ಈ ರಾಶಿಯವರಿಗಿಂದು ನಿರೀಕ್ಷಿತ ಆದಾಯ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಮಾಜದಲ್ಲಿ ಗೌರವ. ಉತ್ತಮ ಬುದ್ಧಿಶಕ್ತಿ. ಮನಃಶಾಂತಿ. ಆರೋಗ್ಯದಲ್ಲಿ ಏರುಪೇರು ಆದೀತು. ವ್ಯಾಪಾರದಲ್ಲಿ ಮಂದಗತಿ. ಶುಭಸಂಖ್ಯೆ: 8

ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ದುಷ್ಟ ಜನರಿಂದ ದೂರವಿರಿ. ವಿಧೇಯತೆಯೇ ಯಶಸ್ಸಿನ ಮೆಟ್ಟಿಲು ಎಂಬುದನ್ನು ನಂಬಿ. ಶುಭಸಂಖ್ಯೆ: 6

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ. ಪರರಿಗೆ ಉಪಕಾರ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಸಿಗುವುದು. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 3

ಕಟಕ: ಅಧಿಕಾರಿಗಳಿಂದ ಪ್ರಶಂಸೆ. ಸ್ಥಿರಾಸ್ತಿ ಮಾರಾಟ. ವೈವಾಹಿಕ ಜೀವನದಲ್ಲಿ ತೊಂದರೆ. ಹಣಕಾಸಿನ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 1

ಸಿಂಹ: ಅನವಶ್ಯಕ ವಿಷಯಗಳ ಚರ್ಚೆ ಮಾಡಲು ಹೋಗಬೇಡಿ. ಶತ್ರುಗಳ ಜಾಲದಲ್ಲಿ ಸಿಲುಕುವಿರಿ, ಎಚ್ಚರದಿಂದ ವರ್ತಿಸುವುದು ಅಗತ್ಯ. ಶುಭಸಂಖ್ಯೆ: 9

ಕನ್ಯಾ: ಮನೆಗೆ ಹಿರಿಯರ ಆಗಮನದಿಂದ ಮಾನಸಿಕ ಸಮಾಧಾನ. ಸರಾಗವಾಗಿ ಯಶಸ್ಸನ್ನು ಕಾಣುವಿರಿ. ಕೃಷಿಯಲ್ಲಿ ಅಧಿಕ ಲಾಭ. ಶುಭಸಂಖ್ಯೆ: 4

ತುಲಾ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಅನವಶ್ಯಕ ದುಂದು ವೆಚ್ಚ ಮಾಡಬೇಡಿ. ಶುಭಸಂಖ್ಯೆ: 7

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗಬಹುದು. ವಾಹನ ಯೋಗವಿದೆ. ಪ್ರೀತಿ ಪಾತ್ರರ ಆಗಮನ. ಕೋಪ ಜಾಸ್ತಿ, ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 4

ಧನುಸ್ಸು: ನಿರೀಕ್ಷಿತ ಆದಾಯ ಸಿಗಲಿದೆ. ಮಾನಸಿಕ ಒತ್ತಡ. ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿಯಾಗಿ ತುಸು ನೆಮ್ಮದಿ. ಅಕಾಲ ಭೋಜನ. ಶುಭಸಂಖ್ಯೆ: 5

ಮಕರ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ. ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ. ಮಾನಸಿಕ ಒತ್ತಡ. ಇಷ್ಟದೇವರನ್ನು ಧ್ಯಾನಿಸಿ. ಶುಭಸಂಖ್ಯೆ:3

ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿಯಿದೆ. ಜಾಸ್ತಿ ಕೋಪ ಬಂದರೂ ಸ್ವ ನಿಯಂತ್ರಣವಿರಲಿ, ದ್ರವ್ಯನಾಶ. ಕಾರ್ಯ ವಿಕಲ್ಪ. ಶುಭಸಂಖ್ಯೆ: 6

ಮೀನ: ಶ್ರಮದಿಂದ ಕಾರ್ಯ ಸಾಧ್ಯವಾಗಲಿದೆ. ತಾಳ್ಮೆಯಿಂದ ಇರುವುದು ಉತ್ತಮ ನಿರ್ಧಾರ. ಅವಾಚ್ಯ ಶಬ್ದಗಳಿಂದ ನಿಂದನೆ ಬೇಡ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net