ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಧನಪ್ರಾಪ್ತಿಯಾಗಲಿದೆ..

Nitya-Bhavishya-vvani-1-2-1-1
Published on

ಮೇಷ: ಕಚೇರಿಯಲ್ಲಿ ಕೆಲಸದ ಒತ್ತಡ. ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 3

ವೃಷಭ: ಭಾಗ್ಯ ಭಾವದ ಗ್ರಹಕೂಟದಿಂದಾಗಿ ಕಾರ್ಯಸಿದ್ದಿ. ನಟರಿಗೆ ವಿಶೇಷ ಅವಕಾಶ ಕಾದಿದೆ. ದಿನದ ಕೊನೆಯಲ್ಲಿ ಆಯಾಸ. ಶುಭಸಂಖ್ಯೆ: 3

ಮಿಥುನ: ಅನಾರೋಗ್ಯದಿಂದಾಗಿ ಅಸಮಾಧಾನ. ನಿರೀಕ್ಷಿಸಿದಂತೆ ಯಶಸ್ಸು ಸಿಗದಿರುವುದಕ್ಕೆ ಬೇಸರ. ಆತ್ಮೀಯರ ಸಲಹೆ. ಶುಭಸಂಖ್ಯೆ: 8

ಕಟಕ: ಗೃಹ ನಿರ್ವಣದ ಕನಸು ಸಾಕಾರ. ಪತ್ನಿಯ ಸಲಹೆಯನ್ನು ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದಿರಿ. ಶುಭಸಂಖ್ಯೆ: 9

ಸಿಂಹ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ರಾಜಕಾರಣಿಗಳಿಗೆ ವಿಶೇಷ. ಕಲಾವಿದರಿಗೆ ಅದೃಷ್ಟ. ಸಂಜೆಯ ಹೊತ್ತಿಗೆ ಶುಭವಾರ್ತೆ. ಶುಭಸಂಖ್ಯೆ: 9

ಕನ್ಯಾ: ಭೂಮಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತೀರ್ಪ. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 6.

ತುಲಾ: ಮಾತೃಮೂಲವಾದಂತಹ ಧನಪ್ರಾಪ್ತಿ. ಸಮಾಧಾನ. ಮನೆ ಕಟ್ಟುವ ಕಾರ್ಯಕ್ಕೆ ಚಾಲನೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಶುಭಸಂಖ್ಯೆ: 5

ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಬೇಡಿ. ಮನೆಗೆ ಅಪರೂಪದ ಅತಿಥಿಯ ಆಗಮನ. ಸುಖ ಭೋಜನ. ಶುಭಸಂಖ್ಯೆ: 2.

ಧನಸ್ಸು: ಆರ್ಥಿಕ ಅಡಚಣೆ. ಮಾತನಾಡುವ ಮುನ್ನ ಯೋಚಿಸಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 9

ಮಕರ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಂಬಂಧಿಕರಿಂದ ಸಲಹೆ. ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 6.

ಕುಂಭ: ವಿದ್ಯಾರ್ಥಿಗಳ ಕನಸಿನ ಸಾಕಾರ. ಸೋಮಾರಿತನ ನಿಮ್ಮ ಶತ್ರು. ಚುರುಕಾಗಿರಲು ಯತ್ನಿಸಿ. ದಿನಾಂತ್ಯದಲ್ಲಿ ಶುಭವಾಗಲಿದೆ. ಶುಭಸಂಖ್ಯೆ: 4

ಮೀನ : ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿಯರ ಮನೆಗೆ ಭೇಟಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net