ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಾರೋಗ್ಯದಿಂದಾಗಿ ತೀವ್ರ ಅಸಮಾಧಾನ ಉಂಟಾಗಲಿದೆ

Nitya-Bhavishya-vvani-1-2-1-1
Published on

ಮೇಷ: ಕೆಲಸದ ಒತ್ತಡದಿಂದ ಸುಸ್ತಾಗುವಿರಿ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 8

ವೃಷಭ: ಶನಿಯಿಂದಾಗಿ ಕಾರ್ಯ ನಷ್ಟ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ನಟರಿಗೆ ವಿಶೇಷ ಅವಕಾಶ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 7

ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಸಿದ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 5

ಕಟಕ: ಗೃಹ ನಿರ್ಮಾಣದ ಕನಸಿನ ಸಾಕಾರ. ತಂದೆಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ:1

ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕಾರಣಿಗಳಿಗೆ ವಿಶೇಷ. ಕಲಾವಿದರಿಗೆ ಅದೃಷ್ಟ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 4

ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಅನಿರೀತ ತಿರುವು. ತಾಯಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 6

ತುಲಾ: ಮಾತೃಮೂಲವಾದಂತಹ ಧನಪ್ರಾಪ್ತಿ. ಮನೆ ಕಟ್ಟುವ ಯೋಚನೆ ಕಾರ್ಯಗತಗೊಳಿಸುವಿರಿ. ಸರ್ಕಾರಿ ಕೆಲಸಗಳಲ್ಲಿ ವ್ನಿ. ಶುಭಸಂಖ್ಯೆ: 3

ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಬೇಡಿ. ಮನೆಗೆ ಅಪರೂಪದ ಅತಿಥಿ ಬರುವರು.ಮನೆಯಿಡೀ ಉಲ್ಲಾಸ. ಶುಭಸಂಖ್ಯೆ: 8

ಧನುಸ್ಸು: ಆರ್ಥಿಕ ಅಡಚಣೆ. ಮಾತನಾಡುವ ಮುನ್ನವೇ ಯೋಚಿಸಿ. ಕುಟುಂಬದಲ್ಲಿ ಅಸಮಾಧಾನ. ಕಲಾವಿದರಿಗೆ ಸಂತಸದ ದಿನ. ಶುಭಸಂಖ್ಯೆ: 7

ಮಕರ: ಮನಸ್ಸಿನ ಗೊಂದಲಕ್ಕೆ ಸಂಬಂಧಿಕರಿಂದ ಸೂಕ್ತ ಸಲಹೆ ಸಿಗಲಿದೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 9

ಕುಂಭ: ವಿದ್ಯಾರ್ಥಿಗಳ ಕನಸು ನನಸಾಗುವ ಲಕ್ಷಣವಿದೆ. ಸೋಮಾರಿತನ ನಿಮ್ಮನ್ನು ಕಾಪಾಡಲಾರದು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4

ಮೀನ: ವ್ಯಾಪಾರಸ್ಥರಿಗೆ ಲಾಭ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಜೀವ. ಸಹೋದರಿ ಮನೆಗೆ ಭೇಟಿ. ಬಂಧು ವರ್ಗದಲ್ಲಿ ವಿರೋಧ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net