

ಮೇಷ: ಅಗತ್ಯಕ್ಕಿಂತ ಜಾಸ್ತಿ ಹಣ ವ್ಯಯವಾಗುವ ಸಾಧ್ಯತೆ. ಮನಸ್ಸಿಗೆ ಸಮಾಧಾನವಾಗಿ ನೆಮ್ಮದಿ. ವ್ಯಾಪಾರದಲ್ಲಿ ಶುಭಫಲಗಳು. ಶುಭಸಂಖ್ಯೆ: 9
ವೃಷಭ: ಸ್ನೇಹಿತರಿಂದ ಆಪ್ತ ಸಹಕಾರ ದೊರೆಯುವುದು. ರಕ್ತದೊತ್ತಡ ಕಡಿಮೆಯಾಗುತ್ತದೆ. ಹೋಟೆಲ್ ಉದ್ಯಮಿಗಳಿಗೆ ಒಳಿತು. ಶುಭಸಂಖ್ಯೆ: 5
ಮಿಥುನ: ಕುಟುಂಬದಲ್ಲಿ ಸಂತಸ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಸಂತಸದಾಯಕ ದಿನ. ಉನ್ನತ ಅಧ್ಯಯನದಲ್ಲಿ ಹೊಸ ಆಶಾಕಿರಣ. ಶುಭಸಂಖ್ಯೆ: 1
ಕಟಕ: ಉದ್ಯೋಗಿಗಳಿಗೆ ಯಶಸ್ಸು. ಸ್ವಂತ ಉದ್ಯೋಗದಲ್ಲಿ ಒಳ್ಳೆಯದಾಗಲಿದೆ. ಕಟ್ಟಡ ನಿರ್ವಣದಲ್ಲಿ ತೊಡಗಿರುವವರಿಗೆ ಹಿನ್ನಡೆ. ಶುಭಸಂಖ್ಯೆ: 2
ಸಿಂಹ: ಸಹೋದರರಿಂದ ಸಹಕಾರ. ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ. ರಾಸಾಯನಿಕ ವಸ್ತು ಮಾರಾಟಗಾರರಿಗೆೆ ಉತ್ತಮ ದಿನ. ಶುಭಸಂಖ್ಯೆ: 4
ಕನ್ಯಾ: ವಾದ ವಿವಾದಗಳಿಂದ ದೂರವಿರಿ. ಪ್ರಯಾಣದಿಂದ ಅನಗತ್ಯ ಧನಹಾನಿಯಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಶುಭಸಂಖ್ಯೆ: 7.
ತುಲಾ: ಅನವಶ್ಯಕ ಪ್ರಯಾಣ ಮಾಡಬೇಕಾಗುವುದು. ಆರೋಗ್ಯದಲ್ಲಿ ತೊಂದರೆಯಾದೀತು. ಮನಸ್ಸು ದುರ್ಬಲವಾದಂತೆ ಅನಿಸುವುದು. ಶುಭಸಂಖ್ಯೆ: 9
ವೃಶ್ಚಿಕ: ವೃತ್ತಿಯಲ್ಲಿ ನಿರೀಕ್ಷಿತ ಗುರಿ ಸಾಧಿಸುವಿರಿ. ಶಿಕ್ಷಕರಿಗೆ ಅನುಕೂಲಕರ ಸಮಯ. ಧಾರ್ವಿುಕ ಮನೋಭಾವ ವೃದ್ಧಿಯಾಗುವುದು. ಶುಭಸಂಖ್ಯೆ: 3
ಧನುಸ್ಸು: ಮರದ ಕೆಲಸಗಾರರಿಗೆ ಅನುಕೂಲ. ಕಟ್ಟಡ ಕಾರ್ವಿುಕರಿಗೆ ಪ್ರಗತಿದಾಯಕ ದಿವಸ. ಶುಭ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 8
ಮಕರ: ಪತ್ರಕರ್ತರು ಜಯಗಳಿಸುವರು. ರಾಜಕೀಯ ಪ್ರವೇಶಕ್ಕೆ ಸೂಕ್ತವಾದ ಸಮಯ ಕೂಡಿಬಂದಿದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಶುಭಸಂಖ್ಯೆ: 6
ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ತೈಲ ಮಾರಾಟದಲ್ಲಿ ಶುಭ. ಶುಭಸಂಖ್ಯೆ: 2
ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ. ವಿವಾಹದಲ್ಲಿ ತೊಂದರೆ ಉಂಟಾಗಬಹುದು. ಆಡಳಿತ ವರ್ಗದವರಿಗೆ ಒಳ್ಳೆಯ ದಿನ. ಶುಭಸಂಖ್ಯೆ: 6