

ಮೇಷ: ಆಸ್ತಿ ವಿಚಾರದಲ್ಲಿ ಶುಭ ಸಮಾಚಾರ ಬರುವುದು. ಸ್ಥಿರಾಸ್ತಿಯಿಂದ ಲಾಭ. ವ್ಯಾಪಾರದಲ್ಲಿ ಅವಕಾಶಗಳು ಲಭ್ಯ. ಶುಭಸಂಖ್ಯೆ: 5
ವೃಷಭ: ಸಮಾಜ ಸೇವಕರಿಗೆ ಒಳ್ಲೆಯ ದಿನ. ಷೇರಿನ ವ್ಯವಹಾರದಲ್ಲಿ ಹಿನ್ನಡೆಯಾದೀತು. ಅಧಿಕಾರಿಗಳ ಜೊತೆ ವಾಗ್ವಾದ. ಶುಭಸಂಖ್ಯೆ: 4
ಮಿಥುನ: ಚಿಕ್ಕಮಕ್ಕಳ ಕುರಿತು ಎಚ್ಚರ ವಹಿಸಿ. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಲಭ್ಯವಾಗಲಿದೆ. ಈ ದಿನ ಹಣಕ್ಕೆ ತೊಂದರೆ ಇರದು. ಶುಭಸಂಖ್ಯೆ:3
ಕಟಕ: ಅಧಿಕ ಶ್ರಮ ಪಡಬೇಕಾಗುವುದು. ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆತು ಸಂತೋಷ. ಆಭರಣ ಖರೀದಿಯ ಯೋಚನೆ. ಶುಭಸಂಖ್ಯೆ: 7
ಸಿಂಹ: ಕುಟುಂಬದಲ್ಲಿ ಸಂತಸದ ವಾತಾವರಣ. ವಿವಾಹಾಕಾಂಕ್ಷಿಗಳಿಗೆ ಶುಭಸುದ್ದಿ ಕೇಳಿಬರಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 4
ಕನ್ಯಾ: ಹೊಸ ಮಾರ್ಗಗಳು ದೊರೆಯುತ್ತವೆ. ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳುವುದು ಕ್ಷೇಮ. ದಾಂಪತ್ಯದಲ್ಲಿ ಅನ್ಯೋನ್ಯತೆ. ಶುಭಸಂಖ್ಯೆ: 6
ತುಲಾ: ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿ ಉಂಟಾಗುವ ಸಾಧ್ಯತೆ. ಷೇರು ಮಾರುಕಟ್ಟೆಯಲ್ಲಿ ನಷ್ಟ ಸಂಭವ. ಮಾನಸಿಕ ಭಯ ಕಾಡಲಿದೆ. ಶುಭಸಂಖ್ಯೆ: 1
ವೃಶ್ಚಿಕ: ವಾಹನಕೊಳ್ಳುವ ಚಿಂತನೆ ಮಾಡುವಿರಿ. ಸಾಲದ ವ್ಯವಹಾರ ಸದ್ಯಕ್ಕೆ ಬೇಡ. ಹಣದ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರ ಅಗತ್ಯ. ಶುಭಸಂಖ್ಯೆ: 9
ಧನುಸ್ಸು: ಪತ್ರಿಕಾ ಪ್ರತಿನಿಧಿಗಳಿಗೆ ಶುಭವಿದೆ. ಪುಸ್ತಕ ಮಾರಾಟಗಾರರಿಗೆ ಆದಾಯ ಬರಲಿದೆ. ತಾಂತ್ರಿಕ ವರ್ಗದವರಿಗೆ ಸಮಾಧಾನಕರ ದಿನ. ಶುಭಸಂಖ್ಯೆ: 5
ಮಕರ: ಆರ್ಥಿಕತೆಯಲ್ಲಿ ಚೇತರಿಕೆ ಕಾಣುವಿರಿ. ಹೊಸ ವ್ಯವಹಾರಗಳ ಯೋಚನೆ ಮಾಡುವಿರಿ. ದಾಂಪತ್ಯದಲ್ಲಿ ಅನರ್ಥ ಘಟಿಸೀತು. ಶುಭಸಂಖ್ಯೆ: 9
ಕುಂಭ: ಭೂ ವ್ಯಾಪಾರದಲ್ಲಿ ನಿರಾಸೆ. ಸಾಧು ಸಜ್ಜನರ ಆಶೀರ್ವಾದದಿಂದ ನೆಮ್ಮದಿ. ಅಧಿಕ ಪ್ರಯತ್ನದಿಂದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ಮೀನ: ನಿರೀಕ್ಷೆಯಷ್ಟು ಧನಾಗಮನವಿರುತ್ತದೆ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಪರರಿಂದ ಕೆಲಸಗಳಲ್ಲಿ ವಿಘ್ನ ಎದುರಾದೀತು. ಶುಭಸಂಖ್ಯೆ: 2