

ಮೇಷ: ವಾಹನ ಖರೀದಿಗೆ ನಿರ್ಧಾರ. ಮನೆಯಲ್ಲಿ ಮಗಳ ಮದುವೆಯ ಸಂಭ್ರಮ. ವೃತ್ತಿನಿರತರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 9
ವೃಷಭ: ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ಪ್ರಾಪ್ತಿ. ಸಾಹಿತಿಗಳಿಗೆ ಲೇಖಕರಿಗೆ ವಿಶೇಷ ದಿನ. ನಟರಿಗೆ ಅವಕಾಶಗಳು ಕೈ ತಪ್ಪುವ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಅಭ್ಯಾಗತರ ಆಗಮನ. ಕೆಲಸದ ಒತ್ತಡದಿಂದ ಅನಾರೋಗ್ಯ. ಹೊಸ ಯೋಜನೆ ಸಫಲ. ಮಕ್ಕಳ ಭವಿಷ್ಯದ ರೂಪುರೇಷೆ. ಶುಭಸಂಖ್ಯೆ: 4
ಕಟಕ: ನೂತನ ಗೃಹ ನಿರ್ವಣಕ್ಕೆ ಚಾಲನೆ ದೊರೆಯಲಿದೆ. ಆರ್ಥಿಕ ಮುಗ್ಗಟ್ಟು ಪರಿಹಾರ. ಕುಟುಂಬದವರ ಬಗ್ಗೆ ಗಮನ ಕೊಡಿ. ಶುಭಸಂಖ್ಯೆ: 5
ಸಿಂಹ: ಪ್ರಮುಖ ನಿರ್ಧಾರದಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ಸಗಟು ವ್ಯಾಪಾರಿಗಳಿಗೆ ಲಾಭ. ಗಾಯಕರಿಗೆ ಅವಕಾಶ ಲಭ್ಯ. ಶುಭಸಂಖ್ಯೆ:5
ಕನ್ಯಾ: ನಂಬಿದವರಿಂದಲೇ ಮೋಸ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಸಂಗಾತಿಯಿಂದ ಹಣದ ಅಪವ್ಯಯ. ಶುಭಸಂಖ್ಯೆ: 6
ತುಲಾ: ನಿಮ್ಮ ಶ್ರಮಕ್ಕೆ ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ. ಕುಟುಂಬದಲ್ಲಿ ಶುಭ ಸಮಾರಂಭಕ್ಕೆ ತೀರ್ವನ. ಪಾಲುದಾರರಿಂದ ಮೋಸ. ಶುಭಸಂಖ್ಯೆ: 8
ವೃಶ್ಚಿಕ: ಖರ್ಚು ಹೆಚ್ಚಾಗಬಹುದು. ಮಿತವ್ಯಯ ಮಾಡಿ. ದೂರ ಪ್ರಯಾಣ ಸಾಧ್ಯತೆ. ಹಿರಿಯರೊಂದಿಗೆ ವಿಧೇಯರಾಗಿರಿ. ಶುಭಸಂಖ್ಯೆ:3
ಧನುಸ್ಸು: ಕಚೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ. ಖಾಸಗಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ಸಾಧ್ಯತೆ. ಶುಭಸಂಖ್ಯೆ: 5
ಮಕರ: ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಕಿರಿಕಿರಿ. ಅನಾರೋಗ್ಯದಿಂದ ಬಳಲುತ್ತಿದ್ದ ಆತ್ಮೀಯನ ವಿಯೋಗ ಸಾಧ್ಯತೆ. ಶುಭಸಂಖ್ಯೆ: 6
ಕುಂಭ: ಕಚೇರಿಯಲ್ಲಿ ಚೇತೋಹಾರಿ ವಾತಾವರಣ. ಸಂಬಂಧಪಡದ ವ್ಯವಹಾರದಲ್ಲಿ ತಲೆ ಹಾಕಬೇಡಿ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 7
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಜಗಳ. ಕೃಷಿ ಪರಿಕರಗಳ ಲಾಭ. ಶುಭಸಂಖ್ಯೆ: 1