

ಮೇಷ: ಹೋಟೆಲ್, ಹೋಮ್್ಟೇ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ದಿನವಾಗಿದೆ. ಶುಭಸಂಖ್ಯೆ: 1
ವೃಷಭ: ವಿವಾಹಾಪೇಕ್ಷಿಗಳು ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯಲು ವಿಶೇಷ ಅವಕಾಶವಿದೆ. ಶುಭಸಂಖ್ಯೆ: 4
ಮಿಥುನ: ದೂರದ ಬಾಂಧವರೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ. ಶುಭಸಂಖ್ಯೆ: 9
ಕಟಕ: ಸಮಾಜದಲ್ಲಿ ಸಕಾರಾತ್ಮವಾಗಿ ಗುರುತಿಸಿಕೊಂಡ ನೀವು ಅದರಿಂದಾಗಿಯೇ ಹೆಚ್ಚು ಹೆಚ್ಚು ಅರ್ಥಪೂರ್ಣತೆ ಪಡೆಯಲಿದ್ದೀರಿ. ಶುಭಸಂಖ್ಯೆ: 2
ಸಿಂಹ: ಜನಪ್ರಿಯತೆ, ಜನಬೆಂಬಲಗಳನ್ನು ಕ್ರೋಡೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಶುಭಸಂಖ್ಯೆ: 6
ಕನ್ಯಾ: ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ. ಶುಭಸಂಖ್ಯೆ: 7
ತುಲಾ: ಜೀವನದಲ್ಲಿ ಹಿರಿಯರನ್ನು ಸದಾ ಕಾಲವೂ ಗೌರವದಿಂದ ಕಾಣುವ ನಿಮಗೆ ವಿಶೇಷ ಪ್ರಶಂಸೆಯ ಯೋಗವಿದೆ. ಶುಭಸಂಖ್ಯೆ: 3
ವೃಶ್ಚಿಕ: ನೀವು ಇತರರಂತೆ ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ ಎಂಬುದರಿಂದಾಗಿ ಶ್ಲಾಘನೆಯನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 8
ಧನಸ್ಸು: ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಾರಿಗಳೂ ಕ್ರಿಯಾಶೀಲರೂ ಆಗುವ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗಲಿದೆ. ಶುಭಸಂಖ್ಯೆ: 1
ಮಕರ: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮನೆಯೂ ನೆಮ್ಮದಿಯಾಗಿರುತ್ತದೆ ಎಂಬುದು ಅರ್ಥವಾಗಲಿದೆ. ಶುಭಸಂಖ್ಯೆ: 4
ಕುಂಭ: ಮದುವೆ ಎಂದರೆ ಲಾಟರಿಯಂತೆ ಎಂದು ಭಾವಿಸಿ ನಿರಾಶೆ ಹೊಂದಬೇಡಿ. ಉತ್ತಮ ಸಂಗಾತಿ ಸಿಗಲು ಸಕಾಲ. ಶುಭಸಂಖ್ಯೆ: 9
ಮೀನ: ವಾಹನಚಾಲನೆಯ ರೋನಿತ್ಯ ಭವಿಷ್ಯ:ಮಾಂಚನಕ್ಕಾಗಿ ವಿಪರೀತವಾದ ವೇಗದ ಚಾಲನೆ ಬೇಡ. ಅಪಘಾತದ ಅಪಾಯವಿದೆ. ಶುಭಸಂಖ್ಯೆ: 5