

ಮೇಷ: ಕಷ್ಟಪಟ್ಟು ತಯಾರಿಸಿದ ಪದಾರ್ಥ ಅಥವಾ ಮಾಡಿದ ಕೆಲಸ ಕೊನೆಯ ಘಳಿಗೆಯಲ್ಲಿ ತಿರಸ್ಕೃತವಾಗಬಹುದು. ಅದೃಷ್ಟ ಸಂಖ್ಯೆ: 2
ವೃಷಭ:ಯಾರನ್ನೂ ಬೆದರಿಸಿ ನಿಮ್ಮ ಕೆಲಸ ಮಾಡಿಸಿಕೊಳ್ಳದಿರಿ. ಚಿಕ್ಕ ತಪ್ಪು ಮಾಡಿದರೂ ದೊಡ್ಡ ಸಮಸ್ಯೆ ಆದೀತು. ಅದೃಷ್ಟ ಸಂಖ್ಯೆ: 9
ಮಿಥುನ: ಸತ್ಯ, ನ್ಯಾಯಗಳನ್ನು ಬಿಟ್ಟು ಹೇಗೋ ಕೆಲಸ ಮಾಡಿಸಲು ಇಚ್ಛಿಸುವಿರಿ. ಇಂದು ಸರಿ ಅನಿಸಿದರೂ ಅದು ತಪ್ಪು. ಅದೃಷ್ಟ ಸಂಖ್ಯೆ: 7
ಕಟಕ:ಜಾಸ್ತಿ ನಡೆಯುವ ಸಂದರ್ಭ ಅನಿವಾರ್ಯವಾದ ಕಾರಣ ಸಂಜೆ ಕಾಲುನೋವು, ಊತ ಇತ್ಯಾದಿ ಬಂದೀತು. ಅದೃಷ್ಟ ಸಂಖ್ಯೆ: 4
ಸಿಂಹ:ಸರ್ಕಾರಿ ಕೆಲಸಕ್ಕೆ ಓಡಾಡಬೇಕಾದೀತು. ಇಷ್ಟವಿಲ್ಲದ ಜವಾಬ್ದಾರಿ ಹೆಗಲಿಗೇರುತ್ತದೆ. ವಿರೋಧಿಸಲೂ ಆಗದು. ಅದೃಷ್ಟ ಸಂಖ್ಯೆ: 6
ಕನ್ಯಾ: ಯಾರ ಮೇಲೂ ಅವಲಂಬಿತರಾಗದೆ ಬಹಳ ಕೆಲಸಕಾರ್ಯ ಮಾಡಲಿದ್ದೀರಿ. ಕಷ್ಟಗಳಿಗೆ ಕೊನೆ ಇದೆ. ಧನಲಾಭ. ಅದೃಷ್ಟ ಸಂಖ್ಯೆ: 3
ತುಲಾ: ನಿಮ್ಮ ದಡ್ಡತನದಿಂದ ಗುಟ್ಟು ರಟ್ಟಾಗುವ ಸಾಧ್ಯತೆ. ಯಾರಲ್ಲಿ ಏನು ಮಾತಾಡುತ್ತಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಅದೃಷ್ಟ ಸಂಖ್ಯೆ: 1
ವೃಶ್ಚಿಕ:ಎಲ್ಲ ಅಂದುಕೊಂಡಂತೆ ಆಗುತ್ತಿದೆ ಎನಿಸೀತು. ತಿಳಿಯದೆ ಮಾಡಿದ ತಪ್ಪು ಕೂಡ ತಪ್ಪೇ ಆಗಿರುತ್ತದೆ. ಒಪ್ಪಿಕೊಳ್ಳಿ. ಅದೃಷ್ಟ ಸಂಖ್ಯೆ: 7
ಧನಸ್ಸು:ಇಂದೇ ಎಲ್ಲ ಆಗಿ ಲಾಭ ಸಿಗಬೇಕೆಂದರೆ ಕಷ್ಟ. ತಾಳ್ಮೆ ಬೇಕು. ಮುಖ್ಯ ವಿಚಾರ ಮರೆತಿದ್ದು ತಿಳಿಯಲು ತಡವಾದೀತು. ಅದೃಷ್ಟ ಸಂಖ್ಯೆ: 5
ಮಕರ: ಯಾರನ್ನೋ ಹೊಗಳಿ ಕೆಲಸ ಮಾಡಿಸಿಕೊಳ್ಳಲು ನಿಮಗೆ ಬರದು. ಆ ಪ್ರಯತ್ನವೂ ಬೇಡ. ಸುಳ್ಳು ಹೇಳಿದರೆ ಸಿಕ್ಕಿಬೀಳುವಿರಿ. ಅದೃಷ್ಟ ಸಂಖ್ಯೆ: 6
ಕುಂಭ: ನಗುವಿನಿಂದಲೇ ಜನರನ್ನು ಸೆಳೆಯುವಿರಿ. ಇದು ಕೆಲವರಿಗೆ ಯಶಸ್ಸು ತಂದರೆ, ಹಲವರಿಗೆ ಚಿಂತೆಯೂ ಆಗುತ್ತದೆ. ಅದೃಷ್ಟ ಸಂಖ್ಯೆ: 1
ಮೀನ:ಗಂಟಲುನೋವು, ಕೆಮ್ಮಿನ ತೊಂದರೆ ಆದೀತು. ಆರೋಗ್ಯದತ್ತ ಗಮನ ಹರಿಸಿ. ಕರಿದ ಪದಾರ್ಥವನ್ನು ಸೇವಿಸದಿರಿ. ಅದೃಷ್ಟ ಸಂಖ್ಯೆ: 3