

ಮೇಷ: ಜನಪ್ರತಿನಿಧಿಗಳು ಜನರಿಗೆ ನೆರವಾಗುವ ಮೂಲಕ ಜನಪ್ರಿಯತೆ ಸಂಪಾದಿಸಲಿದ್ದಾರೆ. ಸಂಗಾತಿಯ ಬೆಂಬಲವಿದೆ. ಶುಭಸಂಖ್ಯೆ: 7
ವೃಷಭ: ನಿಮ್ಮದು ಉದಾರ ಮನೋಭಾವ. ನಿರ್ದಿಷ್ಟ ಉದ್ದೇಶವೊಂದಕ್ಕಾಗಿ ಕ್ರಿಯಾಶೀಲತೆಯನ್ನು ತೋರಿಸಲು ಸಕಾಲವಾಗಿದೆ. ಶುಭಸಂಖ್ಯೆ: 5
ಮಿಥುನ: ನಿಮ್ಮ ಭಾವನೆಗಳನ್ನು ಸರಿಯಾಗಿ ನಿಯಂತ್ರಣ ಮಾಡಿಕೊಳ್ಳದಿದ್ದರೆ ತೊಂದರೆ ಉಂಟಾಗಲು ಸಾಧ್ಯ. ಶಿವನನ್ನು ಧ್ಯಾನಿಸಿ. ಶುಭಸಂಖ್ಯೆ: 3
ಕಟಕ: ಬಂಧುವೊಬ್ಬರ ಭೇಟಿ ಸಾಧ್ಯವಾಗಲಿದೆ. ಅವಕಾಶವಾದರೆ ಅವರ ಸಲಹೆಗಳಿಗೆ ಕುತೂಹಲದ ಕಿವಿಯಾಗಿ. ಶುಭಸಂಖ್ಯೆ: 1
ಸಿಂಹ: ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲಿದ್ದೀರಿ. ಸಕಾರಾತ್ಮಕ ಯೋಚನೆಯೇ ಈ ಸಂದರ್ಭದಲ್ಲಿ ಅರ್ಥಪೂರ್ಣವಾಗಿರá-ತ್ತದೆ. ಶುಭಸಂಖ್ಯೆ: 9
ಕನ್ಯಾ: ಹಿರಿಯರನ್ನು, ಅನ್ಯಲಿಂಗಿಗಳನ್ನು ಗೌರವದ ಭಾವನೆಯಿಂದ ಕಾಣುವ ನಿಮ್ಮ ವಿನಯಕ್ಕೆ ವಿಶೇಷ ಪ್ರಶಂಸೆಗಳೂ ಲಭ್ಯ. ಶುಭಸಂಖ್ಯೆ: 2
ತುಲಾ: ಅಪಘಾತದ ಭಯವಿದೆ. ವಾಹನವನ್ನು ಚಲಾಯಿಸುವಾಗ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಶುಭಸಂಖ್ಯೆ: 6
ವೃಶ್ಚಿಕ: ಆಹಾರೋದ್ಯಮಿಗಳು, ದಿನಸಿ ವ್ಯಾಪಾರಿಗಳಿಗೆ ಸಿಗುವ ಲಾಭದ ಪ್ರಮಾಣ ಪ್ರತಿದಿನಕ್ಕಿಂತ ಸ್ವಲ್ಪ ಏರಿಕೆಯಾಗಲಿದೆ. ಶುಭಸಂಖ್ಯೆ: 8
ಧನುಸ್ಸು: ಬಾಳಸಂಗಾತಿಯ ಶೋಧನೆಯಲ್ಲಿರುವವರಿಗೆ ದೃಢ ಪ್ರಯತ್ನ ಅವಶ್ಯ. ಸ್ವಯಂವರ ಪಾರ್ವತಿಯನ್ನು ಸ್ತುತಿಸಿ. ಶುಭಸಂಖ್ಯೆ: 4
ಕುಂಭ: ನೀವು ಬೇರೆಯರಂತೆ ಸುಳ್ಳು ಭರವಸೆ ನೀಡುವವರಲ್ಲ ಎಂಬುದು ಜನಜನಿತ. ಕೊಟ್ಟ ಮಾತು ಮರೆಯದಿರಿ. ಶುಭಸಂಖ್ಯೆ: 5
ಮಕರ: ಮದುವೆಯ ಬಗ್ಗೆ ಅತಿಯಾಗಿ ಚಿಂತೆ ಮಾಡುತ್ತಿದ್ದೀರಿ. ಕಾಲ ಕೂಡಿ ಬಂದಾಗ ಬಾಳಸಂಗಾತಿ ಸಿಗಲಿದ್ದಾರೆ. ಶುಭಸಂಖ್ಯೆ: 7
ಮೀನ: ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಆಹಾರ ಸೇವನೆಯಲ್ಲಿ ತುಸು ಕಾಳಜಿ ವಹಿಸುವುದು ಉತ್ತಮ. ಶುಭಸಂಖ್ಯೆ: 3