ಈ ರಾಶಿಯವರಿಗೆ ಇಂದು ಉತ್ತಮ ಸಾಹಸ ಪರಿವರ್ತನೆಯ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಂದುಕೊಂಡಂತೆ ನಡೆಯುವುದು. ತಾಳ್ಮೆ ಇರಲಿ. ಯೋಚಿಸಿ ಮಾತನಾಡಿ. ಮಹಿಳೆಯರು ಹೆಚ್ಚು ಜಾಗರೂಕರಾಗಿರಿ. ಶುಭಸಂಖ್ಯೆ: 1

ವೃಷಭ: ರೋಗ ಉಪಶಮನ. ಕಲ್ಪನೆಗಳಿಂದ ಹೊರಬನ್ನಿ. ಕುಟುಂಬದಲ್ಲಿ ಶಾಂತಿ. ಪ್ರಯಾಣ ಮುಂದೂಡಿದರೆ ಒಳ್ಳೆಯದು. ಶುಭಸಂಖ್ಯೆ: 9

ಮಿಥುನ: ಶುಭ ಕಾರ್ಯಗಳಲ್ಲಿ ವಿಘ್ನ. ಆರೋಗ್ಯದ ಕಾಳಜಿ ಇರಲಿ. ಮಾತಾಪಿತರ ಆಶೀರ್ವಾದ ಪಡೆಯಿರಿ. ನೂತನ ವಾಹನ ಖರೀದಿ. ಶುಭಸಂಖ್ಯೆ: 3

ಕಟಕ: ಕಚೇರಿಯಲ್ಲಿ ಹೆಚ್ಚಿದ ಒತ್ತಡ. ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ. ಶುಭಕಾರ್ಯ ವಿಳಂಬ. ರಾಜಕೀಯದಲ್ಲಿ ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8

ಸಿಂಹ: ಪರಿವರ್ತನೆಯ ದಿನ. ರಾಜಕೀಯದಲ್ಲಿ ಇರುವವರಿಗೆ ಚಟುವಟಿಕೆ ಜೋರು. ಸಹನೆಯಿರಲಿ. ಕುಟುಂಬ ವ್ಯಾಜ್ಯ ಪರಿಹಾರ. ಶುಭಸಂಖ್ಯೆ: 2

ಕನ್ಯಾ: ಕೆಲಸ ಕಾರ್ಯದಲ್ಲಿ ಕಿರಿಕಿರಿ. ಗುರುಹಿರಿಯರ ಬೋಧನೆಯನ್ನು ಪಡೆಯಿರಿ. ಜವಾಬ್ದಾರಿಯಿಂದ ವರ್ತಿಸಿ. ಬಡ್ತಿ ಸಾಧ್ಯತೆ. ಶುಭಸಂಖ್ಯೆ: 5

ತುಲಾ: ಏನೇನೋ ಚಿಂತೆಗಳಿಂದ ಮಾನಸಿಕ ಕ್ಲೇಶ. ಒಂದು ಬಾರಿಗೆ ಒಂದೇ ಕೆಲಸವನ್ನು ನಿರ್ವಹಿಸಿ. ಅನವಶ್ಯಕ ತಿರುಗಾಟ. ಶುಭಸಂಖ್ಯೆ: 7

ವೃಶ್ಚಿಕ: ಮಾತು ಮಿತವಾಗಿರಲಿ. ಅನಿರೀಕ್ಷಿತ ಅನಾರೋಗ್ಯ ಸಮಸ್ಯೆ. ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 6

ಧನುಸ್ಸು: ಉತ್ತಮ ಸಾಹಸ ಪರಿವರ್ತನೆಯ ದಿನ. ಅವಕಾಶಗಳನ್ನು ಚೆನ್ನಾಗಿ ಗಮನಿಸಿ ಉಪಯೋಗಿಸಿಕೊಳ್ಳಿ. ಹೂಡಿಕೆಯ ಬಗ್ಗೆ ಎಚ್ಚರ. ಶುಭಸಂಖ್ಯೆ: 8

ಮಕರ: ರಾಜಕೀಯ, ತಂತ್ರಜ್ಞಾನ, ವೈದ್ಯ ಕ್ಷೇತ್ರದವರಿಗೆ ಅನುಕೂಲ. ವ್ಯಾಜ್ಯಗಳ ಪರಿಹಾರ ಆಗುವುದು. ದಾನ ಧರ್ಮದಲ್ಲಿ ಆಸಕ್ತಿ. ಶುಭಸಂಖ್ಯೆ: 2

ಕುಂಭ: ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ. ಉತ್ತಮ ಜೊತೆಗಾರರು ಸಿಗುವರು. ಮನೆಯಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 9

ಮೀನ: ಬಂಧು - ಮಿತ್ರರಲ್ಲಿ ಸಾವಧಾನದಿಂದ ಇರಿ. ವ್ಯವಹಾರ ಉತ್ತಮ. ಸತ್ಕಾರ್ಯಗಳಲ್ಲಿ ಆಸಕ್ತಿ. ಮಕ್ಕಳಿಂದ ಸಂತೋಷ. ಶುಭ ಸಂಖ್ಯೆ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net