ದುಶ್ಚಟಗಳ ಅಭ್ಯಾಸ ನಿಮಗಿದೆಯಾ ಹಾಗಾದ್ರೆ ಇಂದು ಕಷ್ಟದ ದಿನ: ಯಾವ ರಾಶಿಯವರಿಗೆ ಅಂತೀರಾ?- ಇಲ್ನೋಡಿ..

Nithya Bhavishya vvani
Published on

ಮೇಷ: ಕೆಲಸ ಮಾಡುವ ಜಾಗದಲ್ಲಿ ಸಿಟ್ಟುಮಾಡಿಕೊಂಡರೆ ಸಿಗಬೇಕಾದ ಬೆಲೆಯನ್ನು ಕಳೆದುಕೊಳ್ಳುವ ಸಾಧ್ಯತೆ. ಅದೃಷ್ಟಸಂಖ್ಯೆ: 1

ವೃಷಭ: ಬಣ್ಣದ ವಸ್ತ್ರಗಳು ಆಕರ್ಷಿಸುತ್ತವೆ. ಕಾರಣಾಂತರಗಳಿಂದ ಹೊಸ ವಸ್ತ್ರ ಖರೀದಿಸಲಾಗದೆ ದುಃಖ.  ಅದೃಷ್ಟಸಂಖ್ಯೆ: 4

ಮಿಥುನ: ಸ್ವತಃ ಉಲ್ಲಾಸಭರಿತರಾಗಿ ಇರುವುದಲ್ಲದೆ ಸಹೋದ್ಯೋಗಿಗಳನ್ನೂ ಚಿಂತಿಸದೆ ಇರಲು ಪ್ರೇರೇಪಿಸುತ್ತೀರಿ. ಅದೃಷ್ಟಸಂಖ್ಯೆ: 2

ಕಟಕ: ಯಾರೋ ಮೂರನೇ ವ್ಯಕ್ತಿ ಸುಳ್ಳು ಹೇಳಿದರೂ ನೀವೂ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 7

ಸಿಂಹ:  ದಿನಚರಿಯಲ್ಲಿ ಚಿಕ್ಕ ಬದಲಾವಣೆಯೊಂದು ಬರಬಹುದಾದ ದೊಡ್ಡ ಸಮಸ್ಯೆಯನ್ನು ಪರಿಹರಿಸಲಿದೆ. ಅದೃಷ್ಟಸಂಖ್ಯೆ: 6

ಕನ್ಯಾ:  ನಿಮ್ಮನ್ನು ಹೊರತುಪಡಿಸಿ ಎಲ್ಲರಿಗೂ ನಿಮ್ಮದು ಬಹಳ ಸುಲಭದ ಕೆಲಸ ಎಂದೇ ಅನಿಸುತ್ತಿರುತ್ತದೆ. ಅದೃಷ್ಟಸಂಖ್ಯೆ: 9

ತುಲಾ: ಬಹಳ ಅಗತ್ಯದ ವಸ್ತುಗಳು ಖಾಲಿ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಆ ಬಗ್ಗೆ ತಾತ್ಸಾರ ಬೇಡ. ಅದೃಷ್ಟಸಂಖ್ಯೆ: 3

ವೃಶ್ಚಿಕ: ದುಶ್ಚಟಗಳ ಅಭ್ಯಾಸ ಇದ್ದಲ್ಲಿ ನಿಮಗೆ ಇದು ಬಹಳ ಕೆಟ್ಟ ಹಾಗೂ ಕಷ್ಟದ ದಿನ ಆಗಬಹುದು. ಎಚ್ಚರವಿರಲಿ ಅದೃಷ್ಟಸಂಖ್ಯೆ: 5

ಧನಸ್ಸು: ಅವಶ್ಯವಾಗಿ ಮಾಡಲೇ ಬೇಕಾದ ಕೆಲಸಗಳನ್ನು ಮಾಡದೆ ತಪ್ಪಿಸಿಕೊಂಡಿದ್ದೀರಿ. ಇಂದು ಹಾಗೆ ಮಾಡಲಾಗದು. ಅದೃಷ್ಟಸಂಖ್ಯೆ: 1

ಮಕರ: ತನ್ನ ಕೆಲಸವನ್ನು ಬೇಗ ಮಾಡಿಕೊಡು ಎಂದು ಸ್ನೇಹಿತನೊಬ್ಬ ನಿಮಗೆ ಗಂಟುಬೀಳುವ ಸಾಧ್ಯತೆಗಳು ಹೆಚ್ಚು ಅದೃಷ್ಟಸಂಖ್ಯೆ: 9

ಕುಂಭ: ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುತ್ತಿದ್ದ ಸ್ನೇಹಿತ ಕಾರಣಾಂತರಗಳಿಂದ ಜತೆಗಿಲ್ಲದೆ ಕಷ್ಟವೆನಿಸುತ್ತದೆ. ಅದೃಷ್ಟಸಂಖ್ಯೆ: 6

ಮೀನ: ನಿಮ್ಮನ್ನು ಹೊಗಳುವ ಎಲ್ಲರೂ ನಿಮ್ಮ ಶುಭ ಅಥವಾ ಲಾಭವನ್ನು ಬಯಸುವವರು ಎಂದು ತಪ್ಪು ತಿಳಿಯಬೇಡಿ. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net