ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆದಾಯವು ಹೆಚ್ಚಾಗುವ ಯೋಗವಿದೆ..!

Nitya-Bhavishya-vvani-1-2
Published on

ಮೇಷ: ನಿಮ್ಮ ಜನಪ್ರಿಯತೆ ಹೆಚ್ಚಾಗುವುದು. ವೃತ್ತಿಪರ ಕೆಲಸಗಳು ಸುಗಮವಾಗಿರುತ್ತವೆ. ನಿಮ್ಮ ಆದಾಯವು ಹೆಚ್ಚಾಗುವ ಯೋಗವಿದೆ. ಶುಭಸಂಖ್ಯೆ: 8

ವೃಷಭ: ಇದು ನಿಮಗೆ ಉತ್ತಮ ದಿನ. ಕೆಲಸದ ಸ್ಥಳದಲ್ಲಿ ಮಾಡಿದ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಪ್ರಗತಿಗೆ ಕೊಡುಗೆ ನೀಡುತ್ತವೆ. ಶುಭಸಂಖ್ಯೆ:1

ಮಿಥುನ: ನಿಮ್ಮ ಮಹತ್ವಾಕಾಂಕ್ಷೆಯ ಸಾಹಸಕ್ಕೆ ಯಶ. ವ್ಯಾಸಂಗ, ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ. ಶುಭಸಂಖ್ಯೆ: 2

ಕಟಕ: ಕೆಲಸದ ಸ್ಥಳದಲ್ಲಿ ಕೊನೆಯ ನಿಮಿಷದ ನಿರ್ಧಾರಗಳು ಬದಲಾವಣೆಗೆ ಕಾರಣ ಆಗಬಹುದು. ನಿರೀಕ್ಷಿತ ಯಶಸ್ಸನ್ನು ಸಾಧಿಸುವಿರಿ. ಶುಭಸಂಖ್ಯೆ: 4

ಸಿಂಹ: ವೃತ್ತಿಗೆ ಸಂಬಂಧಿಸಿ, ಫಲಿತಾಂಶಗಳನ್ನು ಪಡೆಯಲು ಕಷ್ಟಪಡಲೇಬೇಕು. ನಿಮ್ಮ ಮೇಲಧಿಕಾರಿಗಳು ಗೊಂದಲಗೊಳಿಸಬಹುದು. ಶುಭಸಂಖ್ಯೆ:9

ಕನ್ಯಾ: ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಆದಾಯದಲ್ಲಿ ಹೆಚ್ಚಳ ಸಾಧ್ಯ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ. ಶುಭಸಂಖ್ಯೆ: 5

ತುಲಾ: ವೃತ್ತಿಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗ ಬಹುದು. ಸರ್ಕಾರಿ ಕ್ಷೇತ್ರದಲ್ಲಿ ಬಡ್ತಿ ಸಾಧ್ಯತೆ. ಸಂಗಾತಿಯ ಸಲಹೆ ಪಾಲಿಸಿ. ಶುಭಸಂಖ್ಯೆ: 6

ವೃಶ್ಚಿಕ: ನಿಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಪ್ರಶಂಸೆ ಸಿಗಲಿದೆ. ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಶುಭಸಂಖ್ಯೆ: 5

ಧನುಸ್ಸು: ವ್ಯಾಪಾರ ಸಂಬಂಧ ದೂರದ ಪ್ರಯಾಣ ಸಾಧ್ಯತೆ. ಯಾವುದೇ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತೀರಿ. ಶಿಕ್ಷಣದಲ್ಲಿ ಯಶ. ಶುಭಸಂಖ್ಯೆ: 6

ಮಕರ: ಅದೃಷ್ಟವು ನಿಮಗೆ ಅನುಕೂಲವಾಗಲಿದೆ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳು ಕ್ರಿಯಾತ್ಮಕವಾಗಿ ಮುಂದುವರಿಯುವವು. ಶುಭಸಂಖ್ಯೆ: 4

ಕುಂಭ: ವ್ಯಾಪಾರ ಕ್ಷೇತ್ರದಲ್ಲಿ, ಪ್ರತಿಕೂಲ ಸನ್ನಿವೇಶಗಳು ಎದುರಾಗಬಹುದು. ಪ್ರಗತಿಪರ ಬದಲಾವಣೆಯಿಂದ ಅದ್ಭುತ ತಿರುವು. ಶುಭಸಂಖ್ಯೆ: 7

ಮೀನ: ಬದಲಾವಣೆಗೆ ಒಳ್ಳೆಯ ಸಮಯವಲ್ಲ. ಆರ್ಥಿಕವಾಗಿ, ಕಠಿಣ ಶ್ರಮದ ಪ್ರತಿಫಲ ಪಡೆಯಬಹುದು. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net