ಈ ರಾಶಿಯವರಿಗಿಂದು ಉತ್ತಮ ಬಾಂಧವ್ಯ, ಸಂಬಂಧಿಕರಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕವಾಗಿ ಪ್ರಗತಿ. ವೈವಾಹಿಕ ಜೀವನದಲ್ಲಿ ಸಮಾಧಾನ. ಅನ್ಯರ ವಿಚಾರಗಳಿಂದ ದೂರವಿರಿ. ಉದ್ಯೋಗದಲ್ಲಿ ಸಂತೋಷ. ಶುಭಸಂಖ್ಯೆ: 9

ವೃಷಭ: ಆಂತರಂಗದ ವಿಚಾರ ಹಂಚಿಕೊಳ್ಳುವುದು ಬೇಡ. ಅಗ್ನಿಯ ಬಗ್ಗೆ ಜಾಗ್ರತೆ. ಮಕ್ಕಳ ವಿಚಾರದಲ್ಲಿ ಗೊಂದಲ. ಅನ್ಯರಿಂದ ಕಿರುಕುಳ. ಶುಭಸಂಖ್ಯೆ: 1

ಮಿಥುನ: ಬಾಂಧವರಿಂದ ಅನುಕೂಲ. ದೂರಪ್ರಯಾಣ. ಬೆನ್ನು ನೋವಿನ ಸಮಸ್ಯೆ. ಮಕ್ಕಳಿಂದ ಶುಭವಾರ್ತೆ. ವಿದೇಶಯಾನಕ್ಕೆ ಅಡೆತಡೆ. ಶುಭಸಂಖ್ಯೆ: 6

ಕಟಕ: ಆರ್ಥಿಕ ವಲಯದಲ್ಲಿ ಪ್ರಗತಿ. ಜೀವನಕ್ಕೆ ಅನುಕೂಲ. ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ. ಅಶಾಂತಿ. ಹಿತ ಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 6

ಸಿಂಹ: ಕಾರ್ಯಗಳಲ್ಲಿ ವಿಘ್ನ. ಇಲ್ಲ ಸಲ್ಲದ ಅಪವಾದ ಬರುವುದು. ರಾಜಕೀಯ ವ್ಯಕ್ತಿಗಳ ಸಂಪರ್ಕ ದೊರೆಯುವುದು. ಮನಸ್ಸಿಗೆ ಕಿರಿಕಿರಿ. ಶುಭಸಂಖ್ಯೆ: 3

ಕನ್ಯಾ: ಹೆಣ್ಣು ಮಕ್ಕಳಿಗೆ ಅನನುಕೂಲ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಬಂಧುಗಳಲ್ಲಿ ಅಸಮಾಧಾನ. ವಿದ್ಯಾರ್ಥಿಗಳಿಗೆ ತೊಂದರೆ. ಶುಭಸಂಖ್ಯೆ:9

ತುಲಾ: ವ್ಯಾಪಾರದಲ್ಲಿ ನೆಮ್ಮದಿ. ಸ್ಥಿರಾಸ್ತಿ ಲಾಭ. ರೈತರಿಗೆ ಅನುಕೂಲ. ರಾಜಕೀಯ ನಾಯಕರಿಗೆ ಮುನ್ನಡೆ. ವಿದ್ಯಾರ್ಥಿಗಳಿಗೆ ಜಯ. ಶುಭಸಂಖ್ಯೆ: 1

ವೃಶ್ಚಿಕ: ಕಾರ್ಯದಲ್ಲಿ ಅಸಮಾಧಾನ. ಹಣಕಾಸಿಗಾಗಿ ಪರದಾಟ. ಮೇಲಧಿಕಾರಿಗಳಿಂದ ಕಿರುಕುಳ. ಪತ್ರಿಕಾ ರಂಗದಲ್ಲಿ ಅಸಮಾಧಾನ. ಶುಭಸಂಖ್ಯೆ: 5

ಧನುಸ್ಸು: ಮಾನಸಿಕ ಕಿರಿಕಿರಿ. ಆರೋಗ್ಯದದಲ್ಲಿ ಏರುಪೇರು. ಅಪಮಾನ. ಕೃಷಿಕರಿಗೆ ಲಾಭ ಕಡಿಮೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ:3

ಮಕರ: ಕಾರ್ಯದಲ್ಲಿ ಅಸಮಾಧಾನ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಚಾಲಕರಿಗೆ ಅನುಕೂಲ. ದಂಡ ಕಟ್ಟುವ ಸಾಧ್ಯತೆ. ನೌಕರರಿಗೆ ಬಡ್ತಿ. ಶುಭಸಂಖ್ಯೆ:4

ಕುಂಭ: ಹೆಣ್ಣು ಮಕ್ಕಳಿಗೆ ಅನುಕೂಲ. ಮಾನಸಿಕ ಕಿರಿಕಿರಿ ದೂರಾಗಲಿದೆ. ಗೃಹ ಕೈಗಾರಿಕೆಯಿಂದ ಲಾಭ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 9

ಮೀನ: ಉತ್ತಮ ಬಾಂಧವ್ಯ. ಸಂಬಂಧಿಕರಿಂದ ಅನುಕೂಲ. ಮಕ್ಕಳಿಂದ ಶುಭ. ವೈಚಾರಿಕ ಪ್ರಗತಿ. ಕೈಗಾರಿಕಾ ರಂಗದಲ್ಲಿ ಅನುಕೂಲ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net