ಈ ರಾಶಿಯವರಿಗಿಂದು ಚಿನ್ನಾಭರಣ ಖರೀದಿ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸರ್ಕಾರಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ಕುತಂತ್ರಗಳು ಬಯಲಾಗಲಿವೆ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಸಂತಸ. ಶುಭಸಂಖ್ಯೆ: 7

ವೃಷಭ: ಆತ್ಮೀಯರ ಆಗಮನದಿಂದ ಮನಸ್ಸಿಗೆ ನೆಮ್ಮದಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಯೋಗಾಭ್ಯಾಸದ ಪ್ರಾರಂಭ. ಶುಭಸಂಖ್ಯೆ: 9

ಮಿಥುನ: ಅತಿ ಆತ್ಮವಿಶ್ವಾಸದಿಂದ ಮೈ ಮರೆಯುವ ಸಾಧ್ಯತೆ. ಉದ್ಯೋಗರಂಗದಲ್ಲಿ ಬೆಳವಣಿಗೆ. ನಿಮ್ಮನ್ನು ಪ್ರೀತಿಸುವವರಿಂದ ಸಾಂತ್ವನ. ಶುಭಸಂಖ್ಯೆ: 8

ಕಟಕ: ಖಾಸಗಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಬೆನ್ನುನೋವು ಕಂಡುಬರಲಿದೆ. ನಿಗದಿತ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 4

ಸಿಂಹ: ಸಾಮಾಜಿಕ ಗೌರವಾದರಗಳನ್ನು ಪಡೆಯುವಿರಿ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ಚಿನ್ನಾಭರಣ ಖರೀದಿ ಸಾಧ್ಯತೆ. ಶುಭಸಂಖ್ಯೆ: 1

ಕನ್ಯಾ: ಗೃಹ, ವಸ್ತ್ರವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ ಬರಲಿದೆ. ಆತ್ಮೀಯರಲ್ಲಿ ಸಂತೋಷದ ಸಂಗತಿ ಹಂಚಿಕೊಳ್ಳಲಿದ್ದೀರಿ. ಶುಭಸಂಖ್ಯೆ: 9

ತುಲಾ: ಕೆಲಸದ ನಿರೀಕ್ಷೆಯಲ್ಲಿರುವಿರಿ. ವ್ಯವಹಾರದಲ್ಲಿ ಪ್ರಗತಿ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ ಒದಗಿಸಿಕೊಡುವ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ದೂರಪ್ರಯಾಣ. ಆರೋಗ್ಯದಲ್ಲಿ ಪ್ರಗತಿ. ವಿವಾಹ ಅಪೇಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಉದ್ಯೋಗದಲ್ಲಿ ಆಸಕ್ತಿ. ಶುಭಸಂಖ್ಯೆ: 6

ಧನುಸ್ಸು: ಈ ದಿನ ನಿಮ್ಮ ಪರವಾಗಿ ಇರಲಿದೆ. ರಕ್ಷಣಾ ಕ್ಷೇತ್ರದಲ್ಲಿ ದುಡಿಯುವವರಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ ಎಚ್ಚರದಿಂದಿರಿ. ಶುಭಸಂಖ್ಯೆ: 8

ಮಕರ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ದುಡುಕುತನ ಒಳ್ಳೆಯದಲ್ಲ. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 5

ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರ & ಗೌರವ ಹೊಂದುವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವಂತಹ ಸಾಧನೆ. ಶುಭಸಂಖ್ಯೆ: 2

ಮೀನ: ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net