

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಘನ ಆಹಾರ ಸೇವಿಸಬೇಡಿ. ತುಳಸಿಯಿಂದ ಮಹಾವಿಷ್ಣುವನ್ನು ಅರ್ಚಿಸಿ. ಶುಭಸಂಖ್ಯೆ: 3
ವೃಷಭ: ಪ್ರೇಮಿಗಳಲ್ಲಿ ವಿರಸ ಸಂಭವಿಸಬಹುದು. ವೈರಿಗಳ ಬಗ್ಗೆ ಚಿಂತೆ ಮಾಡುವುದು ಬೇಡ. ದೇವರ ದರ್ಶನ ಮಾಡಿ. ಶುಭಸಂಖ್ಯೆ: 8
ಮಿಥುನ: ಹಿರಿಯರ ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡಲಿದ್ದೀರಿ. ತೋಟದ ಕೆಲಸಗಾರರಿಗೆ ಜಾಸ್ತಿ ಹಣ ಕೊಡಬೇಕಾದೀತು. ಶುಭಸಂಖ್ಯೆ: 2
ಕಟಕ: ಕೌಟುಂಬಿಕವಾಗಿ ನೆಮ್ಮದಿಯೇ ಇರಲಿದೆ. ರಫ್ತು ವ್ಯವಹಾರಗಳ ಅಭಿವೃದ್ಧಿಯಿಂದ ಆರ್ಥಿಕವಾಗಿ ಅನುಕೂಲವಿದೆ. ಶುಭಸಂಖ್ಯೆ: 9
ಸಿಂಹ: ಜಾಣತನದ ಮಾತುಗಳಿಂದ ವಿಶೇಷ ಮನ್ನಣೆ ಗಳಿಸುವಿರಿ. ಆರ್ಥಿಕ ವಿಶ್ಲೇಷಕರಿಗೆ, ಧಾನ್ಯ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6
ಕನ್ಯಾ: ಮಾನಸಿಕ ನೆಮ್ಮದಿಯನ್ನು ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಹಿರಿಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ: 5
ತುಲಾ: ಪಾಲುದಾರಿಕೆ ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ. ಆಹಾರದ ವ್ಯತ್ಯಾಸದಿಂದ ಅಜೀರ್ಣವಾಬಹುದು. ಶುಭಸಂಖ್ಯೆ: 7
ವೃಶ್ಚಿಕ: ನ್ಯಾಯಾಲಯದ ವ್ಯವಹಾರದಲ್ಲಿ ಪ್ರಗತಿ. ಮರಳಿನ ವ್ಯಾಪಾರದ ಲಾಭದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಲಿದೆ. ಶುಭಸಂಖ್ಯೆ: 1
ಧನುಸ್ಸು: ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ಪ್ರಯಾಣದಲ್ಲಿ ಕೊಂಚ ವಿಳಂಬವಾಗುತ್ತದೆ. ಮಹಾಗಣಪತಿಯನ್ನು ಧ್ಯಾನಿಸಿ. ಶುಭಸಂಖ್ಯೆ: 4
ಮಕರ: ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಇದೆ. ದೀರ್ಘ ಅಧ್ಯಯನಕ್ಕೆ ಸಕಾಲವಿದು. ಪ್ರಯಾಣದಿಂದ ಮನೋಲ್ಲಾಸ. ಶುಭಸಂಖ್ಯೆ: 3
ಕುಂಭ: ಆರಂಭಿಸಿದ ಯೋಜನೆಗಳು ಸರಾಗವಾಗಿ ನಡೆಯುತ್ತವೆ. ವೃತ್ತಿರಂಗದಲ್ಲಿ ಹೆಚ್ಚಿನದಾದ ಕೀರ್ತಿ, ಯಶಸ್ಸು ಲಭಿಸಲಿವೆ. ಶುಭಸಂಖ್ಯೆ: 8
ಮೀನ: ಕೈಗೊಂಡ ಕಾರ್ಯಗಳಿಂದಾಗಿ ಮನ್ನಣೆಯನ್ನು ಪಡೆಯುವಿರಿ. ಆಪ್ತರ ಭೇಟಿ ಸಾಧ್ಯವಾಗಲಿದೆ. ಕುಲದೇವರಿಗೆ ಅರ್ಚನೆ ಮಾಡಿಸಿ. ಶುಭಸಂಖ್ಯೆ: 2