ಈ ರಾಶಿಯವರಿಗೆ ಇಂದು ಋಣಮುಕ್ತ ಆಗುವ ಅವಕಾಶ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾಲ ಮರುಪಾವತಿ ಸಾಧ್ಯತೆ. ಕಚೇರಿಯಲ್ಲಿ ಸಹನೆಯಿಂದ ಇರುವುದು ಒಳಿತು. ಮಹಿಳಾ ವ್ಯಾಪಾರಸ್ಥರಿಗೆ ಕಿರಿಕಿರಿ. ಶುಭಸಂಖ್ಯೆ: 2

ವೃಷಭ: ಮನೆ ಖರೀದಿ ನಿರ್ಧಾರ. ದುಷ್ಟರ ಸಹವಾಸದಿಂದ ಅಪವ್ಯಯ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 2

ಮಿಥುನ: ಕೃಷಿ ಉಪಕರಣ ಖರೀದಿ. ಸಗಟು ವ್ಯಾಪಾರದಲ್ಲಿ ಅನುಕೂಲ. ಹೋಟೆಲ್ ಉದ್ಯಮಿಗಳಿಗೆ ನಷ್ಟ. ನಟರಿಗೆ ವಿಶೇಷ ದಿನ. ಶುಭಸಂಖ್ಯೆ: 9

ಕಟಕ: ಶ್ರಮಕ್ಕೆ ತಕ್ಕುದಾದ ಫಲ. ಮಗಳ ಉನ್ನತ ವಿದ್ಯಾಭ್ಯಾಸಕ್ಕೆ ತೀರ್ಮಾನ. ಆದಾಯ ಮತ್ತು ವೆಚ್ಚ ದಲ್ಲಿ ಅಸಮತೋಲನ. ಶುಭಸಂಖ್ಯೆ: 3

ಸಿಂಹ: ಅವಿವಾಹಿತರಿಗೆ, ಸಂತಾನ ಅಪೇಕ್ಷಿಗಳಿಗೆ ಶುಭಸುದ್ದಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 8

ಕನ್ಯಾ: ಅಪರಿಚಿತರಿಂದ ಮೋಸ. ಪ್ರಭಾವಿ ವ್ಯಕ್ತಿಗಳ ಭೇಟಿ. ಸಾರ್ವಜನಿಕ ರಂಗದಲ್ಲಿ ಅವಮಾನ. ರಾಜಕೀಯದಲ್ಲಿ ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 9

ತುಲಾ: ಕಚೇರಿ ಕಾರ್ಯಗಳಲ್ಲಿ ಯಶಸ್ವಿ. ಸಾಲಗಾರರಿಂದ ಕಿರುಕುಳ. ವ್ಯಾಪಾರಸ್ಥರಿಗೆ ಕಷ್ಟ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 4

ವೃಶ್ಚಿಕ: ಹಿರಿಯ ಅಧಿಕಾರಿಗಳಿಂದ ಕಾರ್ಯದೊತ್ತಡ. ನಂಬಿಸಿ ಕೈಕೊಡುವ ಭೀತಿ. ಋಣಮುಕ್ತ ಆಗುವ ಅವಕಾಶ. ಆಕಸ್ಮಿಕ ಆಘಾತ. ಶುಭಸಂಖ್ಯೆ: 7

ಧನುಸ್ಸು: ತಂದೆಯ ಆರೋಗ್ಯದಲ್ಲಿ ಚೇತರಿಕೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ವಕೀಲರಿಗೆ, ಸಾಹಿತಿಗಳಿಗೆ ವಿಶೇಷ ದಿನ. ಶುಭಸಂಖ್ಯೆ: 6

ಮಕರ: ಲೋಹದ ವ್ಯಾಪಾರಿಗಳಿಗೆ ನಷ್ಟ. ವ್ಯವಸಾಯಗಾರರಿಗೆ ಅಧಿಕ ಲಾಭ. ಅಭ್ಯಾಗತರ ಆಗಮನ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 9

ಕುಂಭ: ಭೂ ವ್ಯವಹಾರಗಳಲ್ಲಿ ಧನಲಾಭ. ಆಸ್ತಿ ವಿವಾದದ ಅಂತ್ಯ. ಸಂಗಾತಿಯ ಕಡೆಯವರಿಂದ ಕಿರುಕುಳ. ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 1

ಮೀನ: ಮಹಿಳಾ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಕಾರ್ಯದೊತ್ತಡ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಪಾಲುದಾರರಿಂದ ಮೋಸ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net