

ಮೇಷ: ನಿಮ್ಮ ಕೆಲಸದ ವಿಷಯವು ಪ್ರಗತಿಗಾಗಿ ದಾರಿ ಮಾಡಿಕೊಡುತ್ತದೆ. ಸದ್ಯಕ್ಕೆ ಹೊಸ ವಸ್ತುಗಳನ್ನು ಖರೀದಿಸದಿರುವುದೇ ಉತ್ತಮ. ಶುಭಸಂಖ್ಯೆ: 9
ವೃಷಭ: ಅಸಮರ್ಥರನ್ನು ಪ್ರೋತ್ಸಾಹಿಸುವುದರಿಂದ ನಿರಾಸೆಯನ್ನು ಹೊಂದುವಿರಿ. ನಿಮಗೆ ನೀವೇ ಸಹಾಯಕರಾದರೆ ಉತ್ತಮ. ಶುಭಸಂಖ್ಯೆ: 1
ಮಿಥುನ: ರಾಜಕಾರಣಿಗಳು ಜನಾನುರಾಗಿಗಳಾಗುವ ಅವಕಾಶ ಕೂಡಿಬರಬಹುದು. ಭಕ್ತಿಯಿಂದ ನಂಜುಂಡೇಶ್ವರನನ್ನು ಧ್ಯಾನಿಸಿ. ಶುಭಸಂಖ್ಯೆ: 7
ಕಟಕ: ದೂರದ ಊರಿನ ಹಿರಿಯರೊಬ್ಬರು ನಿಮ್ಮ ಸಲಹೆಯನ್ನು ಬಯಸಬಹುದು. ನಿಮ್ಮಲ್ಲಿನ ಅರಿವನ್ನು ಹಂಚಿಕೊಳ್ಳಿ. ಶುಭಸಂಖ್ಯೆ: 5
ಸಿಂಹ: ಒತ್ತಡದಿಂದ ಬಳಲಿದರೂ ಮೇಲಧಿಕಾರಿಗಳು ಪ್ರಸನ್ನರಾಗಲಿದ್ದಾರೆ. ದೊರೆಯಬೇಕಾದ ಧನಸಿದ್ಧಿಯೂ ಬೇಗ ಸಿಗಲಿದೆ. ಶುಭಸಂಖ್ಯೆ: 8
ಕನ್ಯಾ: ಆರ್ಥಿಕ ವಿಷಯದಲ್ಲಿ ಮೋಸ ಮಾಡುವಂಥ ಜನ ಎದುರಾಗುತ್ತಾರೆ. ಜಾಣತನವೇ ನಿಮ್ಮನ್ನು ಈ ಅಪಾಯದಿಂದ ರಕ್ಷಿಸಲಿದೆ. ಶುಭಸಂಖ್ಯೆ: 3
ತುಲಾ: ನಿಮ್ಮ ಕಾರ್ಯಕ್ಷಮತೆಯು ಶುಭಕರ ಬೆಳವಣಿಗೆಗಳಿಗೆ ಅವಕಾಶವೊಂದನ್ನು ಸೃಷ್ಟಿಸಲಿದೆ. ಆದರೆ ಅತಿ ವಾಚಾಳಿತನವನ್ನು ಮಾತ್ರ ಬಿಡಿ. ಶುಭಸಂಖ್ಯೆ: 1
ವೃಶ್ಚಿಕ: ಅಪರಿಚಿತರ ಭೇಟಿಯಿಂದ ತೊಂದರೆಯಾದೀತು. ವಾಕ್ಚಾತುರ್ಯದಿಂದ ಆ ಸಂದರ್ಭವನ್ನು ಧೈರ್ಯವಾಗಿ ಎದುರಿಸಿದರೆ ಪಾರಾಗಲಿದ್ದೀರಿ. ಶುಭಸಂಖ್ಯೆ: 7
ಧನುಸ್ಸು: ಒತ್ತಡರಹಿತ ಪರಿಸರದಿಂದ ಆತ್ಮೋನ್ನತಿಗೆ ದಾರಿಯಿದೆ. ವೃತ್ತಿಯ ಸುಖ ದುಃಖಗಳನ್ನು ಮನೆಯವರ ಬಳಿ ಹಂಚಿಕೊಳ್ಳಿ. ಶುಭಸಂಖ್ಯೆ: 9
ಮಕರ: ಹೊಸ ಊರಿಗೆ ಆಕಸ್ಮಿಕವಾಗಿ ಪ್ರವಾಸದ ಸಂದರ್ಭ ಎದುರಾಗಬಹುದು. ಆರೋಗ್ಯದ ಬಗೆಗೆ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 6
ಕುಂಭ: ಪ್ರತಿನಿತ್ಯ ಅದೇ ಕೆಲಸಗಳು ಎಂಬ ಏಕತಾನತೆ ಕಾಡಲಿದೆ. ಆದರೂ ಅವಕಾಶವನ್ನು ಬಳಸಿ ಹೊಸತನಕ್ಕೆ ಬೇಗನೆ ಸಿದ್ಧರಾಗಿ. ಶುಭಸಂಖ್ಯೆ: 2
ಮೀನ: ಕುಲದೇವರ ಕೃಪೆ ಇರುವ ತನಕವೂ ನಿಮಗೆ ಕೆಟ್ಟದ್ದು ಎದುರಾಗದು. ಹಾಗೆಂದು ಎಲ್ಲರನ್ನೂ ನಂಬಿ ಮೋಸಹೋಗಬೇಡಿ. ಶುಭಸಂಖ್ಯೆ: 4