

ಮೇಷ: ಅತಿ ಅಹಂಕಾರ ಬೇಡ. ತಾನಂದುಕೊಂಡಿದ್ದೇ ಸತ್ಯವಾದುದು ಎಂದು ಮುಂದುವರಿದರೆ ತೊಂದರೆ ಎದುರಾಗಲಿದೆ. ಶುಭಸಂಖ್ಯೆ: 5
ವೃಷಭ: ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸುವಿರಿ. ಮಾತಾಪಿತೃಗಳನ್ನು ಗೌರವಿಸಿ. ಶುಭಸಂಖ್ಯೆ: 1
ಮಿಥುನ: ವಜ್ರ ವ್ಯಾಪಾರದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸದಿರಿ. ಮಾಡುವ ಕೆಲಸದಲ್ಲಿ ಕೂಡ ಒಂದು ಕ್ರಮ ಇರಲಿ. ಶುಭಸಂಖ್ಯೆ: 5
ಕಟಕ: ಭಗವಂತನ ಕೃಪೆಯಿಂದ ಅಧ್ಯಾತ್ಮದ ಒಲವು ಹೆಚ್ಚಾಗುವುದು. ಅಂತಮುಖಿಗಳಾಗಿ ದೇವರ ಧ್ಯಾನ ಮಾಡಿ. ಶುಭಸಂಖ್ಯೆ: 9
ಸಿಂಹ: ಸ್ವಯಂಕೃತ್ಯಗಳಿಂದ ಸಮಸ್ಯೆ ಎದುರಾದೀತು. ಸಾಲ ಮಾಡುವ ಸ್ಥಿತಿಯೂ ಬರಲಿದೆ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 3
ಕನ್ಯಾ: ಪ್ರೀತಿಯ ವಿಚಾರದಲ್ಲಿ ಮಿತ್ರರಿಂದ ಎಚ್ಚರಿಕೆ. ಹೆಚ್ಚಿನ ಧೈರ್ಯದ ಅಗತ್ಯ. ಇದರಿಂದ ಆರ್ಥಿಕ ಸಬಲತೆಯೂ ಲಭ್ಯ. ಶುಭಸಂಖ್ಯೆ: 7
ತುಲಾ: ಪದೇಪದೆ ಆಪಾದನೆ ಬಂದರೂ ದೇವರ ಕೃಪೆಯಿಂದ ಅದು ಸುಳ್ಳೆಂದು ಸಾಬೀತಾಗಲಿದೆ. ಸೂರ್ಯನ ಸ್ತುತಿ ಮಾಡಿ. ಶುಭಸಂಖ್ಯೆ: 8
ವೃಶ್ಚಿಕ: ಸಾಲ ತೀರಿಸಲು ನಿಮ್ಮ ಮೇಲೆ ಒತ್ತಡ ಬರುವ ಸಾಧ್ಯತೆ ಇದೆ. ಸ್ವಲ್ಪವಾದರೂ ಸಾಲ ತೀರಿಸುವುದು ಕ್ಷೇಮಕರ. ಶುಭಸಂಖ್ಯೆ: 4
ಧನಸ್ಸು: ಸದ್ಯದ ಗ್ರಹಸ್ಥಿತಿಗಳು ಸರಿಯಾಗಿ ಇಲ್ಲದ ಕಾರಣ ಹೆಚ್ಚು ಚಿಂತಿಸದೆ ಮನಃಪೂರ್ವಕವಾಗಿ ದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 6
ಮಕರ: ಸ್ವಾವಲಂಬಿಗಳಾಗಿದ್ದರೆ ಬೇರೆ ಯಾರ ಹಂಗೂ ಬೇಡ. ಆದರೆ ವಿಪರೀತವಾದ ಖರ್ಚು ಮಾಡಲು ಹೋಗದಿರಿ. ಶುಭಸಂಖ್ಯೆ: 2
ಕುಂಭ: ಗುರುಜನರ ಆತಿಥ್ಯ ಕೈಗೊಳ್ಳುವಿರಿ. ಅವರ ಹಾರೈಕೆಯಿಂದ ನಿಮಗೆ ಒಳಿತಾಗುವುದು. ವಿಷ್ಣು ಸಹಸ್ರನಾಮ ಪಠಿಸಿ. ಶುಭಸಂಖ್ಯೆ: 9
ಮೀನ: ಆಕಸ್ಮಿಕ ಪ್ರಯಾಣ ಎದುರಾದರೂ ಎಚ್ಚರಿಕೆಯಿಂದ ವಾಹನ ನಡೆಸಿ. ಭವಿಷ್ಯದ ಚಿಂತೆಯಿಂದ ಒತ್ತಡ ಹೆಚ್ಚಲಿದೆ. ಶುಭಸಂಖ್ಯೆ: 2