ಈ ರಾಶಿಯವರು ಬೇರೆಯವರ ಮಾತುಗಳನ್ನು ಕೇಳಿದರೆ ಕಷ್ಟಕ್ಕೆ ಗುರಿಯಾಗುವುದು ಖಚಿತ

Nithya Bhavishya
Published on

ಮೇಷ: ಅನೇಕ ರೀತಿಯ ಬಿಕ್ಕಟ್ಟುಗಳನ್ನು
ಎದುರಿಸುತ್ತಿದ್ದೀರಿ. ಗೌರಿಯ ಆರಾಧನೆಯಿಂದ
ಅವುಗಳನ್ನು ನಿವಾರಿಸಿಕೊಳ್ಳಿ. ಶುಭಸಂಖ್ಯೆ: 7

ವೃಷಭ: ಮನೆಯವರ ಬಳಿ ನಿಮ್ಮ ಸಮಸ್ಯೆಗಳನ್ನು
ಹೇಳಿಕೊಳ್ಳಿ. ತೊಂದರೆ ನಿವಾರಣೆಯಾಗಿ
ಸುಖದ ದಾರಿ ತೆರೆಯಲಿದೆ. ಶುಭಸಂಖ್ಯೆ: 4

ಮಿಥುನ: ನಿಮ್ಮ ಬಗ್ಗೆ ನಿಮಗೇ ನಂಬಿಕೆಯಿಲ್ಲ.
ಅಪನಂಬಿಕೆಯನ್ನು ಬಿಟ್ಟು ನಿಮ್ಮ ನೈಜ ಶಕ್ತಿಯನ್ನು
ಪ್ರದರ್ಶಿಸಿದರೆ ಸಿದ್ಧಿ ಇದೆ. ಶುಭಸಂಖ್ಯೆ: 1

ಕಟಕ: ನಿಮ್ಮ ಬಿಕ್ಕಟ್ಟುಗಳ ಮಧ್ಯೆ ಇತರರ
ಬಿಕ್ಕಟ್ಟುಗಳೂ ಬಂದು ಸೇರಿಕೊಳ್ಳಬಹುದು.
ಹಾಗಾಗದಂತೆ ಎಚ್ಚರ ವಹಿಸಿ. ಶುಭಸಂಖ್ಯೆ: 3

ಸಿಂಹ: ಬೇರೆಯವರ ಮಾತುಗಳನ್ನು ಕೇಳಿ
ಕಷ್ಟಕ್ಕೆ ಗುರಿಯಾಗುತ್ತಿದ್ದೀರಿ. ಅದನ್ನು ನಿಯಂತ್ರಿಸಿದರೆ
ಕಷ್ಟದಿಂದ ಮುಕ್ತಿ ಇದೆ. ಶುಭಸಂಖ್ಯೆ: 6

ಕನ್ಯಾ: ನೀವೇ ಎಲ್ಲರ ಕೆಲಸವನ್ನು ನಿರ್ವಹಿಸುತ್ತಿದ್ದೀರಿ.
ಇದರಿಂದ ಇಂದು ವಿನೂತನವಾದ ಲಾಭಕ್ಕೆ
ಚಾಲನೆ ಸಿಗಲಿದೆ. ಶುಭಸಂಖ್ಯೆ: 9

ತುಲಾ: ಹೊಸ ರೀತಿಯ ಸವಾಲುಗಳು
ಎದುರಾಗಲಿವೆ. ಅದನ್ನು ನಿರ್ವಹಿಸುವ ಧೈರ್ಯವನ್ನು
ತೋರಿದರೆ ಗೆಲ್ಲುವಿರಿ. ಶುಭಸಂಖ್ಯೆ: 5

ವೃಶ್ಚಿಕ: ಒಂದು ಸಾಲ ತೀರಿಸಲು ಇನ್ನೊಂದು ಸಾಲ
ಮಾಡುತ್ತಿದ್ದೀರಿ. ಇದನ್ನು ತಡೆದಲ್ಲಿ ನೆಮ್ಮದಿಯನ್ನು
ಹೊಂದುವಿರಿ. ಶುಭಸಂಖ್ಯೆ: 8

ಧನುಸ್ಸು: ಮಾನಸಿಕವಾಗಿ ನೊಂದಿದ್ದೀರಿ. ಚೈತನ್ಯ
ಸ್ವರೂಪಿಣಿ ಲಲಿತಾದೇವಿಯ ಆರಾಧನೆಯಿಂದ
ಚಿತ್ತಶಾಂತಿ ಲಭಿಸಲಿದೆ. ಶುಭಸಂಖ್ಯೆ: 2

ಮಕರ: ಒತ್ತಡಗಳಿಂದ ಒದ್ದಾಟ ಉಂಟಾಗುತ್ತಿದೆ.
ಶ್ರೀ ಆಂಜನೇಯನನ್ನು ಭಕ್ತಿಯಿಂದ ಭಜಿಸಿ.
ಒತ್ತಡಗಳು ತೊಲಗಲಿವೆ. ಶುಭಸಂಖ್ಯೆ: 7

ಕುಂಭ: ಹಿರಿಯರ ಮಾರ್ಗದರ್ಶನದಿಂದ
ಸಂತೋಷಪಡಲಿದ್ದೀರಿ. ನಿಮಗಿಂದು ಬೇರೆಯದೇ
ದಿಕ್ಕು ತೆರೆದುಕೊಳ್ಳಲಿದೆ. ಶುಭಸಂಖ್ಯೆ: 4

ಮೀನ: ಸಂಘಟನಾ ಚಾತುರ್ಯ, ಕಾರ್ಯನಿರ್ವಹಣೆಯಲ್ಲಿ
ವಿಶೇಷ ಪರಿಣತರಾದ ನೀವು ಅಪಾರ
ಯಶಸ್ಸು ಪಡೆಯುವಿರಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net