ನಿತ್ಯಭವಿಷ್ಯ| ಈ ರಾಶಿಯವರಿಗೆ ಅಪರೂಪದ ಕಾರ್ಯವೊಂದು ಸಿದ್ಧಿಸುವ ಸಂದರ್ಭ ಹತ್ತಿರದಲ್ಲಿದೆ..

Nitya-Bhavishya-vvani-1-2-1
Published on

ಮೇಷ: ಹೊರಜಗತ್ತಿನ ಕಗ್ಗಂಟುಗಳು, ಬಿಕ್ಕಟ್ಟುಗಳನ್ನು ಶಮನಗೊಳಿಸುವಂತಹ ಶಕ್ತಿ ನಿಮ್ಮೊಳಗಿದೆ. ಅದಕ್ಕೆ ತಕ್ಕ ಪ್ರಶಂಸೆಯೂ ಲಭ್ಯ. ಶುಭಸಂಖ್ಯೆ: 5

ವೃಷಭ: ಆರೋಗ್ಯದಲ್ಲಿ ಏರುಪೇರಾದಾಗಲೂ ಒದ್ದಾಡುತ್ತ ಇರಬೇಡಿ. ಬಾಳಸಂಗಾತಿಯ ಸಕಾಲಿಕವಾದ ನೆರವಿನಿಂದ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 8

ಮಿಥುನ: ಮಕ್ಕಳು ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಅವರ ಉತ್ಸಾಹವನ್ನು, ಹೊಸ ಆಲೋಚನೆಗಳನ್ನು ತಡೆಹಿಡಿಯದೆ ಪ್ರೋತ್ಸಾಹ ನೀಡಿ. ಶುಭಸಂಖ್ಯೆ: 2

ಕಟಕ: ನಿಮ್ಮ ಮುಂಗೋಪವನ್ನು ಬೇಗ ನಿಯಂತ್ರಿಸಿದರೆ ದೊಡ್ಡ ಮಟ್ಟದ ಒತ್ತಡಗಳೂ ಮಾಯವಾಗಲಿವೆ. ಮನೆಯಲ್ಲಿ ಜಗಳ ತೆಗೆಯದಿರಿ. ಶುಭಸಂಖ್ಯೆ: 6

ಸಿಂಹ : ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದಾಗಲೂ ಬದಲಾಗದಂಥ ಜನರಿಂದ ದೂರವೇ ಆಗಿಬಿಟ್ಟರೆ ನಿಮ್ಮ ಪಾಲಿಗೇ ಹಿತವಾಗಲಿದೆ. ಶುಭಸಂಖ್ಯೆ: 4

ಕನ್ಯಾ: ಹಲವರ ಪಾಲಿಗೆ ಹೊಸದಾದ ವಾಹನವನ್ನು ಖರೀದಿ ಮಾಡುವಂತಹ ಅವಕಾಶವೊಂದು ಒದಗಿಬರಲಿದೆ. ನಿರಾಕರಿಸದಿರಿ. ಶುಭಸಂಖ್ಯೆ: 7

ತುಲಾ: ಸಿಟ್ಟಿನಿಂದ ಸಿಡುಕಾಡುವಂತಹ ಜನರನ್ನು ಸೌಮ್ಯವಾಗಿಯೇ ನಿಯಂತ್ರಿಸಿ. ಅವರಿಂದಲೇ ಸಹಾಯವೂ ಲಭಿಸುತ್ತದೆ. ಶುಭಸಂಖ್ಯೆ: 9

ವೃಶ್ಚಿಕ: ಅಪರೂಪದ ಕಾರ್ಯವೊಂದು ಸಿದ್ಧಿಸುವ ಸಂದರ್ಭ ಹತ್ತಿರದಲ್ಲೇ ಇದೆ. ಭಕ್ತಿಯಿಂದ ಜಗದೀಶ್ವರನನ್ನು ಸ್ತುತಿಸಿ. ಶುಭಸಂಖ್ಯೆ: 1

ಧನುಸ್ಸು: ಎತ್ತ ತಿರುಗಿದರೂ ದಾರಿ ಕಾಣುತ್ತಿಲ್ಲ ಎಂದು ಹತಾಶರಾಗಿದ್ದರೂ ಹಿರಿಯರೊಬ್ಬರಿಂದ ಸಕಾಲಿಕವಾದ ನೆರವು ಸಿಗಲಿದೆ. ಶುಭಸಂಖ್ಯೆ: 3

ಮಕರ : ಮಾತಿನ ಚಾಕಚಕ್ಯತೆಯ ಬಗ್ಗೆ ಆತ್ಮವಿಶ್ವಾಸ ಇದ್ದೇ ಇರಲಿ. ಇದರಿಂದ ಮುಂದಿನ ಕಾರ್ಯಯೋಜನೆಗೆ ಅಧಿಕ ಬೆಂಬಲ ಒದಗಿಬರಲಿದೆ. ಶುಭಸಂಖ್ಯೆ: 5

ಕುಂಭ : ನಿಮ್ಮ ಕೆಲಸಗಳಿಗೆ ಹೊಸ ಶಕ್ತಿ ದೊರೆಯುತ್ತದೆ. ದುರ್ಗಾಸೂಕ್ತದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ದುರ್ಗಾಂಬಿಕೆಯನ್ನು ಸ್ತುತಿಸಿ. ಶುಭಸಂಖ್ಯೆ: 8

ಮೀನ : ಕೊಟ್ಟ ಮಾತಿನಂತೆ ನಡೆಯುವಂತಹ ಗುಣದ ನೀವು ಅನೇಕರಿಂದ ಪ್ರಶಂಸೆಯನ್ನು ಗಳಿಸುವಿರಿ. ನಿಮಗೂ ಇದರಿಂದಾಗಿ ಒಳಿತಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net