

ಮೇಷ: ಮಾನಾಪಮಾನ, ನಿಂದನೆ; ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ ಸಾಧ್ಯತೆ. ಶುಭ ಸಂಖ್ಯೆ 8
ವೃಷಭ: ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭ ಸಂಖ್ಯೆ 1
ಮಿಥುನ: ಅನಿರೀಕ್ಷಿತ ಪ್ರಯಾಣ, ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನನುಕೂಲ, ದೈವನಿಂದನೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭ ಸಂಖ್ಯೆ 6
ಕಟಕ: ಆರ್ಥಿಕವಾಗಿ ಮೋಸ, ಭೂಮಿ ಮತ್ತು ವಾಹನ ಖರೀದಿ ಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಸ್ನೇಹಿತರ ನಡುವೆ ಸಮಸ್ಯೆ. ಶುಭ ಸಂಖ್ಯೆ 5
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವಕ್ಕೆ ಧಕ್ಕೆ, ಮಕ್ಕಳ ನಡವಳಿಕೆಯಿಂದ ಬೇಸರ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ. ಶುಭ ಸಂಖ್ಯೆ 6
ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೆಟ್ಟ ಕನಸುಗಳು, ಪತ್ರ ವ್ಯವಹಾರದಲ್ಲಿ ನಷ್ಟ ಮತ್ತು ಸಂಕಷ್ಟ. ಶುಭ ಸಂಖ್ಯೆ 1
ತುಲಾ: ಮಿತ್ರರು ನಾನಾ ಕಾರಣಗಳಿಂದ ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಪ್ರಾಪ್ತಿ. ಶುಭ ಸಂಖ್ಯೆ 9
ವೃಶ್ಚಿಕ: ದುರಾಲೋಚನೆಗಳು ಹೆಚ್ಚು, ನಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಶುಭ ಸಂಖ್ಯೆ 4
ಧನುಸ್ಸು: ಸಾಲದ ಸಹಾಯ, ಮಾನಸಿಕ ವೇದನೆಯಾಗುವ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ. ಶುಭ ಸಂಖ್ಯೆ 6
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ಪ್ರೀತಿಪಾತ್ರರು ದೂರ, ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು. ಶುಭ ಸಂಖ್ಯೆ 8
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು, ಶಕ್ತಿ ದೇವತೆಗಳ ದರ್ಶನ. ಶುಭ ಸಂಖ್ಯೆ 2
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ. ಶುಭ ಸಂಖ್ಯೆ 4