ಈ ರಾಶಿಯವರಿಗಿಂದು ಸಂಗಾತಿಯಿಂದ ಲಾಭವಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ನಷ್ಟಗಳು. ಸಾಲದ ಚಿಂತೆ ಕಾಡಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರಲ್ಲಿ ಸೂಕ್ತ ಸಮಾಲೋಚನೆ ಮಾಡಿ. ಶುಭಸಂಖ್ಯೆ: 9

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಡೆಯಿರಿ. ವ್ಯವಹಾರದಲ್ಲಿ ಹಿನ್ನಡೆ. ಪ್ರಯಾಣದಲ್ಲಿ ಸಮಸ್ಯೆಯಾಗಬಹುದು. ಶುಭಸಂಖ್ಯೆ: 2

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದ ಅನುಭವ. ಆಲಸ್ಯ ಬಿಡಿ. ಬಂಧುಗಳಿಂದ ಸಹಾಯ. ಮಕ್ಕಳ ಜೀವನದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಶುಭಸಂಖ್ಯೆ: 3

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣಲಿದೆ. ಮಾನಸಿಕ ಅಸಮತೋಲನ. ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ: 5

ಸಿಂಹ: ಬಂಧು-ಬಾಂಧವರು ದೂರವಾದಾರು. ದೈಹಿಕ ಅಸಮರ್ಥತೆ ಕಾಡಲಿದೆ. ಧ್ಯಾನ ಮಾಡಿ. ಆತ್ಮವಿಶ್ವಾಸದಿಂದ ಜಯ. ಶುಭಸಂಖ್ಯೆ: 7

ಕನ್ಯಾ: ಆರ್ಥಿಕ ಹಿನ್ನಡೆ ಉಂಟಾಗಿ ಮಾನಸಿಕ ವೇದನೆ. ಮಾತಿನಿಂದ ಸಮಸ್ಯೆ ಮಾಡಿಕೊಳ್ಳದಿರಿ. ಹಳೆಯ ನೆನಪುಗಳು ಕಾಡುವವು. ಶುಭಸಂಖ್ಯೆ:2

ತುಲಾ: ವ್ಯವಹಾರದಲ್ಲಿ ಹಿನ್ನಡೆ ಉಂಟಾಗಿ ಬೇಸರ. ಅಪಕೀರ್ತಿ ಬರಬಹುದು. ಮನದಲ್ಲಿ ಸಂಕಟ. ಯೋಗ, ಧ್ಯಾನದ ಮೊರೆಹೋಗಿ. ಶುಭಸಂಖ್ಯೆ:5

ವೃಶ್ಚಿಕ: ಗೆಲುವು ಸಾಧಿಸುವ ಹಂಬಲ. ಸಂಗಾತಿಯಿಂದ ಲಾಭವಾಗಲಿದೆ. ಕೆಟ್ಟ ಆಲೋಚನೆಗಳು ಬರಬಹುದು, ಅದನ್ನು ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 1

ಧನುಸ್ಸು: ಪ್ರಯಾಣದಲ್ಲಿ ಅನುಕೂಲಕರ. ತಂದೆಯಿಂದ ಸಹಕಾರ ದೊರೆಯಲಿದೆ. ಉದ್ಯೋಗ ನಷ್ಟಗಳು ಉಂಟಾದರೆ ಧೃತಿಗೆಡಬೇಡಿ. ಶುಭಸಂಖ್ಯೆ: 6

ಮಕರ: ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು ತಲೆದೋರಬಹುದು. ಉದ್ಯೋಗ ನಷ್ಟ. ಚಿಂತೆ ಬೇಡ ಮುಂದೆ ಒಳ್ಳೆಯದಾಗಲಿದೆ. ಶುಭಸಂಖ್ಯೆ: 6

ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಸುಖದಿಂದ ವಂಚಿತವಾದ ಅನುಭವ. ಮಾನಸಿಕ ದೌರ್ಬಲ್ಯ ಕಾಡೀತು. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 9

ಮೀನ: ದಾಂಪತ್ಯದಲ್ಲಿ ಸಮಸ್ಯೆ. ವಿವೇಚನೆ ಕಳೆದುಕೊಳ್ಳಬೇಡಿ. ದುರ್ವಾರ್ತೆ ಕೇಳಬೇಕಾದೀತು. ಬಂಧುಗಳ ಜೀವನದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net