ಈ ರಾಶಿಯವರು ಇಂದು ವಾಹನ ಚಾಲನೆಯಲ್ಲಿ ಎಚ್ಚರದಿಂದಿರಲಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪೀಠೋಪಕರಣಗಳ ವ್ಯಾಪಾರ ವಹಿವಾಟು ಮಾಡುವವರಿಗೆ ಪ್ರಗತಿ ಇದೆ. ಅಪವಾದಗಳು ಬರಬಹುದು ಎಚ್ಚರ. ಶುಭಸಂಖ್ಯೆ: 7

ವೃಷಭ: ಆಸ್ತಿ ಒತ್ತಡದಿಂದ ಪಾರಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 6

ಮಿಥುನ: ಕೃಷಿಕರಿಗೆ ನಿರೀಕ್ಷಿತ ಆದಾಯ ಬರಲಿದೆ. ಸಾಂಸಾರಿಕ ಜೀವನ ಉತ್ತಮಗೊಳ್ಳಲಿದೆ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ:1

ಕಟಕ: ದಿಡೀರನೆ ಹಣಕಾಸಿನ ಸಮಸ್ಯೆ ಬರಬಹುದು. ಆದರೆ ಕುಟುಂಬದ ಸಹಕಾರದಿಂದ ಪರಿಹಾರ ಆಗುತ್ತದೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7

ಸಿಂಹ: ಹಿರಿಯರ ಮಾತನ್ನು ಆಲಿಸುವ ವ್ಯವಧಾನವಿರಲಿ. ಹಿತಶತ್ರುಗಳಿಂದ ನಿಮ್ಮ ಬಗ್ಗೆ ಅಪಪ್ರಚಾರ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 3

ಕನ್ಯಾ: ವಿವಾಹ ವಿಷಯದ ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸಿ. ಕಚೇರಿಯಲ್ಲಿ ಒತ್ತಡ. ಶುಭಸಂಖ್ಯೆ: 4

ತುಲಾ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ನನೆಗುದಿಗೆ ಬಿದ್ದ ಆಸ್ತಿ ವಿಚಾರಕ್ಕೆ ನ್ಯಾಯಾಲಯದಿಂದ ತೀರ್ಪ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 2

ವೃಶ್ಚಿಕ: ಆಸ್ತಿ ವಿವಾದದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ತರುವ ಘಟನೆ ನಡೆದು ಮನಸ್ಸಿಗೆ ನೋವು. ಹಳೆಯ ಸ್ನೇಹಿತನ ಭೆೇಟಿ. ಶುಭಸಂಖ್ಯೆ: 7

ಧನುಸ್ಸು: ನಿಮ್ಮ ಶ್ರಮಕ್ಕೆ ತಕ್ಕ ಫಲವಿದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು, ಹುಷಾರು. ಅನವಶ್ಯಕ ಖರ್ಚು ನಿಯಂತ್ರಿಸಿ. ಶುಭಸಂಖ್ಯೆ: 5

ಮಕರ: ನೆರೆಯವರೊಂದಿಗೆ ಕಲಹ. ಆಹಾರ ಸೇವನೆಯ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ. ಕಚೇರಿಯಲ್ಲಿ ಒತ್ತಡ. ಶುಭಸಂಖ್ಯೆ: 4

ಕುಂಭ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಸಹೋದರಿಯರಿಂದ ಸಹಾಯ ಸಿಗಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 3

ಮೀನ: ವಿದ್ಯಾರ್ಥಿಗಳಿಗೆ ಸೋಲು. ಭೂ ವ್ಯವಹಾರದಲ್ಲಿ ಲಾಭ. ಆತ್ಮೀಯರ ವಿಯೋಗ ಸಾಧ್ಯತೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net