

ಮೇಷ: ಬಹಳ ದಿನಗಳ ಹಿಂದೆ ರೂಪಿಸಿದ್ದ ಯೋಜನೆಯ ಕಾರ್ಯಕ್ಕೆ ಯಶ. ಅನಿರೀಕ್ಷಿತ ಅತಿಥಿಗಳ ಆಗಮನ. ಸಂತೋಷ ಕೂಟ. ಶುಭಸಂಖ್ಯೆ: 5
ವೃಷಭ: ಆಪ್ತರಂತೆ ನಟಿಸಿದವರ ಬಣ್ಣ ಬಯಲು. ಸಹೋದರರಿಂದ ಸಹಾಯ. ಸಂಜೆಯ ವೇಳೆಗೆ ಶುಭ ಸಮಾಚಾರ. ಶುಭಸಂಖ್ಯೆ: 3
ಮಿಥುನ: ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸದ ಸುದ್ದಿ. ಈ ಕಾಲದಲ್ಲಿ ಆರೋಗ್ಯದ ಬಗ್ಗೆ ನಿಗಾ ಅತ್ಯಗತ್ಯ. ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 2
ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ಕೊಡುವಿರಿ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7
ಸಿಂಹ: ಕುಟುಂಬದ ಸುಮಧುರ ಬಾಂಧವ್ಯವನ್ನು ನಿಮ್ಮ ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಬಂದ ಅತಿಥಿಗಳನ್ನು ಸತ್ಕರಿಸಿ. ಶುಭಸಂಖ್ಯೆ: 9
ಕನ್ಯಾ: ಮನೆ- ಮನದಲ್ಲಿ ಸಂಭ್ರಮ. ಆದರೆ ಹಣದ ಸಮಸ್ಯೆ ಕಂಗೆಡಿಸಬಹುದು. ದಿನಾಂತ್ಯದಲ್ಲಿ ಧನಾಗಮವಾಗಿ ಸಮಾಧಾನ. ಶುಭಸಂಖ್ಯೆ: 6
ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ. ದುಗುಡ ಬಿಟ್ಟು ನಿರಾಳವಾಗಿರಿ. ಕಲಾವಿದರಿಗೆ ವಿಶೇಷ ಸಡಗರದ ದಿನ. ಶುಭಸಂಖ್ಯೆ: 3
ವೃಶ್ಚಿಕ: ಭೂ ವಿವಾದದ ವಿಚಾರದಲ್ಲಿ ನಿರಾಸೆ. ಅನಾರೋಗ್ಯ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯನ್ನು ಭಜಿಸಿ, ಕಾಪಾಡುತ್ತಾನೆ. ಶುಭಸಂಖ್ಯೆ: 8
ಧನುಸ್ಸು: ಮಾತನಾಡುವಾಗ ಹೆಚ್ಚು ಎಚ್ಚರದಿಂದಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 5
ಮಕರ: ಹಣದ ವಿಚಾರದಲ್ಲಿ ಹುಷಾರು. ನಿರೀಕ್ಷೆಯಲ್ಲಿ ಇದ್ದ ಹಣ ಬರದಿರಬಹುದು. ಅನಾರೋಗ್ಯದ ಮುನ್ಸೂಚನೆ. ಗಾಬರಿ ಬೇಡ. ಶುಭಸಂಖ್ಯೆ: 2
ಕುಂಭ: ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ವ್ಯೆದ್ಯರ ಸಲಹೆಯನ್ನು ಚಾಚೂತಪ್ಪದೆ ಪಾಲಿಸಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9
ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಕುಟುಂಬದವರೊಂದಿಗೆ ರ್ಚಚಿಸಿ. ಅನಿರೀಕ್ಷಿತ ಧನಾಗಮವಾಗಲಿದೆ. ಶುಭಸಂಖ್ಯೆ: 3