ಈ ರಾಶಿಯವರಿಗಿಂದು ಆರ್ಥಿಕವಾಗಿ ಗಣನೀಯ ಪ್ರಗತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 9

ವೃಷಭ: ನಿರೀಕ್ಷಿತ ಧನಾಗಮನ. ಮಕ್ಕಳ ವಿಚಾರದಲ್ಲಿ ಸಂತಸ. ಗುರುಹಿರಿಯರಿಂದ ಪೋ›ತ್ಸಾಹ. ಸಾಂಸಾರಿಕ ಸುಖ ತೃಪ್ತಿದಾಯಕ. ಶುಭಸಂಖ್ಯೆ:1

ಮಿಥುನ: ಸಣ್ಣ ಪ್ರಯಾಣಗಳಿಗೆ ಅವಕಾಶ ಒದಗಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ಧನಾರ್ಜನೆಗೆ ಅಧಿಕ ಶ್ರಮ. ಶುಭಸಂಖ್ಯೆ: 5

ಕಟಕ: ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ದಾಂಪತ್ಯ ಸುಖದಲ್ಲಿ ವೃದ್ಧಿ. ನಿರೀಕ್ಷಿತ ಧನಾಗಮ. ಶುಭಸಂಖ್ಯೆ: 7

ಸಿಂಹ: ಮಾನಸಿಕವಾಗಿ ಸುದೃಢ. ದೈಹಿಕ ವಿಚಾರದ ಬಗ್ಗೆ ಎಚ್ಚರ. ಸಹೋದ್ಯೋಗಿಗಳಿಂದ ಸಹಕಾರ. ವಿದ್ಯಾರ್ಥಿಗಳಿಗೆ ಸದವಕಾಶ. ಶುಭಸಂಖ್ಯೆ: 8

ಕನ್ಯಾ: ಆರೋಗ್ಯದ ಬಗ್ಗೆ ಗಮನವಿರಲಿ. ದೀರ್ಘ ಪ್ರಯಾಣದಲ್ಲಿ ದೇಹಾಯಾಸವಾದೀತು. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ. ಶುಭಸಂಖ್ಯೆ: 9

ತುಲಾ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳು ಪ್ರಗತಿದಾಯಕ. ದೀರ್ಘ ಪ್ರಯಾಣ ಸಂಭವ. ಮಕ್ಕಳಿಂದ ಸಂತೋಷ. ಶುಭಸಂಖ್ಯೆ: 7

ವೃಶ್ಚಿಕ: ವ್ಯವಹಾರದಲ್ಲಿ ಪರರಿಗೆ ಉಪಕಾರ ಮಾಡುವಾಗ ತಿಳಿದು ನಿರ್ಣಯಿಸಿ. ಗೃಹ ವಾಹನ ಆಸ್ತಿ ಸಂಬಂಧ ಖರ್ಚು ತೋರೀತು. ಶುಭಸಂಖ್ಯೆ: 1

ಧನುಸ್ಸು: ಹಿರಿಯರ ಮಾರ್ಗದರ್ಶನ ಸ್ವೀಕರಿಸಿ. ತಾಳ್ಮೆಯಿರಲಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ:3

ಮಕರ: ಒಳ್ಳೆ ಹೆಸರು ಸಂಪಾದಿಸುವ ಸಮಯ. ದಾಂಪತ್ಯದಲ್ಲಿ ಚರ್ಚೆ. ಮಕ್ಕಳಿಂದ ಸಂತೋಷ. ಸ್ಥಿರಾಸ್ತಿಯಲ್ಲಿ ಉತ್ತಮ ಬದಲಾವಣೆ. ಶುಭಸಂಖ್ಯೆ: 6

ಕುಂಭ: ಸಂದರ್ಭೋಚಿತ ಉಪಾಯ. ಪ್ರತಿಭೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಧನಾಗಮ ಉತ್ತಮ. ಬಂಧುಮಿತ್ರರ ಸಹಕಾರ. ಶುಭಸಂಖ್ಯೆ:3

ಮೀನ: ಆರ್ಥಿಕವಾಗಿ ಗಣನೀಯ ಪ್ರಗತಿ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ವಿುಕ ಕಾರ್ಯಗಳಲ್ಲಿ ನೇತೃತ್ವ ವಹಿಸುವಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net