ಈ ರಾಶಿಯವರಿಗಿಂದು ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಭೂಮಿ ಮತ್ತು ವಾಹನ ಖರೀದಿಗೆ ಸುಸಂದರ್ಭ. ತಂದೆಯಿಂದ ನಷ್ಟ ಮತ್ತು ಕಿರಿಕಿರಿ. ತಾಯಿಯಿಂದ ಅನುಕೂಲ ಮತ್ತು ಸಾಂತ್ವನ. ಶುಭಸಂಖ್ಯೆ: 9

ವೃಷಭ: ಧನಲಾಭ. ಸಹೋದರನೊಂದಿಗೆ ಕಿರಿಕಿರಿ- ಮನಸ್ತಾಪ. ಪ್ರಯಾಣ ಮತ್ತು ಪತ್ರವ್ಯವಹಾರಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 1

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಸಂಗಾತಿ ಮತ್ತು ಸ್ನೇಹಿತರಿಂದ ಧನಾಗಮ. ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 2

ಕಟಕ: ಶತ್ರು ಕಾಟ. ನರಸಿಂಹ ದೇವರನ್ನು ಭಕ್ತಿಯಿಂದ ಭಜಿಸಿ. ಆರೋಗ್ಯದಲ್ಲಿ ಏರುಪೇರು ಆಗಬಹುದು, ಜಾಗ್ರತೆ. ತಂದೆಯಿಂದ ನಷ್ಟ. ಶುಭಸಂಖ್ಯೆ: 5

ಸಿಂಹ: ಅನಿರೀಕ್ಷಿತವಾಗಿ ಅಧಿಕ ಖರ್ಚು ಆಗಬಹುದು. ಧಾರ್ವಿುಕ, ಆಧ್ಯಾತ್ಮಿಕ ಆಲೋಚನೆ. ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 2

ಕನ್ಯಾ: ಸ್ಥಿರಾಸ್ತಿ , ವಾಹನ ಲಾಭ. ಆಧ್ಯಾತ್ಮಿಕತೆ ಕಡೆ ಹೆಚ್ಚು ಒಲವು. ಸಹೋದರನಿಂದ ಧನಾಗಮನ. ವಾಹನ ಸೌಖ್ಯ ಅನುಭವಿಸುವಿರಿ. ಶುಭಸಂಖ್ಯೆ: 7

ತುಲಾ: ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಬಂಧು ಬಾಂಧವರಿಂದ ಅಪಮಾನ ಅನುಭವಿಸುವಿರಿ. ಸಾಲದ ಚಿಂತೆ. ಶುಭಸಂಖ್ಯೆ: 3

ವೃಶ್ಚಿಕ: ಅಧಿಕ ತಿರುಗಾಟವಾದರೂ ಕಾರ್ಯಗಳಿಗೆ ಅನುಕೂಲವಾಗಲಿದೆ. ಆಕಸ್ಮಿಕ ದುಂದುವೆಚ್ಚ ಮಾಡುವಿರಿ. ಮಕ್ಕಳಿಗೆ ಹಿಂಸೆ. ಶುಭಸಂಖ್ಯೆ: 8

ಧನುಸ್ಸು: ಅಪಘಾತ ಸಾಧ್ಯತೆ. ನೀರು ಇರುವ ಸ್ಥಳದಲ್ಲಿ ಹುಷಾರು. ಕೆಲಸಕಾರ್ಯಗಳಲ್ಲಿ ವಿಘ್ನ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ: 6

ಮಕರ: ಅಧಿಕ ಖರ್ಚು. ಬಂಧು ಬಾಂಧವರಿಂದ, ಆತ್ಮೀಯರಿಂದ ಮೋಸವಾಗಬಹುದು. ಸ್ವಯಂಕೃತ ಅಪರಾಧದಿಂದ ಅಧಿಕವೆಚ್ಚ. ಶುಭಸಂಖ್ಯೆ: 4

ಕುಂಭ: ಸಾಲದ ನೆರವು ಸಿಗಲಿದೆ. ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ. ಸೇವಕರು ಮತ್ತು ಕಾರ್ವಿುಕರು ಸಕಾಲಕ್ಕೆ ಸಿಗುವರು. ಶುಭಸಂಖ್ಯೆ: 3

ಮೀನ: ಉದ್ಯೋಗ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಕಿರಿಕಿರಿ ಅನುಭವಿಸಬೇಕಾದೀತು. ಸ್ವಂತ ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net