

ಮೇಷ: ಕೌಟುಂಬಿಕ ಸ್ಥಿತಿ ಆಹ್ಲಾದಕರವಾಗಿರುತ್ತದೆ. ಆಲಸ್ಯವನ್ನು ನಿಯಂತ್ರಣದಲ್ಲಿಡಿ, ಅಜಾಗರೂಕತೆಯಿಂದ ದೂರವಿರಿ. ಶುಭಸಂಖ್ಯೆ: 9
ವೃಷಭ: ಹೆಚ್ಚು ಒತ್ತಡ ಎದುರಿಸಬೇಕಾಗುವುದು. ಆಕಸ್ಮಿಕ ಧನಾಗಮವಾಗಿ ಸಂತೋಷ. ಆತುರದ ನಿರ್ಧಾರ ಕೈಗೊಳ್ಳುವುದು ಸಲ್ಲದು. ಶುಭಸಂಖ್ಯೆ: 1
ಮಿಥುನ: ದಾಂಪತ್ಯದಲ್ಲಿ ಸಂತಸ. ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ ಬರುವ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಶುಭಸಂಖ್ಯೆ: 5
ಕಟಕ: ಮನಸ್ಸಿನಲ್ಲಿ ಅಸ್ಥಿರತೆ. ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟವಾದೀತು, ಎಚ್ಚರ. ಯಶಸ್ಸನ್ನು ಪಡೆಯುವ ಸಾಧ್ಯತೆ ಹೆಚ್ಚು ಗೋಚರ. ಶುಭಸಂಖ್ಯೆ: 7
ಸಿಂಹ: ಅನಗತ್ಯ ಊಹಾಪೋಹಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಣ್ಣ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3
ಕನ್ಯಾ: ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು. ಗಾಯಗೊಳ್ಳುವ ಸಾಧ್ಯತೆ, ಎಚ್ಚರದಿಂದಿರಿ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ: 7
ತುಲಾ: ಕುಟುಂಬದಿಂದ ಬೆಂಬಲ. ಅಧ್ಯಯನದಲ್ಲಿ ತೊಂದರೆ. ತಾಯಿಯ ಆರೋಗ್ಯ ವಿಷಯದಲ್ಲಿ ಎಚ್ಚರ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2
ವೃಶ್ಚಿಕ: ಸಂಬಂಧಗಳಲ್ಲಿ ಉದ್ವಿಗ್ನತೆ. ಹಣಕಾಸಿನ ಮೂಲಗಳು ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಕಾಲಹರಣ ಮಾಡುವುದು ಸೂಕ್ತವಲ್ಲ. ಶುಭಸಂಖ್ಯೆ: 6
ಧನುಸ್ಸು: ವ್ಯಾಪಾರಿಗಳಿಗೆ ಸರಾಸರಿ ಲಾಭ. ವೃತ್ತಿ ಜೀವನದಲ್ಲಿ ಏಳಿಗೆ ಕಾಣುವಿರಿ. ಕೆಲಸದಲ್ಲಿ ಆತುರತೆ. ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 4
ಮಕರ: ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಆತ್ಮವಿಶ್ವಾಸದಿಂದ ಅಧಿಕ ಲಾಭ ಪಡೆಯುವಿರಿ. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಶುಭಸಂಖ್ಯೆ: 6
ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ. ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ. ನಿರೀಕ್ಷಿಸಿದ ಆರ್ಥಿಕ ಸಹಾಯ ಲಭಿಸುವುದು. ಶುಭಸಂಖ್ಯೆ: 4
ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ ಉಂಟಾಗಲಿದೆ. ಉಳಿತಾಯದ ಮಹತ್ವ ತಿಳಿಯಲಿದೆ. ಉನ್ನತ ಸ್ಥಾನಮಾನ ದೊರೆತು ಸಂತಸ. ಶುಭಸಂಖ್ಯೆ: 1