ಈ ರಾಶಿಯವರ ಕೆಲಸಕ್ಕೆ ಕಚೇರಿಯಲ್ಲಿ ಮೆಚ್ಚುಗೆ ವ್ಯಕ್ತವಾಗಲಿದೆ...

Nitya-Bhavishya-vvani-1-2-1
Published on

ಮೇಷ: ಚಿನ್ನಾಭರಣಗಳು, ಹೊಸ ಬಟ್ಟೆಗಳ ಖರೀದಿಗೆ ಮುಂದಾಗದಿರುವುದೇ ಉತ್ತಮ. ಶುಭಕರ ಸುದ್ದಿ ಕೇಳುವಿರಿ. ಶುಭಸಂಖ್ಯೆ: 5

ವೃಷಭ: ಎದುರಾಗಿ ಬಂದ ಎಲ್ಲ ವಿಷಮ ಸ್ಥಿತಿಗತಿಗಳಿಗೆ ಅಂಜದೆ ಮುಂದಕ್ಕೆ ಸಾಗುವ ಸಂಕಲ್ಪಬಲ ನಿಮಗಿಂದು ಸಿದ್ಧಿಸಲಿದೆ. ಶುಭಸಂಖ್ಯೆ: 8

ಮಿಥುನ: ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸಲು ಶ್ರಮಿಸಬೇಕು. ಉತ್ತಮ ದಿನಗಳು ನಿಮಗೆ ಆರಂಭವಾಗಲಿವೆ. ಶುಭಸಂಖ್ಯೆ: 2

ಕಟಕ: ತಾಯಿಯಿಂದ ಅಮೂಲ್ಯ ಉಡುಗೊರೆ ಸಿಗಲಿದೆ. ಉತ್ತಮವಾದ ನಡವಳಿಕೆಯಿಂದಲೇ ನಿಮಗಿಂದು ಲಾಭವಿದೆ. ಶುಭಸಂಖ್ಯೆ: 3

ಸಿಂಹ: ದೇಹದ ಬಗೆಗೆ ಮೊದಲು ಕಾಳಜಿ ವಹಿಸಿ. ನಂತರ ಸಮಾಜದ ಬಗ್ಗೆ ಚಿಂತಿಸಬಹುದು. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 1

ಕನ್ಯಾ: ನಿಮ್ಮ ಪ್ರತಿಭೆಯಿಂದ ಜನರನ್ನು ಗೆಲ್ಲುವುದಕ್ಕೆ ಹೆಚ್ಚಿನದಾದ ಅವಕಾಶ ಸಿಗಲಿದೆ. ಈ ಬಗೆಗೆ ಸಂಗಾತಿಯೊಡನೆ ಚರ್ಚಿಸಿ. ಶುಭಸಂಖ್ಯೆ: 4

ತುಲಾ: ವ್ಯಾಪಾರಕ್ಕೆ ಸಂಬಂಧಿಸಿದ ಪ್ರವಾಸದ ಅವಕಾಶ ಸಿಗುತ್ತದೆ. ಅವಸರ ಮಾಡದೆ ಚಿಂತಿಸಿಯೇ ತೀರ್ಮಾನಿಸಿ. ಶುಭಸಂಖ್ಯೆ: 7

ವೃಶ್ಚಿಕ: ಹಳೆಯ ಗೆಳೆಯರೊಡನೆ ಭೇಟಿಯಾಗುವ ಸಂದರ್ಭ ಒದಗಿಬರಲಿದೆ. ಜೀವನದ ಪ್ರಗತಿಗೆ ಹೊಸ ದಾರಿ ಲಭ್ಯ. ಶುಭಸಂಖ್ಯೆ: 9

ಧನಸ್ಸು: ಕಚೇರಿಯಲ್ಲಿ ನಿಮ್ಮ ಕೆಲಸಗಳಿಗೆ ಮೆಚ್ಚುಗೆ ದೊರೆಯಲಿದೆ. ನೀವು ಕಂಡ ಕನಸುಗಳಿಗೆ ಹಿರಿಯರ ಬೆಂಬಲವೂ ಲಭ್ಯ. ಶುಭಸಂಖ್ಯೆ: 6

ಮಕರ: ಅನೇಕ ವಿಚಾರಗಳಲ್ಲಿ ಸಂಗಾತಿಯಿಂದ ಮಾರ್ಗದರ್ಶನ ದೊರಕುತ್ತದೆ. ಅವರೊಡನೆ ಬಿಗುಮಾನ ಹೊಂದದಿರಿ. ಶುಭಸಂಖ್ಯೆ: 5

ಕುಂಭ: ಒಳಾಂಗಣ ವಿನ್ಯಾಸಕರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ನಿರುದ್ಯೋಗಿಗಳು ಕೆಲಸ ಹುಡುಕಲು ಯತ್ನಿಸಬಹುದು. ಶುಭಸಂಖ್ಯೆ: 1

ಮೀನ: ಮಕ್ಕಳಿಂದ ನಿಮಗೆ ಸಂತೋಷವಿದೆ. ಇಲ್ಲಿಯವರೆಗಿನ ವ್ಯಾವಹಾರಿಕ ಅಡೆತಡೆಗಳು ತಾನಾಗಿ ದೂರವಾಗಲಿವೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net