ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನ್ಯಾಯವಾದಿಗಳು ಸ್ವಪ್ರಯತ್ನದಿಂದ ಕಾರ್ಯದಲ್ಲಿ ಮುನ್ನಡೆ ಕಾಣುವಿರಿ. ಮಕ್ಕಳಿಂದಲೇ ವಾದ-ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ: 4

ವೃಷಭ: ಮುಕ್ತ ಭಾವದಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಬೆಂಬಲ ಸೂಚಿಸುವರು. ಶುಭಸಂಖ್ಯೆ: 7

ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ನಷ್ಟವನ್ನು ತಪ್ಪಿಸಿಕೊಳ್ಳುವಿರಿ. ಜಂಟಿ ವ್ಯವಹಾರಗಳಲ್ಲಿ ಭಾಗವಹಿಸದಿರುವುದು ಉತ್ತಮ. ಶುಭಸಂಖ್ಯೆ: 1

ಕಟಕ: ಪದೇಪದೆ ನಿರ್ಧಾರ ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಅಸಹನೆ. ಸಗಟು ಹೂವಿನ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ಸಿಂಹ: ಆತುರದ ನಿರ್ಧಾರ ಬೇಡ. ಸಾಮಾಜಿಕ ಕಾರ್ಯಗಳಲ್ಲಿ ಅವಕಾಶ. ವೃತ್ತಿಯಲ್ಲಿ ವೈಯಕ್ತಿಕ ಸಮಸ್ಯೆ ಪರಿಹರಿಸಿಕೊಳ್ಳುವಿರಿ. ಶುಭಸಂಖ್ಯೆ: 8

ಕನ್ಯಾ: ಸ್ನೇಹಿತರೊಂದಿಗೆ ವಿಚಾರವಿನಿಮಯ ಮಾಡಿಕೊಳ್ಳಿ. ಸಾಲ ಮರುಪಾವತಿ ಮಾಡುವಿರಿ. ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 4

ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಪ್ರಯತ್ನಿಸುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಸ್ವಯಂ ಉದ್ಯೋಗಿಗಳಿಗೆ ಉತ್ತಮ ದಿನ. ಶುಭಸಂಖ್ಯೆ: 1

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿದ್ದವರಿಗೆ ಬಡ್ತಿ ಸಾಧ್ಯತೆ. ಸರ್ಕಾರಿ ಕೆಲಸದಲ್ಲಿ ಮಂದಗತಿ. ಶುಭಸಂಖ್ಯೆ: 7

ಧನುಸ್ಸು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸಮಾಧಾನ ಚಿತ್ತದಿಂದ ವ್ಯವಹರಿಸಿ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 1

ಮಕರ: ಸತ್ಯಶೋಧನೆಯಿಂದ ತಲೆದೋರಿದ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗೃತೆ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

ಕುಂಭ: ಕೃಷಿ ಯಂತ್ರ ಬಾಡಿಗೆಯಿಂದ ಆದಾಯ. ಪ್ರೀತಿ-ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ವಿದೇಶಿ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಶುಭಸಂಖ್ಯೆ: 1

ಮೀನ: ಸಾಮರ್ಥ್ಯವನ್ನು ಅರಿತು ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ನೌಕರಿಯಲ್ಲಿರುವವರಿಗೆ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net