

ಮೇಷ: ಜನರು ನಿಮ್ಮ ಅಪರೂಪದ ಪ್ರತಿಭೆಯನ್ನು ಗುರುತಿಸುವ ಅದೃಷ್ಟದ ಕಾಲಘಟ್ಟದಲ್ಲಿದ್ದೀರಿ. ನಿಮ್ಮ ಪಾಲಿಗೆ ಒಳಿತಾಗಲಿದೆ. ಶುಭಸಂಖ್ಯೆ: 8
ವೃಷಭ: ಹಣ ಸಂಪಾದನೆಯ ಹೊಸ ದಾರಿಯೊಂದು ಕಾಣಿಸಬಹುದು. ಆದರೆ ಹಿಡಿದ ಕೆಲಸವನ್ನು ಮಧ್ಯೆ ಬಿಡಲು ಹೋಗದಿರಿ. ಶುಭಸಂಖ್ಯೆ: 7
ಮಿಥುನ: ಅವಸರದ ತಪ್ಪು ನಿರ್ಧಾರಗಳಿಂದ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿದ್ದೀರಿ. ಇನ್ನೂ ಹೆಚ್ಚು ಹಣವನ್ನು ವ್ಯಯಿಸಬೇಡಿ. ಶುಭಸಂಖ್ಯೆ: 9
ಕಟಕ: ಕೃಷಿಯ ವಿಚಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಿ. ತಜ್ಞರ ಜತೆಗೆ ರ್ಚಚಿಸಿ ಮುಂದಿನ ಹೆಜ್ಜೆಯನ್ನು ಇಟ್ಟರೆ ಲಾಭಕ್ಕೆ ದಾರಿ ಸಿಗಲಿದೆ. ಶುಭಸಂಖ್ಯೆ: 3
ಸಿಂಹ: ದೂರದ ಊರಿನ ಪ್ರವಾಸವು ಇಕ್ಕಟ್ಟಿನ ಸಂದರ್ಭವನ್ನು ಉಂಟುಮಾಡಬಹುದು. ತಾಳ್ಮೆಯಿಂದಲೇ ನಿಭಾಯಿಸಿ. ಶುಭಸಂಖ್ಯೆ: 1
ಕನ್ಯಾ: ಯಾರೋ ಟೀಕಿಸಿಬಿಟ್ಟರು ಎಂಬ ಕಾರಣಕ್ಕೆ ಕುಗ್ಗದಿರಿ. ಸಕಾರಾತ್ಮಕ ಟೀಕೆಯಾಗಿದ್ದರೆ ಮುಕ್ತವಾಗಿಯೇ ಸ್ವೀಕರಿಸಿ. ಶುಭಸಂಖ್ಯೆ: 2
ತುಲಾ: ವಿವಾದಗಳನ್ನು ಸೃಷ್ಟಿಸುವ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದೀರಿ. ಅದನ್ನೇ ಪ್ರತಿಪಾದಿಸಲು ಹೋದರೆ ಅಪ್ರಿಯರಾಗುವಿರಿ. ಶುಭಸಂಖ್ಯೆ: 5
ವೃಶ್ಚಿಕ: ನಿಮ್ಮದು ಉತ್ತಮ ಕಾರಣಗಳಿಗಾಗಿಯೇ ಆಡಿದ ಮಾತಾಗಿದ್ದರೂ ತಪ್ಪು ಅಭಿಪ್ರಾಯ ಮೂಡಿಸಬಹುದು. ಎಚ್ಚರ. ಶುಭಸಂಖ್ಯೆ: 4
ಧನಸ್ಸು: ಅನೇಕ ಬಗೆಯ ವಾಣಿಜ್ಯಿಕ ವಿಚಾರಗಳನ್ನು ತಿಳಿಯುತ್ತೀರಿ. ಆದರೆ ಹಿಂದೆ ಮುಂದೆ ಏನೂ ತಿಳಿಯದೆ ಜಾರಿಗೊಳಿಸದಿರಿ. ಶುಭಸಂಖ್ಯೆ: 6
ಮಕರ: ಅಪರಿಚಿತ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡುವ ನಿರ್ಧಾರಗಳನ್ನು ಸದ್ಯ ಮುಂದೂಡಿ. ಇಲ್ಲವಾದರೆ ನಷ್ಟವೇ ಆಗಲಿದೆ. ಶುಭಸಂಖ್ಯೆ: 7
ಕುಂಭ: ಅವಿರತ ಪ್ರಯತ್ನಶೀಲತೆಯಿಂದ ನೀವು ಮೇಲಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ವೃತ್ತಿಯಲ್ಲಿ ಪ್ರಶಂಸೆ ದೊರಕಲಿದೆ. ಶುಭಸಂಖ್ಯೆ: 9
ಮೀನ: ಏರುಧ್ವನಿಯನ್ನು ನಿಯಂತ್ರಣ ಮಾಡಿಕೊಂಡೇ ಸ್ಪಷ್ಟವಾಗಿ ಮಾತನಾಡಿ. ಇದರಿಂದ ಮನದ ಸಂಕಲ್ಪಗಳು ಈಡೇರಲಿವೆ. ಶುಭಸಂಖ್ಯೆ: 8