ಈ ರಾಶಿಯವರು ಬೇರೆಯವರ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳದಿರಿ

Nitya-Bhavishya-vvani-1-2-1
Published on

ಮೇಷ: ಕೆಲಸದ ಸ್ಥಳದಲ್ಲಿ ತಾನೊಬ್ಬನೇ ಅತ್ಯಂತ ಕಠಿಣ ಪರಿಶ್ರಮಿ ಎಂದು ನೊಂದುಕೊಳ್ಳುತ್ತಿರಬೇಡಿ. ವಿಶಿಷ್ಟವಾದ ಸಿದ್ಧಿ ಒದಗಿಬರಲಿದೆ. ಶುಭಸಂಖ್ಯೆ: 4

ವೃಷಭ: ಮಕ್ಕಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಬಂದರೂ ಹಿರಿಯರಾಗಿ ವರ್ತಿಸಿದರೆ ಕಠಿಣ ಕಾರ್ಯಗಳು ಕೂಡ ನೆರವೇರಲಿವೆ. ಶುಭಸಂಖ್ಯೆ: 2

ಮಿಥುನ: ಹೊಸ ಪರಿಸರದಲ್ಲಿ ಹೊಸ ಹೊಸದಾದ ಜೀವನ ವಿಧಾನಗಳಿಗೆ ಹೊಂದಿಕೊಳ್ಳುವಿರಿ. ಆದರೆ ಹೆಚ್ಚು ಆತುರಪಡುವುದೇನೂ ಬೇಡ. ಶುಭಸಂಖ್ಯೆ: 1

ಕಟಕ: ಯಾರನ್ನೋ ಸಂತೃಪ್ತಿಪಡಿಸಲು ನಿಮ್ಮದಾದ ಅತ್ಯಮೂಲ್ಯ ಸಮಯವು ಹಾಳಾಗಬಹುದು. ಈ ಬಗ್ಗೆ ಸ್ವಲ್ಪ ಎಚ್ಚರವೂ ಇರಲಿ. ಶುಭಸಂಖ್ಯೆ: 3

ಸಿಂಹ: ಸಹೋದ್ಯೋಗಿಗಳಿಂದ ಅರ್ಥಪೂರ್ಣವಾದ ಬೆಂಬಲಗಳು ಒದಗಿಬರಲಿವೆ. ಮಾನಸಿಕವಾದ ಒತ್ತಡದಿಂದಲೂ ವಿರಾಮವಿದೆ. ಶುಭಸಂಖ್ಯೆ: 9

ಕನ್ಯಾ: ಚಿಂತಿಸುತ್ತ ಆಯಾಸಗೊಂಡಿದ್ದೀರಿ. ಕರುಣಾಳು ಪರಶಿವನನ್ನು ಶ್ರದ್ಧಾಭಕ್ತಿಗಳಿಂದ ಆರಾಧನೆ ಮಾಡಿ. ಕಷ್ಟ ಮಾಯವಾಗಲಿದೆ. ಶುಭಸಂಖ್ಯೆ: 4

ತುಲಾ: ಚಿತ್ರನಿರ್ಮಾಣ, ಭೂ ಅಭಿವೃದ್ಧಿಗಳನ್ನು ಕುರಿತ ಸಂಗತಿಗಳಲ್ಲಿ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿ ಮುನ್ನಡೆದರೆ ಕ್ಷೇಮ. ಶುಭಸಂಖ್ಯೆ: 5

ವೃಶ್ಚಿಕ: ನೀವೇ ಮುಂದಾಗಿ ಬೇರೆಯವರ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ನಿಮ್ಮ ಕೆಲಸದಲ್ಲೇ ಪರಿಪೂರ್ಣತೆಯನ್ನು ಸಾಧಿಸಿ. ಶುಭಸಂಖ್ಯೆ: 8

ಧನಸ್ಸು: ಸಫಲತೆಯನ್ನು ಪಡೆಯಲು ಕಷ್ಟಪಡುತ್ತ ಬಳಲಿದ್ದೀರಿ. ಕಾಲವು ಪಕ್ವವಾದ ಸಂದರ್ಭದಲ್ಲಿ ಬಹು ದೂರ ಹೋಗಿಬಿಡದಿರಿ. ಶುಭಸಂಖ್ಯೆ: 3

ಮಕರ: ಒಂದೇ ಗುರಿಯನ್ನು ಇಟ್ಟುಕೊಂಡು ಮುಂದೆ ಮುಂದೆ ಸಾಗತೊಡಗಿದರೆ ನಿರಾಳತೆ ಸಿಗಲಿದೆ ಎಂಬ ಅರಿವು ಮೂಡಲಿದೆ. ಶುಭಸಂಖ್ಯೆ: 7

ಕುಂಭ: ಕಚೇರಿಯಲ್ಲಿ ಕಾರಣಾಂತರಗಳಿಂದ ನಿಮ್ಮ ಬಾಸ್ ಪದೋನ್ನತಿಗೆ ಅವಕಾಶ ಮಾಡಿಕೊಟ್ಟರೆ ನಿರಾಕರಿಸದಿರಿ. ಒಳಿತಾಗಲಿದೆ. ಶುಭಸಂಖ್ಯೆ: 2

ಮೀನ: ಬೆಲೆಬಾಳುವ ವಸ್ತುಗಳು, ಆಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಅಪರಿಚಿತರಿಗೆ ತೋರಿಸಬೇಡಿ. ತೋರಿಸಿದರೆ ಕಷ್ಟವಾದೀತು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net