸದೃಢರಾಗಿರಿ. ಸಾಲ ತೀರಿಸಲು ಹಣ ಸಹಾಯ ಒದಗಿ ಬರಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 8
ಕನ್ಯಾ: ತಾಯಿಯ ಆರೋಗ್ಯ ಬಿಗಡಾಯಿಸಬಹುದು. ಸಂಕೋಚ ಪ್ರವೃತ್ತಿಯಿಂದ ತೊಂದರೆ. ಗೃಹೋಪ ಕರಣ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 2
ತುಲಾ: ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ಸ್ನೇಹಿತನಿಂದ ಸಹಾಯ. ಸಾಲಗಾರರಿಂದ ಕಿರುಕುಳ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3
ವೃಶ್ಚಿಕ: ಸ್ತ್ರೀಯರಿಗೆ ಶುಭದಿನ. ಮೋಸ ಹೋಗುವ ಸಾಧ್ಯತೆ. ಅತಿಥಿಯ ಆಗಮನ. ಸಾರ್ವಜನಿಕ ಜೀವನದಲ್ಲಿ ಮನ್ನಣೆ, ಗೌರವ. ಶುಭಸಂಖ್ಯೆ: 6
ಧನುಸ್ಸು: ಸಹೋದ್ಯೋಗಿಗಳಿಂದ ಸಹಕಾರ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ನಷ್ಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 2
ಮಕರ: ಆಹಾರ ಸೇವಿಸುವಾಗ ಎಚ್ಚರವಿರಲಿ. ಅನವಶ್ಯಕ ಖರ್ಚು ತಲೆದೋರಬಹುದು. ಹೊಸ ವಾಹನ ಖರೀದಿಸುವ ಅವಕಾಶ. ಶುಭಸಂಖ್ಯೆ: 4
ಕುಂಭ: ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಅಪವಾದ ಬಂದೀತು. ಹೃದಯ ಸಂಬಂಧಿ ರೋಗ ಉಲ್ಬಣ. ಸಾಲಗಾರರ ಕಿರುಕುಳ. ಶುಭಸಂಖ್ಯೆ: 8
ಮೀನ: ಉನ್ನತ ವ್ಯಾಸಂಗದ ಪ್ರಾರಂಭ. ಅವಿವಾಹಿತರಿಗೆ ಶುಭ ಸುದ್ದಿ. ನನೆಗುದಿಗೆ ಬಿದ್ದ ಕೆಲಸದ ಪುನರಾರಂಭ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 6