ನಿತ್ಯಭವಿಷ್ಯ- ಈ ರಾಶಿಯವರು ಅವಸರ ಮಾಡಿಕೊಂಡು ಅನಾಹುತ ಮಾಡಿಕೊಳ್ತಾರಂತೆ!

Nitya-Bhavishya-vvani-1-2-1
Published on

ಮೇಷ - ನೀವು ಪ್ರಶಾಂತವಾದ ಮನಸ್ಸುಳ್ಳವರು
ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಂಡರೆ
ಕೆಲಸಗಳು ಸಫಲವಾಗಲಿವೆ. ಶುಭಸಂಖ್ಯೆ: 1

ವೃಷಭ- ಮೇಲಧಿಕಾರಿಗಳು ನಿಮ್ಮ ಕೆಲಸದಿಂದ
ಸಂತುಷ್ಟರಾಗುತ್ತಾರೆ. ಮನೆಯಲ್ಲಿ ನೆಮ್ಮದಿಯ
ವಾತಾವರಣ ಇರಲಿದೆ. ಶುಭಸಂಖ್ಯೆ: 4

ಮಿಥುನ- ಸಂಗಾತಿಯ ಜತೆಗೆ ಸಣ್ಣ ಪ್ರಯಾಣ
ಮಾಡುವ ಅವಕಾಶ ಬರಲಿದೆ. ಇನ್ನಷ್ಟು
ಉತ್ಸಾಹವೂ ಮೂಡಲಿದೆ. ಶುಭಸಂಖ್ಯೆ: 3

ಕಟಕ- ಅನೇಕ ಜನರನ್ನು ಭೇಟಿ ಮಾಡುವುದರಿಂದ
ಆಯಾಸಪಡುತ್ತೀರಿ. ಒಬ್ಬ ವ್ಯಕ್ತಿಯಿಂದ ಮಾತ್ರ
ಸಹಾಯ ಲಭ್ಯವಾಗಲಿದೆ. ಶುಭಸಂಖ್ಯೆ: 2

ಸಿಂಹ- ಜೀವನದಲ್ಲಿ ಏರುಪೇರುಗಳು ಅನಿವಾರ್ಯ.
ಹೀಗಾಗಿ ಕುಸಿತಕ್ಕೆ ಕುಗ್ಗದೆ ಇರುವುದಕ್ಕೆ
ಕಲಿತುಕೊಳ್ಳಿ. ತಾಳ್ಮೆ ಇರಲಿ. ಶುಭಸಂಖ್ಯೆ: 5

ಕನ್ಯಾ- ಆರ್ಥಿಕ ವ್ಯವಹಾರಗಳ ಸೂಕ್ತ ನಿರ್ವಹಣಾ
ಕೌಶಲದಿಂದ ಮನೆಯ ಹಿರಿಯರ
ಮೆಚ್ಚುಗೆ ದೊರೆಯಲಿದೆ. ಶುಭಸಂಖ್ಯೆ: 7

ತುಲಾ- ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ
ಆರಾಧಿಸಿ. ಮನೆಗೆ ಸಂಬಂಧಿಸಿದ ಕಾರ್ಯಗಳೆಲ್ಲ
ಯಶಸ್ವಿಯಾಗಲಿವೆ. ಶುಭಸಂಖ್ಯೆ: 6

ವೃಶ್ಚಿಕ- ದೊಡ್ಡ ವಹಿವಾಟನ್ನು ಜವಾಬ್ದಾರಿಯಿಂದ
ನಿಭಾಯಿಸಿ. ಹೆಚ್ಚಿನ ಖರ್ಚುಗಳಿಲ್ಲದೆ
ಲಾಭವೇ ಉಂಟಾಗಲಿದೆ. ಶುಭಸಂಖ್ಯೆ: 9

ಧನುಸ್ಸು- ನಂಬಿದವರು ಕೈಬಿಡುತ್ತಾರೆಂಬ ಚಿಂತೆಯಲ್ಲೇ
ಬಳಲದಿರಿ. ನಿಮ್ಮೊಳಗೆ ಅಚಲ ಆತ್ಮವಿಶ್ವಾಸ
ಮಾತ್ರ ಇದ್ದೇ ಇರಲಿ. ಶುಭಸಂಖ್ಯೆ: 8

ಮಕರ- ಎಲ್ಲರ ಬಗ್ಗೆಯೂ ಸಂಶಯಪಡಬೇಕಾದ
ಅಗತ್ಯ ಇರುವುದಿಲ್ಲ. ಆದರೆ ಎಲ್ಲ ಒಳ್ಳೆಯವರೇ
ಎಂದು ಕೂಡ ಭಾವಿಸದಿರಿ. ಶುಭಸಂಖ್ಯೆ: 1

ಕುಂಭ- ಅವಸರವೇ ಅನಾಹುತಕ್ಕೆ ಕಾರಣ
ಎನ್ನುತ್ತಾರೆ. ಆದರೆ ಅದು ಪರಿಮಿತಿಯಲ್ಲಿ
ಇದ್ದರಷ್ಟೇ ನಿಮಗೆ ಒಳಿತಿದೆ. ಶುಭಸಂಖ್ಯೆ: 4

ಮೀನ- ಟೀಕಿಸುವವರ ಬಗ್ಗೆ ಏನೂ ಆತಂಕಪಡುವ
ಅವಶ್ಯಕತೆ ಇಲ್ಲ. ಆದರೆ ಹೊಗಳುವವರೇ
ಸಂಕಷ್ಟ ತಂದೊಡ್ಡಬಹುದು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net