ಈ ರಾಶಿಯವರ ಮೇಲಿದ್ದ ಸಂಶಯ ಇಂದು ನಿವಾರಣೆ ಆಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳ ಜೊತೆಗಿನ ವೈಮನಸ್ಯ ಮನಸ್ಸನ್ನು ಕೆಡಿಸುತ್ತದೆ. ಸಹನೆ ಕಳೆದು ಕೊಳ್ಳಬೇಡಿ. ದಿನಸಿ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 9

ವೃಷಭ: ಸತತ ದುಡಿಮೆಯಿಂದ ಆಯಾಸ. ನಿವೇಶನ ಖರೀದಿ ನಿರ್ಧಾರ. ಅವಿವಾಹಿತರಿಗೆ ಶುಭ. ಉನ್ನತ ವಿದ್ಯಾಭ್ಯಾಸಕ್ಕೆ ನಿರ್ಧಾರ. ಶುಭಸಂಖ್ಯೆ: 7

ಮಿಥುನ: ಹಿತಶತ್ರುಗಳಿಂದ ನಿಮ್ಮ ಬಗ್ಗೆ ಅಪಪ್ರಚಾರ. ಮಾತಿನಿಂದ ಶತ್ರುಗಳ ಸೃಷ್ಟಿ. ಅನಾರೋಗ್ಯ ಕಾಡಬಹುದು. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3

ಕಟಕ: ಕಾರ್ಯ ನಿರ್ವಹಣೆಗೆ ಪ್ರಶಂಸೆ. ಸರಕು ಸಾರಿಗೆ ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಧಾರ್ವಿುಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆ. ಶುಭಸಂಖ್ಯೆ: 1

ಸಿಂಹ: ಬಂದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ವಿವಾಹ ಯತ್ನದಲ್ಲಿ ಸಫಲತೆ. ಶುಭಸಂಖ್ಯೆ: 7

ಕನ್ಯಾ: ನಿಮ್ಮ ಮೇಲೆ ಇದ್ದ ಸಂಶಯ ನಿವಾರಣೆ ಆಗಲಿದೆ. ನಿರೀಕ್ಷಿತ ಅಧಿಕಾರ-ಪ್ರಾಪ್ತಿ ಸಾಧ್ಯತೆ. ಸಂಗಾತಿಯೊಂದಿಗೆ ಮನಸ್ತಾಪ. ಶುಭಸಂಖ್ಯೆ: 5

ತುಲಾ: ಒಪ್ಪಂದದ ವ್ಯವಹಾರದಲ್ಲಿ ವಿಫಲತೆ. ಧಾರ್ವಿುಕ ಕೆಲಸಗಳಿಗಾಗಿ ಹಣ ಖರ್ಚು. ಕುಲದೇವರ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 7

ವೃಶ್ಚಿಕ: ಕೆಲಸಕಾರ್ಯಗಳಲ್ಲಿ ನಿರೀಕ್ಷಿತ ಮುನ್ನಡೆ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಬಂದು ಸಮಾಧಾನ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:1

ಧನುಸ್ಸು: ನೂತನ ಗೃಹನಿರ್ವಣ ಕೆಲಸಕ್ಕೆ ಚಾಲನೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮಕ್ಕಳ ಪ್ರಗತಿಯ ಬಗ್ಗೆ ಹೆಮ್ಮೆ. ಶುಭಸಂಖ್ಯೆ: 4

ಮಕರ: ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಮಾಧಾನ. ಸಮಸ್ಯೆಯನ್ನು ಆಪ್ತರಲ್ಲಿ ಹಂಚಿಕೊಳ್ಳಿ. ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 7

ಕುಂಭ: ಯಶಸ್ವೀ ನಿರ್ವಹಣೆಯ ಮೂಲಕ ಕಚೇರಿಯಲ್ಲಿ ಪ್ರಶಂಸೆ. ನಿಮ್ಮ ಬದುಕಿಗೆ ಹೊಸ ಆಯಾಮ ಸಿಗಲಿದೆ. ಸಂಜೆ ಶುಭ ಸುದ್ದಿ. ಶುಭಸಂಖ್ಯೆ: 9

ಮೀನ: ಬಂಧುಗಳೊಂದಿಗೆ ಬಾಂಧವ್ಯ ವೃದ್ಧಿ. ಆರ್ಥಿಕ ಚೇತರಿಕೆಗೆ ಅವಕಾಶ. ದೇವತಾ ಕಾರ್ಯದಲ್ಲಿ ಭಾಗವಹಿಸಿದ ಸಮಾಧಾನ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net