

ಮೇಷ: ಸಣ್ಣಪುಟ್ಟ ವಿಚಾರಗಳಿಗೂ ಬಹಳ ಬೇಸರ ಮಾಡಿಕೊಳ್ಳುವ ಸ್ವಭಾವವನ್ನು ಬಿಟ್ಟುಬಿಡಿ. ಮುಖದಲ್ಲಿ ಸದಾ ನಗು ಇರಲಿ. ಶುಭಸಂಖ್ಯೆ: 1
ವೃಷಭ: ಯಾವುದೇ ರೀತಿಯ ಮಧ್ಯವರ್ತಿಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಅವರ ಅನಿವಾರ್ಯತೆ ಬಯಸುವುದೂ ಬೇಡ. ಶುಭಸಂಖ್ಯೆ: 4
ಮಿಥುನ: ನಿಮ್ಮನ್ನು ಅಪರಿಚಿತರು ಭೇಟಿಯಾಗುವಾಗ ನೀವು ಒಂಟಿಯಾಗಿ ಇರದಂತೆ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 7
ಕಟಕ: ಸಹೋದ್ಯೋಗಿಗಳ ಜತೆಗೆ ಅತಿಯಾದ ಸಲುಗೆ ಬೇಡ. ನಿಮ್ಮ ಸನ್ನಡತೆಯು ಅಪಾರ್ಥಕ್ಕೆ ಗುರಿಯಾದೀತು. ಶುಭಸಂಖ್ಯೆ: 9
ಸಿಂಹ: ಕೈಗೊಂಡ ಕಾರ್ಯಗಳಲ್ಲಿ ಮಹಾಗಣಪತಿಯ ಕೃಪೆಯಿಂದ ವಿಘ್ನಗಳು ದೂರವಾಗಲಿವೆ. ನಿರಾಳತೆ ಹೊಂದಬಹುದು. ಶುಭಸಂಖ್ಯೆ: 6
ಕನ್ಯಾ: ಆದಾಯವನ್ನು ಹೆಚ್ಚಿಸುವ ಹೊಸ ಬಗೆಯ ಅವಕಾಶಗಳು ಅನಿರೀಕ್ಷಿತವಾಗಿ ನಿಮ್ಮ ಪಾಲಿಗೆ ಒದಗಿಬರಲಿವೆ. ಶುಭಸಂಖ್ಯೆ: 3
ತುಲಾ: ಪಾಲುದಾರಿಕೆಯ ವ್ಯವಹಾರವು ಕಷ್ಟದ ಹಂತವನ್ನು ತಲುಪಿದ್ದರೆ ಮನ ಬಿಚ್ಚಿ ಮಾತನಾಡಿ. ಒಳಿತಾಗಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಹೊಸ ಯೋಜನೆಯನ್ನು ಹಾಕಿಕೊಂಡಿದ್ದರೆ ಮನೆಯ ಸದಸ್ಯರ ಜತೆಗೂ ಚರ್ಚೆ ನಡೆಸಿ. ವಿಜಯಶಾಲಿಯಾಗುವಿರಿ. ಶುಭಸಂಖ್ಯೆ: 2
ಧನಸ್ಸು: ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ ಆರಾಧನೆ ಮಾಡುವುದರಿಂದ ಹಲವು ಬಗೆಯ ಒಳಿತಿನ ವಿಚಾರಗಳಿಗೆ ದಾರಿ ಸರಳ. ಶುಭಸಂಖ್ಯೆ: 8
ಮಕರ: ಮಕ್ಕಳ ವಿಷಯದಲ್ಲಿ ಖಂಡಿತ ಧಾರಾಳತನ ತೋರಬೇಡಿ. ಯಾವುದೂ ಅತಿ ಆಗಬಾರದು. ಅದರಿಂದ ಮಕ್ಕಳಿಗೂ ಕ್ಷೇಮ. ಶುಭಸಂಖ್ಯೆ: 6
ಕುಂಭ: ಜೂಜಿನಂತಹ ವಿಷಯಗಳಲ್ಲಿ ಸುಮ್ಮನೆ ಹಣ ತೊಡಗಿಸುವುದು ನಿಮಗೇ ತೊಂದರೆಯನ್ನು ತಂದೊಡ್ಡುವ ಸಾಧ್ಯತೆಯಿದೆ. ಶುಭಸಂಖ್ಯೆ: 4
ಮೀನ: ಗುರುರಾಯರನ್ನು ಸ್ತುತಿಸುವುದರಿಂದ ನಿಮ್ಮ ಹಲವು ರೀತಿಯ ತೊಂದರೆಗಳಿಗೆ ವಿರಾಮ ದೊರೆಯಲಿದೆ. ಶುಭಸಂಖ್ಯೆ: 1