ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಮಾತೇ ಮುಳ್ಳಾಗಲಿದೆ..

Nitya-Bhavishya-vvani-1-2-1-1
Published on

ಮೇಷ: ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ವರ್ತಿಸಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಬೇಡ. ಶುಭಸಂಖ್ಯೆ: 9

ವೃಷಭ: ಬಂಧು-ಮಿತ್ರರೊಂದಿಗೆ ಸಂತೋಷಕೂಟ. ಆತ್ಮೀಯರ ಸಲಹೆ ತಿರಸ್ಕರಿಸಬೇಡಿ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ. ಶುಭಸಂಖ್ಯೆ: 6

ಮಿಥುನ: ಅಷ್ಟಮದ ಶನಿ ಮಾನಸಿಕ ಹಿಂಸೆಗೆ ಕಾರಣ. ಲಕ್ಷ್ಮಿ ನರಸಿಂಹನನ್ನು ಆರಾಧಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ಕಟಕ: ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ. ಅನಗತ್ಯ ವಾಗ್ವಾದಗಳಿಗೆ ಅವಕಾಶ ಕೊಡಬೇಡಿ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 6

ಸಿಂಹ: ಒತ್ತಡಗಳನ್ನು ಜಾಗ್ರತೆಯಿಂದ ನಿಭಾಯಿಸಿ. ಆರೋಗ್ಯ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5

ಕನ್ಯಾ: ರಾಜಕಾರಣಿಗಳಿಗೆ ವಿಶೇಷ ಮನ್ನಣೆ. ಕಲಾವಿದರು ಬಂದ ಅವಕಾಶವನ್ನು ತಿರಸ್ಕರಿಸಬೇಡಿ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 6

ತುಲಾ: ಗೃಹ ನಿರ್ವಣಕ್ಕೆ ಚಾಲನೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಪ್ಪಂದ. ತಂದೆ ತಾಯಿಯ ಮಾತನ್ನು ತಿರಸ್ಕರಿಸಬೇಡಿ. ಶುಭಸಂಖ್ಯೆ: 3

ವೃಶ್ಚಿಕ: ಸಹೋದರರೊಂದಿಗೆ ವಾಗ್ವಾದ. ಹಳೆಯ ಸ್ನೇಹಿತನ ಭೇಟಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4

ಧನಸ್ಸು: ಮಾತೇ ನಿಮಗೆ ಮುಳುವಾಗಬಹುದು. ಯೋಚಿಸಿ ಮಾತನಾಡಿ. ಮಕ್ಕಳಿಂದ ಶುಭ ಸುದ್ದಿ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 9

ಮಕರ: ಕೆಲಸ ಕಾರ್ಯಗಳಲ್ಲಿ ವಿಘ್ನ ಉಂಟಾಗಿ ಬೇಸರ. ಮನೆಯವರೊಂದಿಗೆ ಚರ್ಚಿಸಿ ತೀರ್ಮಾನ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7

ಕುಂಭ: ವ್ಯಾಪಾರಸ್ಥರಿಗೆ ಧನ ನಷ್ಟ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು. ನಿರೀಕ್ಷಿಸಿದ ಧನಲಾಭವಾಗಿ ಸಂತಸ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ಮೀನ : ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಅನಿರೀಕ್ಷಿತ ಅತಿಥಿಯ ಆಗಮನ. ಧರ್ಮಕಾರ್ಯ ಆಸಕ್ತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net