

ಮೇಷ: ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪ. ಕುಟುಂಬದವರು ಕೈ ಕೊಡುವ ಸಾಧ್ಯತೆ ಇದೆ. ಇಷ್ಟ ದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಅನಿರೀಕ್ಷಿತ ಲಾಭ ಬರುವ ಸಾಧ್ಯತೆಯಿದೆ. ಚಿತ್ತ ಚಾಂಚಲ್ಯವನ್ನು ನಿಯಂತ್ರಿಸಿ. ಶುಭಸಂಖ್ಯೆ: 1
ಮಿಥುನ: ಮಕ್ಕಳಿಂದ ಕಿರಿಕಿರಿ ಸಾಧ್ಯತೆ. ಕುಟುಂಬದ ಬಿಗು ವಾತಾವರಣವನ್ನು ತಿಳಿಯಾಗಿಸಿ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 6
ಕಟಕ: ಆತ್ಮೀಯ ಸ್ನೇಹಿತನ ಭೇಟಿ. ಮಗಳ ಮದುವೆಯ ಚಿಂತೆ. ಹಣದ ಅಪವ್ಯಯ. ಕಚೇರಿಯಲ್ಲಿ ಹಿರಿಯರಿಂದ ಕಿಡಿನುಡಿ. ಶುಭಸಂಖ್ಯೆ: 1
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಶ್ರಮ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ. ಹಣದ ಅಪವ್ಯಯ ತಪ್ಪಿಸಿ. ಶುಭಸಂಖ್ಯೆ: 2
ಕನ್ಯಾ: ಹಿರಿಯರ ಭೇಟಿ. ಸ್ನೇಹಿತನ ನಿಜವಾದ ಸ್ವಭಾವ ಗೊತ್ತಾಗುವುದು. ಹಿತಶತ್ರುಗಳಿಂದ ದೂರವಿರಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7
ತುಲಾ: ಅನಗತ್ಯ ವಿಷಯಗಳಲ್ಲಿ ತಲೆ ಹಾಕಬೇಡಿ. ಮಕ್ಕಳಿಂದ ನಷ್ಟ. ಕಚೇರಿಯಲ್ಲಿ ಸಹವರ್ತಿಗಳ ಸಲಹೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ವೃಶ್ಚಿಕ: ಸಮಯ ಸಾಧಕರಿಂದ ಸಾಧ್ಯವಾದಷ್ಟು ದೂರ ಇರಿ. ಇಂದು ನಿಮ್ಮ ಪ್ರತಿಭೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 2
ಧನುಸ್ಸು: ಕಠಿಣ ಪರಿಶ್ರಮಕ್ಕೆ ತಕ್ಕುದಾದ ಫಲ ಖಂಡಿತ ಸಿಗುತ್ತದೆ. ಸಹೋದ್ಯೋಗಿಗಳಿಂದ ಅಪಪ್ರಚಾರ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 6
ಮಕರ: ಅನಿರೀಕ್ಷಿತ ಫಲಿತಾಂಶ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಹಿರಿಯರಿಂದ ಸಲಹೆ ದೊರೆಯಲಿದೆ. ಶುಭಸಂಖ್ಯೆ: 7
ಕುಂಭ: ವೈದ್ಯರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೆಚ್ಚಿನ ಶ್ರಮ. ಶುಭಸಂಖ್ಯೆ: 9