ಈ ರಾಶಿಯವರಿಗಿಂದು ಉತ್ತಮ ಧನವೃದ್ಧಿ, ಮಿತ್ರರಿಂದ ಸಕಾಲದಲ್ಲಿ ಸಹಕಾರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು. ಅನಗತ್ಯ ಸ್ಪರ್ಧೆ ಬೇಡ. ಅನಿರೀಕ್ಷಿತ ಧನಾಗಮ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆ. ಶುಭಸಂಖ್ಯೆ: 1

ವೃಷಭ: ಬಹುಜನರ ಸಹಕಾರದಿಂದ ಹಲವು ವಿಧದಲ್ಲಿ ಧನ ಲಾಭ. ದೂರದ ವ್ಯವಹಾರಗಳಲ್ಲಿ ಅನ್ಯರ ಸಹಾಯದಿಂದ ಪ್ರಗತಿಯಾಗಲಿದೆ. ಶುಭಸಂಖ್ಯೆ: 3

ಮಿಥುನ: ಮಾತಾಪಿತೃರಿಂದ, ಹಿರಿಯರಿಂದ ಸಂತಸ. ಆರೋಗ್ಯ ಉತ್ತಮ. ವಿದೇಶದಿಂದ ಧನಾಗಮ. ಸಹೋದ್ಯೋಗಿಗಳಿಂದ ಸಹಕಾರ. ಶುಭಸಂಖ್ಯೆ: 7

ಕಟಕ: ಸದೃಢ ಆರೋಗ್ಯ. ಉತ್ಸಾಹ. ಭೂಮಿ, ಆಸ್ತಿ ವಿಚಾರದಿಂದ ಧನಲಾಭ. ಧಾರ್ವಿುಕ ವಿಚಾರ, ಸರ್ಕಾರೀ ವ್ಯವಹಾರಗಳಿಂದ ತೃಪ್ತಿ. ಶುಭಸಂಖ್ಯೆ: 8

ಸಿಂಹ: ಸರ್ವಜನರ ಮಾನ್ಯತೆ. ಆರೋಗ್ಯದತ್ತ ಗಮನವಿರಲಿ. ಜವಾಬ್ದಾರಿಯುತ ಕಾರ್ಯದಿಂದ ಧನಾಗಮ. ಕುಕೃತ್ಯ ಮಾಡಬೇಡಿ. ಶುಭಸಂಖ್ಯೆ: 6

ಕನ್ಯಾ: ಪರರಿಗೆ ಸಹಾಯ ಮಾಡುವಾಗ ಎಚ್ಚರ ವಹಿಸುವು ದರಿಂದ ಅನಾಹುತ ತಪ್ಪೀತು. ವ್ಯವಹಾರಗಳಲ್ಲಿ ಮಾನ್ಯತೆ. ಪರಿಶ್ರಮ ಅಗತ್ಯ. ಶುಭಸಂಖ್ಯೆ: 7

ತುಲಾ: ದೂರ ಪ್ರಯಾಣ ಸಂಭವ. ಆರೋಗ್ಯದ ಬಗ್ಗೆ ಎಚ್ಚರ. ಹಠಮಾರಿತನ ಸಲ್ಲದು. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ಪ್ರಗತಿ. ಶುಭಸಂಖ್ಯೆ: 6

ವೃಶ್ಚಿಕ: ಉತ್ತಮ ಧನವೃದ್ಧಿ. ಮಿತ್ರರಿಂದ ಸಕಾಲದಲ್ಲಿ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ಇಷ್ಟದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 6

ಧನುಸ್ಸು: ಧಾರ್ವಿುಕ ಕಾರ್ಯಗಳ ನೇತೃತ್ವ. ಉತ್ತಮ ಮಾರ್ಗದರ್ಶನ ಮಾಡುವಲ್ಲಿ ಯಶಸ್ಸು. ಪ್ರಶಂಸೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ಮಕರ: ಹಠಮಾರಿತನ ಸಲ್ಲದು. ತಾಯಿ ಸಮಾನರಿಂದ ಮಾರ್ಗದರ್ಶನ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಶುಭಸಂಖ್ಯೆ: 9

ಕುಂಭ: ಬಂಧುಗಳಿಂದ ಅಗತ್ಯ ನೆರವು. ಪೂರ್ವನಿಯೋಜಿತ ಕೆಲಸಗಳಲ್ಲಿ ಗಮನಾರ್ಹ ಪ್ರಗತಿ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 4.

ಮೀನ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಜನಮನ್ನಣೆ ಪ್ರಾಪ್ತಿಯಾಗಿ ಸಮಾಧಾನ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net